ಮಂಗಳೂರು: ನಗರದ ಬೆಂದೂರು ಎಸ್‌ಸಿಎಸ್ ಆಸ್ಪತ್ರೆ ಎದುರಿನ ಫ್ಲ್ಯಾಟ್‌ನ ನಿವಾಸಿ, ವಿವಾಹಿತೆ ಶಮಾ ರೋಶನ್ (31) ಅವರು ಮೇ 10ರಂದು ಸಂಜೆ 4.30ಕ್ಕೆ ದಿನಸಿ ಅಂಗಡಿಗೆ ಹೋಗಿ ಬರುವುದಾಗಿ ತಾಯಿಗೆ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ ಎಂದು ಆಕೆಯ ತಂದೆ ಕದ್ರಿ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪತ್ತೆಯಾದಲ್ಲಿ ಕದ್ರಿ ಠಾಣೆಗೆ ಮಾಹಿತಿ ನೀಡಲು ಕೋರಲಾಗಿದೆ.
Advertisement
ಪುದುವೆಟ್ಟು: ಕಾರು ಮರಕ್ಕೆ ಢಿಕ್ಕಿಬೆಳ್ತಂಗಡಿ: ಸೌತಡ್ಕದಿಂದ ಶಿರ್ಲಾಲು ಕಡೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪುದುವೆಟ್ಟು ಕ್ರಾಸ್ ಬಳಿ ಮರಕ್ಕೆ ಢಿಕ್ಕಿಯಾಗಿದೆ.
ಗಂಗೊಳ್ಳಿ: ನಿವೃತ್ತ ಶಿರಸ್ತೇದಾರ್ ಗಂಗೊಳ್ಳಿಯ ಜಿ. ಭಾಸ್ಕರ ಕಲೈಕಾರ್ ಅವರು ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಚುನಾವಣೆಗೆ ಸಂಬಂಧಪಟ್ಟಂತೆ ಕೇಳಿದ ಮಾಹಿತಿಯನ್ನು ನಿಗದಿತ ಅವಧಿಯೊಳಗೆ ನೀಡದ ಕುಂದಾಪುರ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕಿ ಚಂದ್ರಪ್ರತಿಮಾ ಅವರಿಗೆ 10 ಸಾ. ರೂ. ದಂಡ ವಿಧಿಸಿ ರಾಜ್ಯ ಮಾಹಿತಿ ಆಯೋಗದ ಆಯುಕ್ತ ಎನ್.ಪಿ. ರಮೇಶ್ ಕುಂದಾಪುರ ಆದೇಶ ನೀಡಿದ್ದಾರೆ.
Related Articles
Advertisement
ಗಂಗೊಳ್ಳಿಯ ಜಿ. ಭಾಸ್ಕರ ಕಲೈಕಾರ್ ಅವರು ಗಂಗೊಳ್ಳಿ ಪ್ರಾಥ ಮಿಕ ಮೀನುಗಾರರ ಸಹಕಾರಿ ಸಂಘದ 1995, 2000, 2005, 2010 ಹಾಗೂ 2015ನೇ ವರ್ಷದಲ್ಲಿ ನಡೆದ ಚುನಾವಣೆ ಸಮಯದಲ್ಲಿ ನೇಮಿಸಲಾದ ಚುನಾವಣಾಧಿಕಾರಿ ಬಗ್ಗೆ, 1995, 2000, 2005, 2010 ಹಾಗೂ 2015ರಲ್ಲಿ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳಿಸಿದ ಅಭ್ಯರ್ಥಿ ಬಗ್ಗೆ, ಸಂಘದ ಚುನಾವಣೆ ಸಮಯ ಪ್ರತಿಯೊಂದು ಮತಗಟ್ಟೆಯಲ್ಲಿ ಅಭ್ಯರ್ಥಿ ಪ್ರತಿನಿಧಿ ಮತಗಟ್ಟೆಯಲ್ಲಿ ಕುಳಿತುಕೊಳ್ಳುವ ಕುರಿತು ಹಾಗೂ ಚುನಾವಣೆ ಸಮಯ ಮತದಾನ ನಡೆಯುವ ಮುನ್ನ ಅಭ್ಯರ್ಥಿಗಳಿಗೆ, ಅವರ ಪ್ರತಿನಿಧಿಯವರಿಗೆ ಮತಪೆಟ್ಟಿಗೆ ತೋರಿಸಿ ಅವರ ಸಹಿ ತೆಗೆದುಕೊಳ್ಳುವ ಕುರಿತು ಮಾಹಿತಿ ಹಕ್ಕು ಕಾಯ್ದೆಯಂತೆ ಸಹಾಯಕ ನಿಬಂಧಕರಿಗೆ ಅರ್ಜಿ ಸಲ್ಲಿಸಿ ಮಾಹಿತಿ ನೀಡುವಂತೆ 2015ರಲ್ಲಿ ಮನವಿ ಮಾಡಿದ್ದರು.
ತಂಬಾಕು ನಿಯಂತ್ರಣ ದಳದಿಂದ ದಾಳಿಉಡುಪಿ : ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದ ವತಿಯಿಂದ ಮಣಿಪಾಲದ ಟೈಗರ್ ಸರ್ಕಲ್, ಎಂಐಟಿ ರೋಡ್, ಎಂಜೆಸಿ ರೋಡ್ ನಗರ ವ್ಯಾಪ್ತಿ ಪ್ರದೇಶಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೊಟೇಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳಿಗೆ ದಾಳಿ ನಡೆಸಿ ಸೆಕ್ಷನ್ 4,6(ಎ) ಮತ್ತು 6(ಬಿ) ಅಡಿಯಲ್ಲಿ 24 ಪ್ರಕರಣ ದಾಖಲಿಸಿ 3,200 ರೂ. ದಂಡ ವಸೂಲಿ ಮಾಡಲಾಯಿತು. ಈ ಸಂದರ್ಭ ನಾಮಫಲಕಗಳನ್ನು ವಿತರಿಸಲಾಯಿತು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ವಾಸುದೇವ್, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗರತ್ನಾ, ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಕೃಷ್ಣಪ್ಪ ಮತ್ತು ಆನಂದಗೌಡ, ರಾಷ್ಟ್ರೀಯ ತಂಬಾಕು ನಿಯಂತ್ರಣ ಘಟಕದಿಂದ ಎನ್.ಟಿ.ಸಿ.ಪಿ. ಸಮಾಜ ಕಾರ್ಯಕರ್ತೆ ಶೈಲಾ ಎಸ್.ಎಂ., ಉಡುಪಿ ಬಿಪಿಎಂ ರಂಜಿತ್, ಉಡುಪಿ ನಗರ ಠಾಣೆಯ ಪೊಲೀ ಸ ರಾದ ರೆಹಮತ್, ಬಸವರಾಜ್ ಮತ್ತು ವಾಹನ ಚಾಲಕರಾದ ಸದಾನಂದ, ಪ್ರಸಾದ್ ದಾಳಿ ಯಲ್ಲಿ ಪಾಲ್ಗೊಂಡಿದ್ದರು. ಮಲ್ಪೆ: ಮೀನುಗಾರ ಮಲಗಿದ್ದಲ್ಲೇ ಸಾವು
ಮಲ್ಪೆ: ಇಲ್ಲಿನ ಮೀನುಗಾರಿಕೆ ಬಂದರಿನ 3ನೇ ಹಂತದ ಜೆಟ್ಟಿ ಬಳಿ ಮೀನುಗಾರ ಧರ್ಮಸ್ಥಳದ ಮಹೇಶ (32) ಅವರು ಮಲಗಿದ್ದಲ್ಲೇ ಸಾವನ್ನಪ್ಪಿದ್ದಾರೆ. ಇವರು ಬಡಾನಿಡಿಯೂರಿನ ಗುರುದಾಸ ಸಾಲ್ಯಾನ್ ಅವರ ಬೋಟಿನಲ್ಲಿ ಕೆಲಸ ಮಾಡಿಕೊಂಡಿ ದ್ದರು. 2 ತಿಂಗಳಿನಿಂದ ಬೋಟನ್ನು ಲಂಗರು ಹಾಕಲಾಗಿದ್ದರಿಂದ ರಾತ್ರಿ ವೇಳೆ ಬೋಟಿನಲ್ಲೇ ಮಲಗುತ್ತಿದ್ದರು. ಮಂಗಳವಾರ ಸಂಜೆ ಇವರು ಮೃತಪಟ್ಟಿರುವುದು ತಿಳಿದು ಬಂದಿದ್ದು, ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ. ಬನ್ನಾಡಿ: ಹೊಳೆಯಲ್ಲಿ ಮುಳುಗಿ ಸಾವು
ಕೋಟ: ಬನ್ನಾಡಿ ಸೇತುವೆ ಬಳಿ ಹಿರೆ ಹೊಳೆಗೆ ಸ್ನಾನಕ್ಕಿ ಳಿದ ವಡ್ಡರ್ಸೆ ಎಂ.ಜಿ. ಕಾಲನಿಯ ಉಮೇಶ್ (40) ಅವರು ಮಂಗ ಳವಾರ ಮುಳುಗಿ ಮೃತಪಟ್ಟಿದ್ದಾರೆ. ಅವರು ಬನ್ನಾಡಿ ಗರೋಡಿ ದೈವಸ್ಥಾನಕ್ಕೆ ಸಂಪ್ರದಾಯದಂತೆ ಡೋಲು ಬಾರಿಸಲು ಹೋಗಿದ್ದು, ಕಾರ್ಯಕ್ರಮ ಮುಗಿದ ಬಳಿಕ ಐತ ಹಾಗೂ ಸಂತೋಷ ಅವರೊಂದಿಗೆ ಸ್ನಾನಕ್ಕೆ ತೆರಳಿದ್ದರು.ಈ ಸಂದರ್ಭ ನೀರಿನಲ್ಲಿ ಮುಳುಗಿ ಕೊನೆಯು ಸಿರೆಳೆದರು. ಕಾರು ಗಳು ಢಿಕ್ಕಿ: ಇಬ್ಬರಿಗೆ ಗಾಯ
ಪುತ್ತೂರು: ಇಲ್ಲಿಗೆ ಸಮೀ ಪದ ಸಂಟ್ಯಾರು ಬಳಿ ಬೆಟ್ಟಂಪಾಡಿಗೆ ತೆರಳುತ್ತಿದ್ದ ಮಾರುತಿ ಆಮ್ನಿ ಹಾಗೂ ಎದುರುನಿಂದ ಬರುತ್ತಿದ್ದ ಝೆನ್ ಕಾರು ಮುಖಾಮುಖೀ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ಬುಧವಾರ ಸಂಭ ವಿಸಿದೆ. ಗಾಯ ಗೊಂಡಿ ರುವ ಆಮ್ನಿ ಚಾಲಕ ರಾಮ ಪಾಟಾಳಿ ಬೆಟ್ಟಂಪಾಡಿ ಹಾಗೂ ಅವರ ಪತ್ನಿ ಪುತ್ತೂರು ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ. ವೃದ್ಧ ಆತ್ಮಹತ್ಯೆ
ಕಡಬ: ರಾಮಕುಂಜ ಗ್ರಾಮದ ಬಾಂತೊಟ್ಟು ನಿವಾಸಿ ಲಿಂಗಪ್ಪ ಗೌಡ (75) ಅವರು ಬುಧವಾರ ಬೆಳಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಳ್ಯ: ಆತ್ಮಹತ್ಯೆ
ಸುಳ್ಯ: ನಗರದ ಕಸಬಾ ವ್ಯಾಪ್ತಿಯ ಪರಿವಾರಕಾನ ನಿವಾಸಿ ಪ್ರೇಮ್ ಕುಮಾರ್ (45) ಅವರು ಮೇ 15ರಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹ ಪತ್ತೆ
ಉಳ್ಳಾಲ: ಕೋಟೆ ಕಾರು ಮಾಡೂರಿನ ತನ್ನ ಮನೆಯಿಂದ ಮೇ 13ರಿಂದ ನಾಪತ್ತೆಯಾಗಿದ್ದ ಲೋಕೇಶ್ (50) ಅವರ ಮೃತದೇಹ ಬುಧವಾರ ಕಲ್ಲಾಪು ಆಡಂಕುದ್ರು ಬಳಿಯ ನೇತ್ರಾವತಿ ನದಿ ತಟದಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆಗೈದಿರುವ ಶಂಕೆ ವ್ಯಕ್ತವಾಗಿದೆ. ಖಾಸಗಿ ಬಸ್ ಚಾಲಕರಾಗಿದ್ದ ಅವರು ಅನಾರೋಗ್ಯ ದಿಂದ ಬಳಲು ತ್ತಿದ್ದರು. ಅವರ ಪುತ್ರ ಸಂತೋಷ್ ಎರಡು ದಿನಗಳಲ್ಲಿ ವಿದೇಶಕ್ಕೆ ತೆರಳುವವರಿದ್ದರು.