ಮುಂಬಯಿ: ಲಾಕ್‌ಡೌನ್ ಮತ್ತು ಸಂಬಂಧಿತ ನಿರ್ಬಂಧಗಳಿಂದ ಉಂಟಾಗುವ ಆರ್ಥಿಕ ನಷ್ಟವನ್ನು ಕಡಿಮೆ ಮಾಡಲು ರಾಜ್ಯದ ಚಾಲಕರಿಗೆ 1,500 ರೂ. ಗಳ ಅನುದಾನ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಅನುದಾನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲು ಮಹೈಟ್ (ಮಹಾರಾಷ್ಟ್ರ ಮಾಹಿತಿ ತಂತ್ರಜ್ಞಾನ) ಒಂದು ವ್ಯವಸ್ಥೆಯನ್ನು ಒಂದು ತಿಂಗಳೊಳಗೆ ಅಭಿವೃದ್ಧಿಪಡಿಸಲು ಮುಂದಾಗಿದ್ದು, ಬಳಿಕ ರಿಕ್ಷಾ ಚಾಲಕರಿಗೆ ಈ ಸಬ್ಸಿಡಿಯ ಲಾಭ ಸಿಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯದ 7 ಲಕ್ಷ 15 ಸಾವಿರ ರಿಕ್ಷಾ ಪರವಾನಿಗೆ ಪಡೆದವರಿಗೆ ತಲಾ 1,500 ರೂ. ಗಳಂತೆ ಒಟ್ಟು 107 ಕೋಟಿ ರೂ. ಗಳ ಅನುದಾನ ನೀಡಲು ನಿರ್ಧರಿಸಲಾಗಿದೆ. ಈ ಮೊತ್ತವನ್ನು ನೇರವಾಗಿ ಆನ್‌ಲೈನ್‌ನಲ್ಲಿ ಸಂಬಂಧಪಟ್ಟವರ ಬ್ಯಾಂಕ್ ಖಾತೆಗಳಲ್ಲಿ ಜಮಾ ಮಾಡಲಾಗುವುದು ಎಂದು ಸ್ಪಷ್ಟಪಡಿಸಲಾಗಿದೆ. ಅದಾಗ್ಯೂ ರಿûಾ ಎಳೆಯುವವರಿಗೆ ಸಬ್ಸಿಡಿ ಪಡೆಯಲು ಒಂದು ತಿಂಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಆನ್‌ಲೈನ್ ವ್ಯವಸ್ಥೆ ಅಂದರೆ ಅನುದಾನ ಸಂಗ್ರಹಕ್ಕಾಗಿ ಸಾರಿಗೆ ಇಲಾಖೆಯಿಂದ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಲಾಗುತ್ತದೆ. ಪರವಾನಿಗೆ ಪಡೆದ ಆಟೋರಿûಾ ಚಾಲಕರು ತಮ್ಮ ಆಧಾರ್ ಸಂಖ್ಯೆ, ವಾಹನ ಸಂಖ್ಯೆ ಮತ್ತು ಪರವಾನಿಗೆ ಸಂಖ್ಯೆಯನ್ನು ದಾಖಲಿಸಬೇಕಾಗುತ್ತದೆ. ಇದನ್ನು ದೃಢಪಡಿಸಿದ ಬಳಿಕ ಅನುದಾನದ ಮೊತ್ತವನ್ನು ಆನ್‌ಲೈನ್‌ನಲ್ಲಿ ಆಧಾರ್ ಸಂಖ್ಯೆಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಆನ್‌ಲೈನ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಾರಿಗೆ ಇಲಾಖೆ ಮಹೈಟ್ ಜತೆ ಸಭೆ ನಡೆಸಿದ್ದು, ಸಿಬಂದಿ ಕೊರತೆಯಿಂದಾಗಿ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಒಂದರಿಂದ ಎರಡು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಎಂಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಆದಷ್ಟು ಬೇಗ ಪೋರ್ಟಲ್ ಸ್ಥಾಪಿಸಬೇಕು ಎಂದು ಸಾರಿಗೆ ಆಯುಕ್ತ ಅವಿನಾಶ್ ಧಕೆ° ಆಗ್ರಹಿಸಿದ್ದಾರೆ.
ಈ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ಇಲಾಖೆಯ ವೆಬ್‌ಸೈಟ್‌ನಲ್ಲಿ www.transport.maharashtra.gov.in ನಲ್ಲಿ ಪ್ರಕಟಿಸಲಾಗುವುದು. ಎಲ್ಲ ರಿಕ್ಷಾ ಪರವಾನಿಗೆದಾರರು ತಮ್ಮ ಖಾತೆಯನ್ನು ಆಧಾರ್ ಸಂಖ್ಯೆಯೊಂದಿಗೆ ತತ್‌ಕ್ಷಣ ಲಿಂಕ್ ಮಾಡಬೇಕು ಎಂದು ಸಾರಿಗೆ ಇಲಾಖೆ ಮನವಿ ಮಾಡಿದೆ.