Advertisement

ರಿಯೋ ಡಿ ಜನೈರೊ ಟೆನಿಸ್‌ ಕಣದಲ್ಲಿ ಥೀಮ್‌, ಸೆಶಿನಾಟೊ

12:30 AM Feb 19, 2019 | |

ರಿಯೋ ಡಿ ಜನೈರೊ: ಆರ್ಜೆಂಟೀನಾ ಓಪನ್‌ ಕೂಟವನ್ನು ಮುಗಿಸಿರುವ ಡೊಮಿನಿಕ್‌ ಥೀಮ್‌, ಮಾರ್ಕೊ ಸೆಶಿನಾಟೊ, ಡೀಗೊ ಶಾರ್ಟ್ಸ್ಮನ್‌ ಮೊದಲಾದವರೆಲ್ಲ “ರಿಯೋ ಡಿ ಜೆನೈರೊ ಓಪನ್‌’ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಕೂಟ ಸೋಮವಾರ ಮೊದಲ್ಗೊಂಡಿದ್ದು, ಫೆ. 24ರ ತನಕ ಸಾಗಲಿದೆ.

Advertisement

ಡೊಮಿನಿಕ್‌ ಥೀಮ್‌ ಈ ಕೂಟದಲ್ಲಿ ಅಗ್ರ ಶ್ರೇಯಾಂಕಿತ ಆಟಗಾರನಾಗಿದ್ದು, 2017ರಲ್ಲಿ ಚಾಂಪಿಯನ್‌ ಆಗಿದ್ದರು.
ಆರ್ಜೆಂಟೀನಾ ಓಪನ್‌ ಕೂಟದ ಸೆಮಿಫೈನಲ್‌ನಲ್ಲಿ ಸೋತ ಥೀಮ್‌ ಈ ಋತುವಿನ ಮೊದಲ ಪ್ರಶಸ್ತಿ ಜಯಿಸುವ ಉತ್ಸಾಹದಲ್ಲಿದ್ದಾರೆ. ಇವರ ಮೊದಲ ಎದುರಾಳಿ ಸರ್ಬಿಯಾದ ಲಾಸ್ಲೊ ಜೆರೆ.

ಆರ್ಜೆಂಟೀನಾ ಕೂಟದ ಮೊದಲ ಸುತ್ತಿನಲ್ಲೇ ಎಡವಿದ್ದ ಇಟಲಿಯ ಫ್ಯಾಬಿಯೊ ಫಾಗ್ನಿನಿ ಇಲ್ಲಿ 2ನೇ ಶ್ರೇಯಾಂಕದೊಂದಿಗೆ ಆಟಕ್ಕಿಳಿಯಲಿದ್ದಾರೆ. ಆರ್ಜೆಂಟೀನಾ ಓಪನ್‌ ಚಾಂಪಿಯನ್‌ ಮಾರ್ಕೊ ಸೆಶಿನಾಟೊ ಮೊದಲ ಸುತ್ತಿನ ಪಂದ್ಯದಲ್ಲಿ ಸ್ಲೊವೇನಿಯಾದ ಅಲ್ಜಾಸ್‌ ಬೆನೆಡ್‌ ವಿರುದ್ಧ ಆಡಲಿದ್ದಾರೆ. ಇನ್ನೊಂದು ಪಂದ್ಯದಲ್ಲಿ ಮಾಜಿ ಚಾಂಪಿಯನ್‌ ಶಾರ್ಟ್ಸ್ಮನ್‌ ಮತ್ತು ಉರುಗ್ವೆಯ ಪಾಬ್ಲೊ ಕ್ಯುವಾಸ್‌ ಮುಖಾಮುಖೀಯಾಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next