Advertisement
ಹಾಗಾದರೆ ಈ “ನ್ಯೂ ಲುಕ್‌ನ ಗುಟ್ಟೇನು?’ ಎಂಬ ಅನೇಕರ ಕುತೂಹಲಕ್ಕೆ ಸ್ವತಃ ಕಪಿಲ್ ಅವರೇ ಉತ್ತರ ನೀಡಿದ್ದಾರೆ. ಇದಕ್ಕೆ ವಿವಿಯನ್ ರಿಚರ್ಡ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ ಅವರೇ ಸ್ಫೂರ್ತಿ ಎಂದಿದ್ದಾರೆ.
“ವಿವಿಯನ್ ರಿಚರ್ಡ್ಸ್ ನನ್ನ ಹೀರೋ. ಅವರದೂ ಇದೇ ಲುಕ್. ಅಂದಮೇಲೆ ನಾನು ಅವರನ್ನು ಅನುಸರಿಸಿದರೆ ತಪ್ಪೇನು? ಹಾಗೆಯೇ ಧೋನಿ… ಅವರು 2011ರಲ್ಲಿ ವಿಶ್ವಕಪ್ ಗೆದ್ದ ಬಳಿಕ ತಲೆಗೂದಲ ಹರಕೆ ಒಪ್ಪಿಸಿದ್ದರು. ನನಗೆ ಈಗ ಈ ರೂಪ ತಾಳಬೇಕು ಎಂದೆನಿಸಿತು…’ ಎಂದು ಕಪಿಲ್ ಹೇಳಿದ ವೀಡಿಯೋ ಒಂದನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವೀಟ್ ಮಾಡಿದೆ. “ನೀವು ನನ್ನಿಂದ ಸರಿಯಾದ ಸ್ಫೂರ್ತಿಯನ್ನೇ ಪಡೆದಿರುವಿರಿ ಫ್ರೆಂಡ್…’ ಎಂದು ರಿಚರ್ಡ್ಸ್ ಕೂಡ ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ. ಕ್ರಿಕೆಟ್ ವಿದಾಯದ ಬಳಿಕ ರಿಚರ್ಡ್ಸ್ ಹೆಚ್ಚು-ಕಡಿಮೆ “ಬಾಲ್ಡಿ’ಯಾಗಿಯೇ ಉಳಿದಿದ್ದಾರೆ. ಈಗ ಕಪಿಲ್ ಕೂಡ ಒಂದು ನೋಟಕ್ಕೆ ಕೆರಿಬಿಯನ್ ಕ್ರಿಕೆಟ್ ದೈತ್ಯನ ಹಾಗೆ ಕಾಣುವುದು ಸುಳ್ಳಲ್ಲ !
Related Articles
Advertisement