Advertisement

ಬೆಂಗಳೂರಿನಿಂದ ವಿಜಯಪುರಕ್ಕೆ ಬೈಕ್‌ನಲ್ಲಿ ಪ್ರಯಾಣ

01:13 PM Mar 28, 2020 | Suhan S |

ಆಲಮಟ್ಟಿ: ಜಗತ್ತಿಗೆ ಮಹಾಮಾರಿಯಾಗಿರುವ ಕೋವಿಡ್ 19 ವೈರಸ್‌ ಹಾವಳಿಯಿಂದ ಕೆಲಸಕ್ಕೆ ಹೋದ ಅದೆಷ್ಟೋ ಕುಟುಂಬಗಳು ತಮ್ಮ ಸ್ವಗ್ರಾಮಗಳಿಗೆ ಮರಳುವಂತೆ ಮಾಡಿರುವದರಿಂದ ವಾಹನ ಸಿಗದೇ ಪಾದಯಾತ್ರೆ ಮಾಡುವಂತಾಗಿದೆ.

Advertisement

ಬೆಂಗಳೂರಿನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಅಭಿಯಂತರರಾಗಿ ಕೆಲಸ ಮಾಡುತ್ತಿದ್ದ ವಿಜಯಪುರದ ನಿವಾಸಿಯೊಬ್ಬರು ಕಳೆದ 20ವರ್ಷಗಳಿಂದ ಅಲ್ಲಿಯೇ ವಾಸವಾಗಿದ್ದರು. ಕೋವಿಡ್ 19 ವೈರಸ್‌ ಹಾವಳಿಯಿಂದ ಪ್ರಾಣ ರಕ್ಷಣೆಗಾಗಿ ಸ್ವಂತ ಗ್ರಾಮಗಳಿಗೆ ಆಗಮಿಸಲು ಬಸ್‌ ಹಾಗೂ ರೈಲು ಸೌಕರ್ಯ ಸಿಗದ ಪರಿಣಾಮ ಬೈಕ್‌ ಮೇಲೆ ಮೂವರು ಮಕ್ಕಳು, ಪತ್ನಿ ಹಾಗೂ ದಿನಬಳಕೆ ಸಾಮಗ್ರಿಗಳ ಚೀಲ ಇರಿಸಿಕೊಂಡು ಪ್ರಯಾಣ ಬೆಳೆಸಿ ಮೂರು ದಿನಗಳ ಬಳಿಕ ತವರೂರಿಗೆ ಮರಳಿದ್ದಾರೆ.

ಇನ್ನು ಆಲಮಟ್ಟಿಯ ಸುತ್ತಲಿನ ಕೆಲ ಗ್ರಾಮಗಳ ಯುವಕರು ಉದ್ಯೋಗವನ್ನರಿಸಿ ಪುಣೆಗೆ ತೆರಳಿದ್ದರು. ಸದ್ಯ ಸ್ವಗ್ರಾಮಕ್ಕೆ ಬರಲು ವಾಹನ ವ್ಯವಸ್ಥೆ ಇಲ್ಲದ ಪರಿಣಾಮ ಅನಿವಾರ್ಯವಾಗಿ ಪಾದಯಾತ್ರೆ ಮೂಲಕವೇ ಪ್ರಯಾಣ ಬೆಳೆಸಿದ್ದಾಗಿ ಮಾಹಿತಿ ನೀಡಿದ್ದಾರೆ. ಒಟ್ಟಾರೆ ಈ ಮಹಾಮಾರಿ ಕೋವಿಡ್ 19 ಹಾವಳಿಯಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಊರು ಬಿಟ್ಟು ಹೋದವರು ಮರಳಿ ಗ್ರಾಮಕ್ಕೆ ಬರಲು ಪರದಾಡುತ್ತಿರುವುದು ವಿಪರ್ಯಾಸ.

Advertisement

Udayavani is now on Telegram. Click here to join our channel and stay updated with the latest news.

Next