Advertisement

ಮಣ್ಣಿನಿಂದಲೇ ಅನ್ನ, ಮಣ್ಣಿನಿಂದಲೇ ಚಿನ್ನ

03:15 PM Dec 06, 2017 | Team Udayavani |

ರಾಣಿಬೆನ್ನೂರ: ರೈತರು ಮಣ್ಣಿನ ಫಲವತ್ತತೆ, ಸಂರಕ್ಷಣೆ ಮತ್ತು ಮಹತ್ವವನ್ನು ಅರಿಯುವುದು ಅವಶ್ಯವಿದೆ. ನೀರು ಮತ್ತು ಮಣ್ಣು ಸಂರಕ್ಷಣೆ ಮಾಡಿದರೆ ರೈತ ಬಡವನಲ್ಲ ಎಂದು ಬಾಗಲಕೋಟೆಯ ಪ್ರಗತಿಪರ ರೈತ ಡಾ| ಮಲ್ಲಣ್ಣ ನಾಗರಾಳ ಹೇಳಿದರು.

Advertisement

ಮಂಗಳವಾರ ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ ಹಾಗೂ ಕೃಷಿ ಇಲಾಖೆ ಇವರ ಆಶ್ರಯದಲ್ಲಿ ನಡೆದ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇತ್ತೀಚಿನ ಯುವಕರು ಕೃಷಿ ಕಡೆಗೆ ಗಮನ ಹರಿಸಬೇಕು ಎಂದರು. ಯುವ ರೈತರು ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ವಿಜ್ಞಾನದ
ಜೊತೆಗೆ ಅನುಭವವನ್ನು ಹಂಚಿಕೊಂಡು ಕೃಷಿಯಲ್ಲಿ ತೊಡಗಿದರೆ ಕೃಷಿ ಲಾಭದಾಯಕ ಚಟುವಟಿಕೆಯಾಗಿ ಮತ್ತು ಮನುಷ್ಯರ ಮತ್ತು
ಪ್ರಾಣಿ, ಪಕ್ಷಿಗಳ ಆರೋಗ್ಯವನ್ನು ಕಾಪಾಡಲು ಸಹಾಯವಾಗುತ್ತದೆ. ಆದ್ದರಿಂದ ಮಣ್ಣನ್ನು ಉಳಿಸಿ, ಮಣ್ಣಿನಿಂದಲೆ ಅನ್ನ, ಮಣ್ಣಿನಿಂದಲೆ
ಚಿನ್ನ, ಮಣ್ಣಿನಿಂದಲೆ ಆರೋಗ್ಯ ಮತ್ತು ಸರ್ವವು ದೊರಕುವುದು ಎಂದರು. ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್‌
ಡಾ| ಸಿ.ಪಿ. ಮನ್ಸೂರ, ಜಿಪಂ ಸದಸ್ಯೆ ಮಂಗಳಾಗೌರಿ ಅರುಣುಕುಮಾರ ಮಾತನಾಡಿದರು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಮಣ್ಣು ವಿಜ್ಞಾನಿ ಡಾ| ಎಸ್‌. ಎಂ. ಪ್ರಸನ್ನ ಅವರು ಮಣ್ಣು ಮತ್ತು ನೀರಿನ ಬಗ್ಗೆ
ತಾಂತ್ರಿಕ ಮಾಹಿತಿ ನೀಡಿದರು. ಜಿಪಂ ಸದಸ್ಯೆ ಗದಿಗೆವ್ವ ಗುಂಡಪ್ಪ ದೇಸಾಯಿ, ತಾಪಂ ಸದಸ್ಯ ಭರಮಪ್ಪ ಉರ್ಮಿ, ಹಿರಿಯ ವಿಜ್ಞಾನಿ ಡಾ| ಗುರುಪ್ರಸಾದ ಜಿ.ಎಸ್‌., ಡಾ| ಗೀತಾ ತಾಮಗಳೆ, ಸಹಾಯಕ ಕೃಷಿ ನಿರ್ದೇಶಕ ಶ್ರೀಧರ, ಉಪ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ ಇದ್ದರು. ಇದೇ ಸಂದರ್ಭದಲ್ಲಿ 25 ರೈತರಿಗೆ ಮಣ್ಣು ಆರೋಗ್ಯ ಚೀಟಿ ವಿತರಣೆ ಮಾಡಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next