Advertisement

Bharamasagara; ಜೀವಾಮೃತವನ್ನು ಗಿಡಗಳಿಗೆ ಪೂರೈಸಲು ರೈತರಿಂದ ವಿನೂತನ ಪ್ರಯತ್ನ

09:47 PM Mar 31, 2024 | Team Udayavani |

ಭರಮಸಾಗರ: ಜೀವಾಮೃತವನ್ನು ಅಡಿಕೆ ಗಿಡಗಳಿಗೆ ಪೂರೈಸಲು ರೈತರು ಹಳೆ ಎತ್ತಿನ ಗಾಡಿಗಳ ಮೊರೆ ಹೋಗುತ್ತಿದ್ದಾರೆ.

Advertisement

ಜೀವಾಮೃತ ಅಡಿಕೆ ಫಸಲು ಬೆಳೆಯಲು ಸರ್ವ ವಿಧದಲ್ಲೂ ಉತ್ತಮ ಎಂಬ ಅಭಿಪ್ರಾಯಕ್ಕೆ ಬಂದಿರುವ ರೈತರು ಪ್ರತಿ ಗಿಡದ ಬುಡಕ್ಕೆ ತಯಾರಿಸಿದ ಜೀವಾಮೃತ ನೀಡಲು ನಾನಾ ಕಸರತ್ತುಗಳನ್ನು ರೈತರು ಕೈಗೊಳ್ಳುತ್ತಿದ್ದಾರೆ.

ರೈತರ ಬಳಿ ಟ್ರ್ಯಾಕ್ಟರ್ ಗಳು ಇರುವುದು ಸಾಮಾನ್ಯವಾಗಿದೆ. ಇನ್ನೂ ಹಳೆಯ ಟೈರ್ ಗಾಲಿಗಳಿರುವ ಎತ್ತಿನ ಗಾಡಿಗಳನ್ನು ಬಳಸಿ ಜೀವಾಮೃತ ಕ್ಕೆಂದೆ ಟ್ರ್ಯಾಕ್ಟರ್ ಗಳಿಗೆ ಟ್ರೈಲರ್ ಮಾದರಿಯಲ್ಲಿ 500,1000 ಲೀಟರ್ ಸಾಮರ್ಥ್ಯದ ಸಿಂಟೆಕ್ಸ್ ಘಟಕಗಳ ಸಂಚಾರಿ ಜೀವಾಮೃತ ಗಾಡಿಗಳನ್ನು ಸಿದ್ದಪಡಿಸಿಕೊಂಡು ಬಳಕೆ ಮಾಡುತ್ತಿದ್ದಾರೆ‌.

ಹೀಗೆ ಜೀವಾಮೃತ ಟ್ರೈಲರ್ ಗಾಡಿಗಳನ್ನು ಅಡಿಕೆ ಸಾಲಿನ ಮದ್ಯದಲ್ಲಿ ಕೊಂಡೊಯ್ಯುವ ಮೂಲಕ ಅಕ್ಕಪಕ್ಕದ ನಾಲ್ಕಾರು ಅಡಿಕೆ ಗಿಡಗಳ ಸಾಲುಗಳಿಗೆ ಏಕ ಕಾಲಕ್ಕೆ ಲೀಟರ್ ನಷ್ಟು ಜೀವಾಮೃತ ಒದಗಿಸಲಾಗುತ್ತದೆ.

ತೋಟಗಳಲ್ಲಿ ಜೀವಾಮೃತ ಸಿಂಟೆಕ್ಸ್ ಅಥವಾ ಡ್ರಮ್ ಗಳನ್ನು ಇಟ್ಟರೆ ಯಾರಾದರೂ ಏನಾದರೂ ಬೆರೆಸಿದರೆ ಎಂಬ ಭಯದ ಹಿನ್ನೆಲೆಯಲ್ಲಿ ಜೀವಾಮೃತ ಘಟಕಗಳನ್ನು ಸಂಚಾರಿ ಘಟಕಗಳನ್ನಾಗಿ ರೈತರು ಬಳಸಲು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ. ಈ ಘಟಕಗಳನ್ನು ಮನೆಗಳ ಬಳಿಯೇ ನಿಲ್ಲಿಸಿಕೊಂಡು ಜೀವಾಮೃತ ತಯಾರಿಕೆಗೆ ಬೇಕಾದ 7 ರಿಂದ 11 ದಿನಗಳ ಸಮಯವನ್ನು ಕಾಯಲು ಸಹಕಾರಿ ಆಗಲಿದೆ ಎನ್ನುತ್ತಾರೆ ಕೃಷಿಕರು.

Advertisement

ಒಟ್ಟಾರೆ ಬರ, ಅಭಾವದ ನೀರು ಇತರೆ ಸಮಸ್ಯೆಗಳ ಮಧ್ಯೆ ರೈತರು ಬಂಪರ್ ಅಡಿಕೆ ಬೆಳೆಯಲು ಒಂದಿಲ್ಲೊಂದು‌ ವಿನೂತನ ಪ್ರಯತ್ನಗಳನ್ನು ನಡೆಸುವುದು ಬಯಲಿಸೀಮೆ ಪ್ರದೇಶಗಳಲ್ಲಿ ಕಂಡುಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next