Advertisement

ವರ್ತುಲ ಚಿಕಿತ್ಸೆ

12:30 AM Jan 30, 2019 | |

ಏನೆಲ್ಲಾ ಮೇಕಪ್‌ ಮಾಡಿದರೂ, ಎಷ್ಟೇ ಸುಂದರವಾಗಿ ಕಂಡರೂ ಕಣ್ಣಿನ ಸುತ್ತ ಕಪ್ಪು ವರ್ತುಲ ಆವರಿಸಿದ್ದರೆ ಸೌಂದರ್ಯ ಕೆಡುವುದರಲ್ಲಿ ಸಂಶಯವಿಲ್ಲ. ಈ ಕಪ್ಪು ವರ್ತುಲವನ್ನು ಹೋಗಲಾಡಿಸಲು ಏನೇನೋ ಕಸರತ್ತು ನಡೆಸುವವರಿದ್ದಾರೆ. ಸೌಂದರ್ಯವರ್ಧಕಗಳ ಮೇಲೆ ಹಣ ಚೆಲ್ಲುವವರಿದ್ದಾರೆ. ಆದರೆ, ಕಪ್ಪು ವರ್ತುಲ ಉಂಟಾಗುವ ಕಾರಣಗಳನ್ನು ಅರಿತು, ನಿತ್ಯ ಜೀವನದಲ್ಲಿ ಕೆಲವು ಸಲಹೆ ಪಾಲಿಸಿದರೆ, ಅದಕ್ಕೂ ಪರಿಹಾರ ಸಿಗುತ್ತೆ…

Advertisement

ಕಪ್ಪಾಗಲು ಏನು ಕಾರಣ?
– ಸರಿಯಾಗಿ ನಿದ್ರಿಸದಿರುವುದು
– ದೇಹದಲ್ಲಿ ನೀರಿನಂಶದ ಕೊರತೆ
– ಅತಿಯಾದ ಕಂಪ್ಯೂಟರ್‌, ಮೊಬೈಲ್‌ ಬಳಕೆ
– ಹತ್ತಿರ ಕುಳಿತು, ಗಂಟೆಗಟ್ಟಲೆ ಟಿವಿ ವೀಕ್ಷಣೆ
– ಒತ್ತಡ/ ಅನುವಂಶೀಯವಾಗಿ
– ಪೌಷ್ಟಿಕಾಂಶಗಳ ಕೊರತೆ

ಪರಿಹಾರ ಏನು?
– ರಾತ್ರಿ ಮಲಗುವಾಗ ಕಣ್ಣಿನ ಸುತ್ತಲೂ ಜೇನುತುಪ್ಪ ಹಚ್ಚಿ ಮಲಗುವುದರಿಂದ ಕಪ್ಪು ಕಲೆ ಕಡಿಮೆಯಾಗುತ್ತದೆ.
– ಸೌತೆಕಾಯಿ ರಸವನ್ನು ಜೇನಿನೊಂದಿಗೆ ಮಿಶ್ರಣ ಮಾಡಿ ಹಚ್ಚಬಹುದು.
– ಬಾಳೆಹಣ್ಣನ್ನು ಪೇಸ್ಟ್ ನಂತೆ ಮಾಡಿ ಜೇನಿನೊಂದಿಗೆ ಬೆರೆಸಿ ಹಚ್ಚುವುದೂ ಪರಿಣಾಮಕಾರಿ.
– ಲಿಂಬೆಹಣ್ಣಿನ ರಸವನ್ನು ಜೇನಿನೊಂದಿಗೆ ಕಲಸಿ ಹಚ್ಚಿ.
– ಕಣ್ಣಿನ ಮೇಲೆ ಸೌತೆಕಾಯಿ ಅಥವಾ ಆಲೂಗಡ್ಡೆಯ ತುಣುಕನ್ನು ಇಟ್ಟುಕೊಂಡು ವಿಶ್ರಾಂತಿ ಪಡೆಯಿರಿ.
– ಬಾದಾಮಿ ಎಣ್ಣೆ ಅಥವಾ ನೆನೆಸಿದ ಬಾದಾಮಿಯ ಸಿಪ್ಪೆ ತೆಗೆದು, ಅರೆದು ಪೇಸ್ಟ್‌ ಮಾಡಿ ಹಚ್ಚಿ.
– ಅನಾನಸ್‌ ಹಣ್ಣಿನ ರಸದ ಜೊತೆಗೆ ಅರಿಶಿನ ಸೇರಿಸಿ ಹಚ್ಚಬಹುದು.
– ದಿನನಿತ್ಯ 10-12 ಲೋಟ ನೀರು ಕುಡಿಯಿರಿ.
– ಪುದೀನಾ ಸೊಪ್ಪಿನ ರಸ ಹಿಂಡಿ ಹಚ್ಚಿದರೆ ಕಪ್ಪು ಕಲೆ ಮಾಯ.
– ಟೊಮೇಟೊ ರಸವನ್ನು ಹಚ್ಚಬಹುದು.
– ದಿನಕ್ಕೆ 8 ಗಂಟೆ ನಿದ್ದೆ, 10 ಲೋಟ ನೀರು ಕುಡಿಯಿರಿ.

ಹರ್ಷಿತಾ ಕುಲಾಲ್‌ ಕಾವು

Advertisement

Udayavani is now on Telegram. Click here to join our channel and stay updated with the latest news.

Next