Advertisement

ಮರಳಿದ ಆನ್ರಿಚ್‌ ನೋರ್ಜೆ: ಡೆಲ್ಲಿ ಕ್ಯಾಪಿಟಲ್ಸ್‌ ನಿರಾಳ

10:44 PM Apr 05, 2022 | Team Udayavani |

ಮುಂಬೈ: ಪ್ರಮುಖ ಆಟಗಾರ ಆನ್ರಿಚ್‌ ನೋರ್ಜೆ ಅವರು ನೆಟ್‌ನಲ್ಲಿ ಅಭ್ಯಾಸಕ್ಕೆ ಮರಳಿದ್ದರಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆಟಗಾರರು ಮತ್ತು ಅಭಿಮಾನಿಗಳು ಸಂಭ್ರಮಪಟ್ಟಿದ್ದಾರೆ.

Advertisement

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಏ.7ರಂದು ನಡೆಯುವ ಪಂದ್ಯದಲ್ಲಿ ನೋರ್ಜೆ ಮತ್ತು ಡೇವಿಡ್‌ ವಾರ್ನರ್‌ ತಂಡಕ್ಕೆ ಮರಳುವ ಸಾಧ್ಯತೆಯಿದೆ ಎಂದು ಡೆಲ್ಲಿ ತಂಡದ ಮುಖ್ಯ ಕೋಚ್‌ ರಿಕಿ ಪಾಂಟಿಂಗ್‌ ಹೇಳಿದ್ದಾರೆ.

ನೋರ್ಜೆ ಅವರು 2020ರ ಋತುವಿನಿಂದ ಡೆಲ್ಲಿ ತಂಡದ ಪರ ಆಡುತ್ತಿದ್ದಾರೆ. ಅವರನ್ನು ತಂಡ 50 ಲಕ್ಷ ರೂ.ಗಳಿಗೆ ಖರೀದಿಸಿತ್ತು. ಐಪಿಎಲ್‌ ಇತಿಹಾಸದ ಅತೀ ವೇಗದ ಬೌಲಿಂಗ್‌ ದಾಳಿ ಸಂಘಟಿಸಿದ ದಾಖಲೆ ಅವರ ಹೆಸರಲ್ಲಿದೆ. ಮಾತ್ರವಲ್ಲದೇ 2020ರ ವರ್ಷದ ಅಗ್ರ ಐದು ವೇಗದ ಎಸೆತಗಳನ್ನು ಅವರೊಬ್ಬರೇ ಎಸೆದಿದ್ದರು.

ಇದನ್ನೂ ಓದಿ:ಕಿರಿಯರ ಮಹಿಳಾ ಹಾಕಿ ವಿಶ್ವಕಪ್‌: ಭಾರತಕ್ಕೆ ಜಯ

ಈ ಋತುವಿನ ಆರಂಭದಲ್ಲಿ ಗಾಯದ ಸಮಸ್ಯೆಯಿಂದಾಗಿ ನೋರ್ಜೆ ಆಡುವುದು ಅನುಮಾನವೆಂದು ಹೇಳಲಾಗಿತ್ತು. ಆದರೆ ಇದೀಗ ಡೆಲ್ಲಿ ತಂಡವು ಟ್ವಿಟರ್‌ನಲ್ಲಿ ನೋರ್ಜೆ ಅವರು ಅಭ್ಯಾಸ ನಡೆಸುತ್ತಿರುವ ಚಿತ್ರ ಹಾಕಿರುವುದು ಮತ್ತು ಪಾಂಟಿಂಗ್‌ ಅವರ ಹೇಳಿಕೆಯಿಂದ ಅವರು ಆಡುವ ಸಾಧ್ಯತೆ ಹೆಚ್ಚಾಗಿದೆ.

Advertisement

ಡೆಲ್ಲಿ ಇಷ್ಟರವರೆಗೆ ಎರಡು ಪಂದ್ಯಗಳನ್ನು ಆಡಿದ್ದು ಒಂದರಲ್ಲಿ ಗೆದ್ದಿದೆ ಮತ್ತು ಇನ್ನೊಂದರಲ್ಲಿ ಸೋತಿದೆ. ಇದರೆ ಇದೀಗ ನೋರ್ಜೆ, ವಾರ್ನರ್‌ ಮತ್ತು ಮಿಚೆಲ್‌ ಮಾರ್ಷ್‌ ಅವರನ್ನು ತಂಡವನ್ನು ಸೇರಿಕೊಳ್ಳುವುದರಿಂದ ಡೆಲ್ಲಿ ತಂಡ ಬಲಿಷ್ಠಗೊಳ್ಳುವುದು ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next