ಬೆಂಗಳೂರು: “ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ” ಬಿಡುಗಡೆಯ ಬೆನ್ನಲ್ಲೇ “ರಿಚರ್ಡ್ ಆಂಟನಿ” ಚಿತ್ರದ ಕೆಲಸ ಪ್ರಾರಂಭಿಸುವುದಾಗಿ ನಟ-ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರು ಬುಧವಾರ ತಿಳಿಸಿದ್ದಾರೆ.
“777 ಚಾರ್ಲಿ” ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಸ್ವೀಕರಿಸಿದ ಬಳಿಕ ನಟ ರಕ್ಷಿತ್ ಅವರು, ಬಹು ನಿರೀಕ್ಷೆಯ ಕುತೂಹಲ ಮೂಡಿಸಿರುವ “ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ” ಚಿತ್ರ ಅಕ್ಟೋಬರ್ 27 ರಂದು ತೆರೆಗೆ ಬರಲಿದೆ ಎಂದು ಹೇಳಿದ್ದಾರೆ.
ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ವಿವರ ನೀಡಿ, ಸದ್ಯ “ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಬಿಡುಗಡೆಗೆ ನಾನು ತಯಾರಿ ನಡೆಸುತ್ತಿದ್ದೇನೆ. ಅದರ ನಂತರ, ನಾನು ‘ರಿಚರ್ಡ್ ಆಂಟನಿ’ ಕೆಲಸ ಮುಗಿಸುತ್ತೇನೆ”ಎಂದರು.
“ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ” ಸೆಪ್ಟೆಂಬರ್ 1 ರಂದು ಬಿಡುಗಡೆಯಾಗಿತ್ತು. ಘಟನೆಗಳ 10 ವರ್ಷಗಳ ನಂತರ ಚಿತ್ರಣ ಸೈಡ್ ಬಿ ಆಗಿದೆ. ಪ್ರಣಯ ಪ್ರೇಮಕಥೆ ಚಲನಚಿತ್ರವನ್ನು ಹೇಮಂತ್ ಎಂ.ರಾವ್ ನಿರ್ದೇಶಿಸಿದ್ದಾರೆ. ರಕ್ಷಿತ್ ಶೆಟ್ಟಿ ನಿರ್ಮಿಸಿ, ರುಕ್ಮಿಣಿ ವಸಂತ ಅವರೊಂದಿಗೆ ನಟಿಸಿದ್ದಾರೆ.
ರಕ್ಷಿತ್ ಶೆಟ್ಟಿ ಅವರ ಮುಂದಿನ ಚಿತ್ರ ಹೊಂಬಾಳೆ ಫಿಲ್ಮ್ಸ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ “ರಿಚರ್ಡ್ ಆಂಟನಿ: ಲಾರ್ಡ್ ಆಫ್ ದಿ ಸೀ” ಚಿತ್ರ ತಯಾರಾಗಲಿದೆ.
“ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಅಕ್ಟೋಬರ್ 20 ರಂದು ರಿಲೀಸ್ ಆಗಬೇಕಿತ್ತು, ಕೆಲ ಕಾರಣಗಳಿಂದ ಮುಂದೂಡಲಾಗಿದೆ. ರಕ್ಷಿತ್ ಅವರೊಂದಿಗೆ ರುಕ್ಮಿಣಿ ವಸಂತ್,ಚೈತ್ರ ಆಚಾರ್ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.