Advertisement

ನಾಯಕನಾಗಿ ಗೆದ್ದ ವಿಶ್ವಕಪ್ ಕೋಚ್ ಆಗಿ  ಗೆಲ್ಲಬಹುದೇ?

05:42 AM Feb 09, 2019 | Team Udayavani |

ಮೆಲ್ಬೋರ್ನ್: ಏಕದಿನ ಕ್ರಿಕೆಟ್ ನಲ್ಲಿ ಗೆಲುವು ಕಾಣಲು ಪರದಾಡುತ್ತಿರುವ ಹಾಲಿ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಮುಂಬರುವ ವಿಶ್ವಕಪ್ ಗೆ ಉತ್ತಮ ತಂಡ ಕಟ್ಟುವ ಯೋಜನೆಯಲ್ಲಿದೆ. ವಿಶ್ವಕಪ್ ಟ್ರೋಫಿಯನ್ನು ಮತ್ತೆ ಉಳಿಸಿಕೊಳ್ಳುವ ಒತ್ತಡದಲ್ಲಿರುವ ಕಾಂಗರೂ ಕ್ರಿಕೆಟ್ ಬೋರ್ಡ್ ರಿಕಿ ಪಾಂಟಿಂಗ್ ರನ್ನು ಸಹಾಯಕ ಕೋಚ್ ಆಗಿ ನೇಮಿಸಿದೆ. 

Advertisement

ಆಸ್ಟ್ರೇಲಿಯಾದ ಯಶಸ್ವಿ ನಾಯಕರಾಗಿದ್ದ ಪಾಂಟಿಂಗ್ ವಿಶ್ವಕಪ್ ಗೆದ್ದ ನಾಯಕ ಕೂಡಾ. ಮೇ ಕೊನೆಯಲ್ಲಿ ನಡೆಯಲಿರುವ ಕ್ರಿಕೆಟ್ ನ ಅತೀ ದೊಡ್ಡ ಕೂಟಕ್ಕೆ ಸಹಾಯಕ ಕೋಚ್ ತಂಡಕ್ಕೆ ಆಗಿ ವಿಶ್ವಕಪ್ ಉಳಿಸಿಕೊಳ್ಳುವ ಆಸೆ ಚಿಗುರಿಸಿದ್ದಾರೆ.


ಸದ್ಯ ಮುಖ್ಯ ತರಬೇತುದಾರನಾಗಿರುವ ಜಸ್ಟಿನ್ ಲ್ಯಾಂಗರ್ ಜೊತೆ ವಿಶ್ವಕಪ್ ಗೆ ಪಾಂಟಿಂಗ್ ಸೇರಿಕೊಳ್ಳಲಿದ್ದಾರೆ. ಅದಕ್ಕಿಂತ ಮೊದಲಯ ನಡೆಯಲಿರುವ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕೋಚಿಂಗ್ ನಡೆಸಿ ನಂತರ ಆಸೀಸ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ವಿಶ್ವ ಕಪ್ ಕೂಟಕ್ಕೆ ಮೊದಲು ಆಸ್ಟ್ರೇಲಿಯಾ, ಬ್ರಿಸ್ಬೇನ್ ನಲ್ಲಿ ತರಬೇತು ಕ್ಯಾಂಪ್ ನಡೆಸಲಿದೆ. ಕೂಟದಲ್ಲಿ ತನ್ನ ಮೊದಲ ಪಂದ್ಯವನ್ನು ಜೂನ ಒಂದರಂದು ಅಫ್ಘಾನಿಸ್ತಾನ್ ವಿರುದ್ಧ ಆಡಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next