Advertisement
ಇಡೀ ದೇಶದಲ್ಲಿಯೇ ಇಂತಹ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿರುವ ಚೊಚ್ಚಲ ಖಾಸಗಿ ಸಂಸ್ಥೆಯಾಗಿರುವ ಎಂಇಐಎಲ್, 1500 ಹೆಚ್‌ಪಿ ಸಾಮರ್ಥ್ಯ ಮೂಲಕ ಭೂಗರ್ಭದಲ್ಲಿ 400 ಮೀಟರ್ ಅಂದರೆ 4 ಕಿ.ಮೀ.ಗಳಷ್ಟು ಆಳವನ್ನು ಹೊಕ್ಕು ಇಂಧನ ಬಾವಿಗಳನ್ನು ನಿರ್ಮಿಸಿ ಇಂಧನ ನಿಕ್ಷೇಪವನ್ನು ಹೊರತರಲಿದ್ದು, ಈ ದೇಶಿಯ ನಿರ್ಮಿತ ರಿಗ್‌ಗಳು 40 ವರ್ಷಗಳ ಸುದೀರ್ಘ ಬಾಳಿಕೆ ಖಾತ್ರಿ ಹೊಂದಿವೆ.
Related Articles
Advertisement
20 ರಿಗ್‌ಗಳ ಪೈಕಿ 12 ರಿಗ್‌ಗಳು 50 ಮೀಟರ್‌ವರೆಗೆ ಸ್ವಯಂ ಚಾಲಿತವಾಗಿದ್ದು, 100 ಮೀಟರ್ ಮತ್ತು 150 ಮೀಟರ್ ಸಾಮರ್ಥ್ಯದ 4 ರಿಗ್‌ಗಳ ನಿರ್ಮಾಣ ಕಾರ್ಯವೂ ಸಹ ಸಾಗಿದೆ. 1500 ಹೆಚ್.ಪಿ. ಮತ್ತು 2000 ಹೆಚ್.ಪಿ ಶಕ್ತಿಯ ರಿಗ್‌ಗಳ ತಯಾರಿಕೆ ದೇಶದಲ್ಲಿ ಇದೇ ಮೊಟ್ಟ ಮೊದಲಾಗಿದೆ.
ಪ್ರಸ್ತುತ ಗುಜರಾತ್‌ನಲ್ಲಿ ಒಂದು ರಿಗ್ ಯಶಸ್ವಿಯಾಗಿ ಕಾರ್ಯಾರಂಭಿಸಿದ್ದರೆ, ಎರಡನೇ ರಿಗ್ ಆರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ ಮತ್ತು ಇನ್ನುಳಿದ 46 ರಿಗ್‌ಗಳ ಪೈಕಿ ಆಂಧ್ರ ಪ್ರದೇಶದ ರಾಜಮಂಡ್ರಿ ಇಂಧನ ನಿಕ್ಷೇಪ ಪ್ರದೇಶಕ್ಕೆ ಸರಬರಾಜಾಗಿದ್ದರೆ, ಇನ್ನುಳಿದ ರಿಗ್‌ಗಳನ್ನು ಓಎನ್‌ಜಿಸಿಯ ಆಸ್ಸಾಂ, ತ್ರಿಪುರ ಮತ್ತು ತಮಿಳುನಾಡು ಇಂಧನ ನಿಕ್ಷೇಪ ಪ್ರದೇಶಗಳಿಗೆ ಸರಬರಾಜಾಗಲಿವೆ ಎಂದು ರಾಜೇಶ್ ರೆಡ್ಡಿ ತಿಳಿಸಿದ್ದಾರೆ.
ಸ್ಥಳೀಯ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಈ ರಿಗ್‌ಗಳು ಅತಿ ಕಡಿಮೆ ವಿದ್ಯುತ್ ಬಳಕೆ ಮಾಡಿಕೊಳ್ಳಲಿದೆ. ಅತ್ಯಾಧುನಿಕ ಹೈಡ್ರಾಲಿಕ್ ಮತ್ತು ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವುದರಿಂದ 1500 ಹೆಚ್.ಪಿ ಸಾಮರ್ಥ್ಯದಿಂದ 400 ಮೀಟರ್ ಆಳವನ್ನು ಸುಲಭದಲ್ಲಿ ಕ್ರಮಿಸಲಿದ್ದು, ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.
ದೇಶಿಯ ಇಂಧನ ಉತ್ಪಾದನೆಗೆ ಒತ್ತು:
ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಓಎನ್‌ಜಿಸಿ ಈ ಅತ್ಯಾಧುನಿಕ ರಿಗ್‌ಗಳನ್ನು ಪಡೆದುಕೊಳ್ಳಲಿದ್ದು, ಇದರಿಂದ ದೇಶೀಯ ಇಂಧನ ಉತ್ಪಾದನೆ ಹೆಚ್ಚಲಿದೆ. ಈ ಬೆಳವಣಿಗೆಯಿಂದ ಇಂಧನ ಆಮದಿನಲ್ಲಿ ಕಡಿತವಾಗುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗುವ ಜತೆಗೆ ಓಎನ್‌ಜಿಸಿಗೆ ಅತ್ಯಾಧುನಿಕ ತಂತ್ರಜ್ಞಾನ ಸುಲಭದಲ್ಲಿ ಲಭ್ಯವಾಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ “ಮೆಕ್ ಇನ್ ಇಂಡಿಯಾ”ವನ್ನು ತನ್ನ ನೀತಿಯನ್ನಾಗಿ ಪರಿಗಣಿಸಿರುವ ಎಂ.ಇ.ಐ.ಎಲ್, ಮುಂದಿನ ದಿನಗಳಲ್ಲಿ ಓ ಅತ್ಯಾಧುನಿಕ ರಿಗ್‌ಗಳ ವಾಣಿಜ್ಯ ಮಾರಾಟಕ್ಕೂ ಮುಂದಡಿ ಇರಿಸಲಿದ್ದು, ಇತರೆ ವಿದೇಶಿ ಸಂಸ್ಥೆಗಳ ರಿಗ್‌ಗಳಿಗಿಂತ ಈ ದೇಶಿಯ ರಿಗ್ ಅತ್ಯುತ್ತಮ ಮತ್ತು ಅತ್ಯಾಧುನಿಕವಾಗಿದ್ದು, ದೇಶವೇ ಹೆಮ್ಮೆ ಪಡುವಂತ ಬೆಳವಣಿಗೆ ಇದಾಗಿದೆ.