Advertisement

ಭಾರತ ಕ್ರಿಕೆಟಿಗೆ ರಿಕಿ ಪಾಂಟಿಂಗ್‌ ಕೋಚ್‌?

09:13 AM May 03, 2019 | keerthan |

ಹೊಸದಿಲ್ಲಿ: ಐಪಿಎಲ್‌ನಲ್ಲಿ ಡೆಲ್ಲಿ ತಂಡವನ್ನು 7 ವರ್ಷದ ಬಳಿಕ ಪ್ಲೇ ಆಫ್ಗೆ ತೆಗೆದುಕೊಂಡು ಹೋಗಿರುವ ಯಶಸ್ವಿ ಕೋಚ್‌, ಆಸ್ಟ್ರೇಲಿಯದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಭಾರತ ಕ್ರಿಕೆಟ್‌ ತಂಡದ ಮುಂದಿನ ಕೋಚ್‌ ಆಗಲಿದ್ದಾರೆಯೇ?

Advertisement

ಹೀಗೊಂದು ಸುದ್ದಿ ಮಾಧ್ಯಮಗಳಲ್ಲಿ ಹರಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಡೆಲ್ಲಿ ತಂಡದ ಸಲಹೆಗಾರರಾಗಿರುವ, ಭಾರತದ ಮಾಜಿ ನಾಯಕ ಸೌರವ್‌ ಗಂಗೂಲಿ ಸಕಾರಾತ್ಮಕ ಉತ್ತರ ನೀಡಿದ್ದಾರೆ.

“ಈ ಪ್ರಶ್ನೆಯನ್ನು ನೀವು ಪಾಂಟಿಂಗ್‌ಗೆ ಕೇಳಬೇಕು, ಅವರು ವರ್ಷದಲ್ಲಿ 7-8 ತಿಂಗಳು ಮನೆಯನ್ನು ಬಿಟ್ಟಿರಲು ತಯಾರಾಗಿದ್ದರೆ ಖಂಡಿತವಾಗಿಯೂ ಬರಬಹುದು. ನನ್ನ ಪ್ರಕಾರವಾಗಿ ಕೋಚ್‌ ಹುದ್ಧೆಗೆ ಪಾಂಟಿಂಗ್‌ ಸೂಕ್ತ ಅಭ್ಯರ್ಥಿ’ ಎಂದು ಗಂಗೂಲಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next