Advertisement
ಪಟ್ಟಣದ ಪ್ರವಾಸಿಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದುಳಿದ ಜನಾಂಗಗಳ ಹಕ್ಕುಗಳನ್ನು ಹಾಗೂ ಸೌಲಭ್ಯಗಳನ್ನು ಪ್ರಭಾವಿ ನಾಯಕರಿಂದ ಕಸಿದುಕೊಳ್ಳಲಾಗುತ್ತಿದೆ. ಇದಕ್ಕಾಗಿ ಹೋರಾಟ ಅನಿವಾರ್ಯವಾಗಿದೆ. ದೇಶಕ್ಕೆ ಸ್ವತಂತ್ರ್ಯ ಬಂದು 75 ವರ್ಷವಾದರೂ, ಮಡಿವಾಳ, ಬೆಸ್ತ, ಅರಸ, ತಿಗಳ,ಕುಂಬಾರ, ಸವಿತಾ ಸಮಾಜ, ವಿಶ್ವಕರ್ಮ, ಕುರುಬ, ಉಪ್ಪಾರ, ದೇವ ಜನಾಂಗ, ಗೊಲ್ಲ, ಈಡಿಗ, ದೊಂಬಿದಾಸ, ಅಕ್ಕಿಪಿಕ್ಕಿ ಸೇರಿದಂತೆ ಇತರೆ ನೂರಾರು ಸಣ್ಣ ಜಾತಿಗಳ ವರ್ಗ ದವರಿಗೆ ಸಾಮಾಜಿಕ, ಶೈಕ್ಷಣಿಕ, ರಾಜಕೀಯದಲ್ಲಿ ಅನ್ಯಾಯವಾಗಿದೆ ಎಂದು ದೂರಿದರು.
ಇರುವ ಮೇಲ್ವರ್ಗದ ಪಂಚಮಸಾಲಿ ಲಿಂಗಾಯಿತರು, ಕುಂಚಿಟಿಗ ಒಕ್ಕಲಿಗ ಸಮುದಾಯವು ಹಿಂದುಳಿದ ವರ್ಗದ 2 ಎಗೆ ಸೇರಿಸುವಂತೆ ಒತ್ತಾ
ಯಿಸುತ್ತಿದ್ದಾರೆ. ಒಂದು ವೇಳೆ 2ಎಗೆ ಮೇಲ್ವರ್ಗ ದವರನ್ನು ಮೀಸಲಾತಿ ಪಟ್ಟಿಗೆ ಸೇರಿಸಿದರೆ, ಸಣ್ಣಪುಟ್ಟ ಜಾತಿಗಳಿಗೆ ಅನ್ಯಾಯವಾಗುತ್ತದೆ.
ಹೀಗಾಗಿ, ಈ ಧೋರಣೆಯನ್ನು ಖಂಡಿಸಿ ಈಗಾಗಲೇ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಂಘಟನೆ ನಡೆಯುತ್ತಿದ್ದು, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ಬೃಹತ್ ಸಭೆ ನಡೆದಿದ್ದು, ಆ. 21ರ ಶನಿವಾರ ತುಮಕೂರಿನಲ್ಲಿ ಹಿಂದುಳಿದ ವರ್ಗಗಳ ಸಭೆ ನಡೆಯಲಿದೆ. ಹಾಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ತಮ್ಮ ಹಕ್ಕು ಜಾಗೃತಿಗಾಗಿ ಹೋರಾಟ ರೂಢಿಸಿಕೊಳ್ಳಬೇಕು ಎಂದು ಹೇಳಿದರು. ಇದನ್ನೂ ಓದಿ:ಪ್ರಭಾಸ್ ಅವರನ್ನು ಮದುವೆ ಆಗ್ತಾರಂತೆ ಈ ಬಾಲಿವುಡ್ ನಟಿ
Related Articles
ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಹಿಂದುಳಿದ ಸಮುದಾಯದ ಡಿ.ದೇವರಾಜ ಅರಸು, ಎಸ್.ಬಂಗಾರಪ್ಪ ಹಾಗೂ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗ ಹಾಗೂ ದಲಿತರ ಅಭಿವೃದ್ಧಿಗೆ ಆನೇಕ ಯೋಜನೆ ಜಾರಿಗೆ ತಂದು ಈ
ಸಮುದಾಯದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.
Advertisement
ಜಿಪಂ ಮಾಜಿ ಸದಸ್ಯ ದೊಡ್ಡಯ್ಯ, ತಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಚಿಕ್ಕಣ್ಣ, ಎಂಜಿನಿಯರ್ ನಟರಾಜು, ಶ್ರೀನಿವಾಸ್, ಚಂದ್ರಶೇಖರ್‌ಗೌಡ, ಟಿ.ಎನ್.ಮಧುಕರ್, ಸುರೇಶ್, ಶ್ರೀನಿವಾಸ್‌ರಾವ್ ಸಿಂಧೆ,ಕುಮಾರ್, ಸೈಯದ್ ಶಹಬಾಸ್ ಇದ್ದರು.
ಮೀಸಲಾತಿಯಲ್ಲಿ ಅನ್ಯಾಯ ವಿದ್ಯಾರ್ಥಿ ನಿಲಯಗಳು ಅವನತಿ ಸ್ಥಿತಿಗೆ ತಲುಪುತ್ತಿವೆ. ಜಿಪಂ ಹಾಗೂ ತಾಪಂನ ಮೀಸಲಾತಿಯಲ್ಲಿ ಅನ್ಯಾಯವಾಗಿದೆ. ಶೇ. 6ರಷ್ಟು ಇರುವ ಲಿಂಗಾಯಿತ ವೀರಶೈವರಿಗೆ ಎಂಟು, ಒಕ್ಕಲಿಗ ಸಮುದಾಯಕ್ಕೆ ಏಳು ಹಾಗೂ ಶೇ. 63ರಷ್ಟು ಇರುವ ಹಿಂದುಳಿದ ವರ್ಗದವರಿಗೆ ಕೇವಲ 7 ಸಚಿವ ಸ್ಥಾನ ನೀಡಲಾಗಿದೆ. ಲಿಂಗಾ ಯಿತ, ಒಕ್ಕಲಿಗ ನಿಗಮ ಸ್ಥಾಪಿಸಿ ತಲಾ 500 ಕೋಟಿ ಮೀಸಲಿಟ್ಟಿದ್ದಾರೆ. ಆದರೆ, ಹಿಂದುಳಿದ ವರ್ಗಗಳ ಕಲ್ಯಾಣಇಲಾಖೆಗೆ ಅನುದಾನ ನೀಡದೇ ಇರುವುದು ವಿಪರ್ಯಾಸವೇ ಸರಿ ಎಂದು ಪ್ರಸ್ ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.