Advertisement

ರಿಚ್ಚಿ ಫ‌ಸ್ಟ್‌ ಸಾಂಗ್‌ ರಿಲೀಸ್‌

03:44 PM Nov 17, 2020 | Suhan S |

ನವ ನಾಯಕ ನಟ ರಿಚ್ಚಿ (ಹೇಮಂತ್‌) ಅಭಿನಯಿಸಿ, ನಿರ್ದೇಶಿಸಿರುವ “ರಿಚ್ಚಿ’ ಚಿತ್ರದ ಮೊದಲ ಹಾಡು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಸೋನು ನಿಗಮ್‌ ಧ್ವನಿಯಲ್ಲಿ ಮೂಡಿಬಂದಿರುವ “ಸನಿಹ ನೀನಿರುವಾಗ…’ ಎಂಬ ರೊಮ್ಯಾಂಟಿಕ್‌ ಹಾಡಿಗೆ ಅಗಸ್ತ್ಯ ಸಂತೋಷ್‌ ಸಂಗೀತ ಸಂಯೋಜಸಿದ್ದಾರೆ.

Advertisement

ಸದ್ಯ ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಿರುವ “ರಿಚ್ಚಿ’ ಚಿತ್ರತಂಡ, ನಿಧಾನವಾಗಿ ಚಿತ್ರದ ಪ್ರಚಾರಕಾರ್ಯಗಳಿಗೆ ಚಾಲನೆ ನೀಡಿದೆ. ಇನ್ನು ಸಸ್ಪೆನ್ಸ್‌ – ಥ್ರಿಲ್ಲರ್‌ಕಂ ಲವ್‌ಸ್ಟೋರಿ ಕಥಾಹಂದರ ಹೊಂದಿರುವ ಹೊಸಬರ “ರಿಚ್ಚಿ’ ಚಿತ್ರವನ್ನು ಬೆಂಗಳೂರು, ಮಡಿಕೇರಿ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. “ರಿಚ್ಚಿ’ ಚಿತ್ರಕ್ಕೆ ವೀರೇಶ್‌ ಛಾಯಾಗ್ರಹಣ, ಅರ್ಜುನ್‌ಕಿಟ್ಟು ಸಂಕಲನವಿದೆ.

ಇದನ್ನೂ ಓದಿ :ಸಾವಿತ್ರಿಗೆ ವಿಜಯ ರಾಘವೇಂದ್ರ ಹೀರೋ

ಚಿತ್ರದಲ್ಲಿ ಒಟ್ಟು 4 ಹಾಡುಗಳಿದ್ದು ಅಗಸ್ತ್ಯ ಸಂತೋಷ್‌ ಸಂಗೀತ ನಿರ್ದೇಶನವಿದೆ. “ಮಾರುತಿ ಮೂವೀ ಮೇಕರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರಿಚ್ಚಿ’ ಚಿತ್ರದಲ್ಲಿ ರಿಚ್ಚಿ (ಹೇಮಂತ್‌) ಅವರೊಂದಿಗೆ ನಿಷ್ಕಲಾ, ಮನೋಜ್‌ ಮಿಶ್ರ (ಬಾಂಬೆ),ರಮೇಶ್‌ ಪಂಡಿತ್‌, ಮಿಮಿಕ್ರಿ ಗೋಪಿ, ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಹೊಸ ವರ್ಷದ ಆರಂಭದಲ್ಲಿ ಬಹುತೇಕ ಹೊಸಬರ “ರಿಚ್ಚಿ’ ತೆರೆಗೆ ಬರುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next