Advertisement

ಇಂದ್ರೀಯ ವಿಜಯ ಸಾಧಿಸಿದವರು ಮಹಾವೀರರು

05:25 PM Apr 19, 2019 | Naveen |

ರಿಪ್ಪನ್‌ಪೇಟೆ: ತೀರ್ಥಂಕರರೆಲ್ಲ ಹುಟ್ಟಿನಿಂದ ಕ್ಷತ್ರಿಯರೇ ಆದವರು. ಅಂದ ಮಾತ್ರಕ್ಕೆ ಅವರೆಲ್ಲ ಯುದ್ಧ ಮಾಡಿ ವೀರರೆನಿಸಿಕೊಳ್ಳಲಿಲ್ಲ. ಅತಿಮಾನುಷ ಶಕ್ತಿಯಿಲ್ಲದೆ ಸಾಮಾನ್ಯರಂತೆ ಇದ್ದರು. ಅಸಾಮಾನ್ಯ ವ್ಯಕ್ತಿತ್ವದಿಂದ ಎಲ್ಲರ ಮನ ಗೆದ್ದವರು ಎಂದು ಸ್ವಸ್ತಿಶ್ರೀ ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಸ್ವಾಮೀಜಿ ಹೇಳಿದರು.

Advertisement

ಸಮೀಪದ ಹೊಂಬುಜ ಜೈನಮಠದಲ್ಲಿ ಮಹಾವೀರ ಜಯಂತಿ ಅಂಗವಾಗಿ ವಿಶೇಷ ಅಭಿಷೇಕ ಹಾಗೂ ಮೂರ್ತಿ ಉತ್ಸವಕ್ಕೆ ಚಾಲನೆ ನೀಡಿ ನಂತರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಯುದ್ಧವನ್ನು ಗೆದ್ದವನು ವೀರನಾದರೆ, ತನ್ನನ್ನು ತಾನೇ ಇದ್ರಿಯಗಳ ವಿಜಯ ಸಾಧಿಸಿದವರು ಮಹಾವೀರರು. ಇದರಿಂದ
ವರ್ಧಮಾನರು ಮಹಾವೀರರೆನಿಸಿಕೊಳ್ಳಲು ಕಾರಣವಾಗಿದೆ.

ಮನುಷ್ಯ ಪ್ರಪಂಚವನ್ನು ಗೆಲ್ಲಬಹುದಾದರೂ ತನ್ನನ್ನು ತಾನೇ
ಗೆಲ್ಲುವುದು ಕಠಿಣವಾದುದು. ಮಹಾವೀರರು ತಮ್ಮ ಕಾಲದಲ್ಲಿ
ಕಂಡುಬಂದ ಸಾಮಾಜಿಕ, ಧಾರ್ಮಿಕ ಸಮಸ್ಯೆಗಳನ್ನು ಪರಿಹರಿಸಿ
ಮನುಷ್ಯನಲ್ಲಿ ವೈಚಾರಿಕ ಬದಲಾವಣೆ ಬರುವಂತೆ ಮಾಡಿದರು.

ಸಾಮಾಜಿಕ ಜೀವನದಲ್ಲಿ ಸಮತೋಲನ ಕಾಯ್ದುಕೊಂಡು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜಾರಿಗೊಳಿಸಿದ್ದರು. 2500
ವರ್ಷಗಳ ಹಿಂದೆ ಪ್ರಜಾಪ್ರಭುತ್ವವನ್ನು ಭಾರತದಲ್ಲಿ ಅನುಷ್ಠಾನಗೊಳಿಸುವುದರೊಂದಿಗೆ ಗಣರಾಜ್ಯ ವ್ಯವಸ್ಥೆಯನ್ನು
ಜಾರಿಗೆ ತಂದು ಎಲ್ಲರೂ ಸಮಾನ ಪ್ರಗತಿ ಕಾಣುವಂತೆ ಮಾಡಿದರು.

Advertisement

ರಾಜರ ವ್ಯವಸ್ಥೆಯಲ್ಲಿ ಮಹಾವೀರರು ಸರ್ವಜನ ಹಿತಕಾಯುವಂತೆ ನಿಯಮಗಳನ್ನು ಅಂದೇ ನಿರೂಪಿಸಿದ್ದರು. ಭಾರತದ ಇತಿಹಾಸದ ಪುಟಗಳಲ್ಲಿ ಈ ಎಲ್ಲಾ ವಿಚಾರಗಳು ದಾಖಲೆಯಾಗಿದ್ದರೂ ಜೈನರು ಪ್ರಚಾರಕರಾಗದೆ ಪ್ರಭಾವಕರಾಗಲು ಪ್ರಯತ್ನಿಸಿದ ಕಾರಣ ಇಂದಿನ ಮಾದ್ಯಮ ಯುಗದಲ್ಲಿ ಇಂತಹ ವಿಚಾರಗಳು ಹುದುಗಿಹೋಗಿವೆ ಎಂದರು. ಮಹಾವೀರರ ಕಾಲಮಾನದ ಅಧ್ಯಯನ ಮತ್ತು ಪರಾಮರ್ಶೆ, ಚರ್ಚೆಗಳು ನಡೆದು ಇವರ ವಿಚಾರಗಳ ಮೇಲೆ ಹೆಚ್ಚಿನ ಬೆಳಕು ಚಲ್ಲುವಂತಾಗಬೇಕೆಂದರು.

1008 ವರ್ಧಮಾನ ಶಾಂತಿಮುನಿಸಾಗರ ಶ್ರೀಗಳ ತಂಡ, ಭಕ್ತರುಗಳು ಇದ್ದರು. ಹೊಂಬುಜ ಮುಖ್ಯ ಬೀದಿಗಳಲ್ಲಿ ಮಹಾವೀರರ ಪಲ್ಲಕ್ಕಿಯೊಂದಿಗೆ ಗಜ ಅಶ್ವ ಹಾ‌ಗೂ ವಿವಿಧ ವಾದ್ಯಘೋಷಗಳೊಂದಿಗೆ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next