Advertisement

ರಿಮೇಕ್‌ಗೆ ಅವಕಾಶ ಕೊಟ್ಟಿರುವುದರಿಂದ  ಡಬ್ಬಿಂಗ್‌ ಬೇಡ

12:38 PM Mar 13, 2017 | Team Udayavani |

ಕುಂದಾಪುರ: ಪರಭಾಷಾ ಚಿತ್ರಗಳನ್ನು  ರಿಮೇಕ್‌ ಮಾಡಲು ಅವಕಾಶ ನೀಡಿರುವುದರಿಂದ ಡಬ್ಬಿಂಗ್‌ನ ಅಗತ್ಯ ಇಲ್ಲ.   ರಿಮೇಕ್‌ ಮಾಡುವುದರ ಮೂಲಕ ಆ ಚಿತ್ರಗಳಲ್ಲಿ ನಮ್ಮ ಸಂಸ್ಕೃತಿ, ಸಂಪ್ರ ದಾಯಗಳನ್ನು  ಅಳವಡಿಕೊಳ್ಳಬಹುದು ಆದರೆ ಡಬ್ಬಿಂಗ್‌ ಮಾಡುವುದರಿಂದ  ಕನ್ನಡದ ಪ್ರತಿಭೆಗಖಳಿಗೆ ಅವಕಾಶದಿಂದ ವಂಚಿತರಾಗುತ್ತಾರೆ, ತಂತ್ರಜ್ಞರಿಗೆ ಅನ್ಯಾಯವಾಗುತ್ತದೆ ಎಂದು  ಮಾಜಿ ಶಾಸಕ , ಚಿತ್ರ ನಟ ಬಿ.ಸಿ. ಪಾಟೀಲ್‌ ಹೇಳಿದರು.

Advertisement

ಅವರು  ರವಿವಾರ  ಕುಂದಾಪುರದ ವೈದ್ಯ ಡಾ| ಉಮೇಶ್‌ ಭಟ್‌ ಅವರ “ಕಲರ್ಸ್‌ ಆಫ್‌ ದಿ ರೈನ್‌’ ಕಾದಂಬರಿ ಬಿಡುಗಡೆಗೆ ಕುಂದಾಪುರಕ್ಕೆ ಬಂದಾಗ ಆಯೋಜಿಸಲಾದ   ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಳೆದ  ಎರಡು ವರ್ಷಗಳಲ್ಲಿ ಕನ್ನಡ ಚಿತ್ರರಂಗಕ್ಕೆ ಯುವ ಕಲಾವಿದರು ಬರುತ್ತಿರುವುದು ತುಂಬಾ ಖುಷಿ ಕೊಟ್ಟಿದೆ. ಹೊಸ ಕಲಾವಿದರ ಆಗಮನದ ಬಳಿಕ ಚಿತ್ರರಂಗದಲ್ಲಿ  ಮತ್ತೂಮ್ಮೆ  ಹೊಸ ಅಲೆ ಎದ್ದಿದೆ. ಇತ್ತೀಚೆಗೆ ಬಿಡುಗಡೆಗೊಂಡ ಕಿರಿಕ್‌ ಪಾರ್ಟಿ ಇದಕ್ಕೆ ಒಂದು ಉದಾಹರಣೆೆ ಎಂದರು.

ಪನ್ನಗ ನಾಗಭರಣ ನಿರ್ದೇಶನದಲ್ಲಿ “ಹ್ಯಾಪಿ ನ್ಯೂ ಇಯರ್‌’ ಚಿತ್ರ ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಗೊಳ್ಳಲಿದೆ.  ಈ ಚಿತ್ರದಲ್ಲಿ ನಾನು ಸೇರಿದಂತೆ ಸಾಯಿಕುಮಾರ್‌, ದಿಗಂತ್‌, ಧನಂಜಯ್‌, ವಿಜಯ ರಾಘವೇಂದ್ರ, ನನ್ನ ಪುತ್ರಿ ಸೃಷ್ಟಿ ಪಾಟೀಲ್‌ ಅಭಿನಯಿಸಿದ್ದಾರೆ ಎಂದರು.

ಆಡಳಿತ ವಿರೋಧಿ ಅಲೆ  
ಪಂಚರಾಜ್ಯ ಚುನಾವಣೆಯಲ್ಲಿ ಆಡಳಿತ ವಿರೋಧಿ ಮತ ಚಲಾವಣೆಯಾಗಿದೆ.  ಮುಂಬರುವ ಚುನಾವಣೆಯಲ್ಲಿ   ಕಾಂಗ್ರೆಸ್‌ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ಮಾಡಿ ಹಾವೇರಿ ಜಿಲ್ಲೆಯ ಹಿರೆಕೆರೂರಿಂದ ಚುನಾವಣೆಗೆ ಸ್ಪರ್ಧೆ ನಡೆಸಲಿದ್ದೇನೆ ಎಂದು ಹೇಳಿದ  ಬಿ.ಸಿ. ಪಾಟೀಲ್‌ ಅವರು ಮುಂದಿನ ಉಪ ಚುನಾವಣೆಯಲ್ಲಿ ನಂಜನಗೂಡು ಹಾಗೂ ಗುಂಡ್ಲುಪೇಟೆಯಲ್ಲಿ  ಕಾಂಗ್ರೇಸ್‌ ಜಯಭೇರಿ ಬಾರಿಸಲಿದೆ ಎಂದರು. 
 
ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ ಪಕ್ಷದಲ್ಲಿದ್ದಾಗ  ಲೇವಡಿ ಮಾಡಿದ್ದ ಬಿಜೆಪಿಯವರು ಮತ್ತೆ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುತ್ತಿರುವುದು ನಗೆಪಾಟಲಾಗುತ್ತದೆ. ಕೃಷ್ಣ ಅವರು  ಕಾಂಗ್ರೆಸ್‌ನಲ್ಲಿ  ಅನುಭವಿಸಿದಷ್ಟು  ಅಧಿಕಾರವನ್ನು ಯಾರೂ ಅನುಭವಿಸಿಲ್ಲ. ಅಂಥವರು ಪಕ್ಷ ಬಿಡಬಾರದಿತ್ತು. ಅವರು ಮಾರ್ಗದರ್ಶಕ ರಾಗಬೇಕೇ ಹೊರತು ಮಾರಕವಾಗಬಾರದು ಎಂದು ಪಾಟೀಲ್‌ ಹೇಳಿದ್ದಾರೆ.

Advertisement

ಈ ಸಂದರ್ಭ ಉಪಸ್ಥಿತರಿದ್ದ ಡಾ| ಉಮೇಶ್‌ ಭಟ್‌   ವೈದ್ಯಕೀಯ ಶಿಕ್ಷಣದಲ್ಲಿ ಮುಂದುವರಿಯುತ್ತಿರುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ವಿಷಯ ಏಕೆ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ನನ್ನ ಕಿರಿಯರಿಗೆ ಮನದಟ್ಟು ಮಾಡುವ ಉದ್ದೇಶದಿಂದ  ಬರೆದಿರುವ ಪುಸ್ತಕದ ಕುರಿತಾಗಿ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ  ಪತ್ರಕರ್ತ  ಯು.ಎಸ್‌. ಶೆಣೈ ಉಪಸ್ಥಿತರಿದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next