Advertisement

ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಭಾರಿ ಏರಿಕೆ: ಜಿಯೋ ಲಾಭ 1,350 ಕೋಟಿ ರೂ.

10:01 AM Jan 19, 2020 | Nagendra Trasi |

ಮುಂಬೈ: 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್‌ 10, 251 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು. ಕಳೆದ ವರ್ಷದ ಆದಾಯ 1.71 ಲಕ್ಷ ಕೋಟಿ ಗಳಷ್ಟಿದ್ದರೆ, ಈ ಬಾರಿ ರೂ. 1.68 ಲಕ್ಷ ಕೋಟಿ ಆದಾಯ ಗಳಿಕೆಯಾಗಿದೆ ಎಂದು ತಿಳಿಸಿದೆ.

Advertisement

ರಿಲಯನ್ಸ್ ಸಮೂಹದ ಅಂಗಸಂಸ್ಥೆ  ರಿಲಯನ್ಸ್ ಜಿಯೋ ಇನ್ಫೋಕಾಮ್, ಈ ಬಾರಿಯ ತ್ರೈ ಮಾಸಿಕದಲ್ಲಿ ಬಹಳಷ್ಟು ಲಾಭವನ್ನು ಗಳಿಕೆ ಮಾಡಿದೆ. ರಿಲಯನ್ಸ್ ಜಿಯೋ ತ್ರೈಮಾಸಿಕದಲ್ಲಿ ಪ್ರತಿ ಬಳಕೆದಾರರ (ಎಆರ್‌ಪಿಯು) ಸರಾಸರಿ  128.4 ರೂ. ಗಳಾಗಿದ್ದು, 13,968 ಕೋಟಿ ರೂ. ಆದಾಯ ಗಳಿಸಿದೆ. ರಿಲಯನ್ಸ್ ಜಿಯೋ 3ನೇ ತ್ರೈ ಮಾಸಿಕದ ನಿವ್ವಳ ಲಾಭದಲ್ಲಿ ಶೇ. 36.4 ರಷ್ಟು ಏರಿಕೆಯನ್ನು ದಾಖಲಿಸಿದ್ದು, ಇದರ ಮೌಲ್ಯ 1,350 ಕೋಟಿ ರೂಗಳಾಗಿದೆ.

ಭಾರತದ ಅತಿದೊಡ್ಡ ಚಿಲ್ಲರೆ ಕಂಪನಿಯಾಗಿ ರಿಲಯನ್ಸ್ ರಿಟೇಲ್, ಲಕ್ಷಾಂತರ ಭಾರತೀಯರ ಅಗತ್ಯತೆಗಳನ್ನು ಪೂರೈಸುವಲ್ಲಿ ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದು, ತನ್ನ ಗ್ರಾಹಕರಿಗೆ ವ್ಯಾಪಕವಾದ ಗುಣಮಟ್ಟದ ಉತ್ಪನ್ನಗಳು ಮತ್ತು ಸೇವೆಗಳನ್ನು ನೀಡುವ ಮೂಲಕ ಶಾಪಿಂಗ್ ಅನ್ನು ಗ್ರಾಹಕರಿಗೆ ಸಂತೋಷಕರವಾಗಿರಿಸಲು ಗಮನ ಹರಿಸಿದೆ.

ಈ ಅವಧಿಯಲ್ಲಿ ರಿಲಯನ್ಸ್ ರೀಟೇಲ್ ಕೂಡ ದಾಖಲೆಯ ಸಾಧನೆ ಮಾಡಿದ್ದು, ಈ ತ್ರೈಮಾಸಿಕದಲ್ಲಿ 176 ದಶಲಕ್ಷಕ್ಕೂ ಹೆಚ್ಚು ಗ್ರಾಹಕರು ಶಾಪಿಂಗ್ ಸಲುವಾಗಿ ರಿಲಯನ್ಸ್ ರೀಟೇಲ್ ಮಳಿಗೆಗಳಿಗೆ ಆಗಮಿಸಿದ್ದಾರೆ. ಅಲ್ಲದೇ 117 ಮಿಲಿಯನ್ ಗ್ರಾಹಕರು ನೋಂದಾಯಿತರಾಗಿದ್ದಾರೆ. ಈ ಬೆಳವಣಿಗೆಯನ್ನು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಅವಧಿಯಲ್ಲಿ 42.6% ರಷ್ಟು ಏರಿಕೆಯಾಗಿದೆ.

ಒಟ್ಟಾರೆಯಾಗಿ ತ್ರೈಮಾಸಿಕದಲ್ಲಿ ವಿಭಾಗದ ಒಟ್ಟು ಮಾರಾಟವು 45,327 ಕೋಟಿ ರೂ.ಗಳಾಗಿದ್ದು, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ 27.4% ರಷ್ಟು ಏರಿಕೆಯಾಗಿದೆ. ಇದರಲ್ಲಿ ಎಲೆಕ್ಟ್ರಾನಿಕ್ಸ್, ಫ್ಯಾಷನ್ ಮತ್ತು ಜೀವನಶೈಲಿ ಮತ್ತು ದಿನಸಿ ವಿಭಾಗಗಳು ಶೇ. 35.7% ರಷ್ಟು ಏರಿಕೆಯನ್ನು ಸಾಧಿಸಿದೆ. ಈ ಬೆಳವಣಿಗೆಯೂ ಗುಣಮಟ್ಟವಾಗಿದೆ, ಇದು ಅಸ್ತಿತ್ವದಲ್ಲಿರುವ ಮಳಿಗೆಗಳ ಮಾರಾಟವೂ ಏರಿಕೆಯನ್ನು ಕಂಡಿದೆ ಅಲ್ಲವೇ ಮಳಿಗೆಗಳ ತ್ವರಿತ ವಿಸ್ತರಣೆಯೂ ನಡೆಯುತ್ತಿದ್ದು, ಹೊಸ ಗ್ರಾಹಕರನ್ನು ತಲುಪಿಸುವ ಕಾರ್ಯವು ಜರುಗುತ್ತಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next