Advertisement

ಹೊಸಬರ ರಿಚ್ಚಿಗೆ ಚಿನ್ನಿ ಪ್ರಕಾಶ್‌ ಸಾಥ್‌

04:15 PM Oct 02, 2020 | Suhan S |

ಯುವ ಪ್ರತಿಭೆ ರಿಚ್ಚಿ (ಹೇಮಂತ್‌) ಕಥೆ ಬರೆದು ನಿರ್ದೇಶನ ಮಾಡಿರುವ, ಜೊತೆಗೆ ತೆರೆಮೇಲೆ ನಾಯಕ ನಟನಾಗಿಯೂ ಅಭಿನಯಿಸಿರುವ “ರಿಚ್ಚಿ’ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ “ರಿಚ್ಚಿ’ ಚಿತ್ರತಂಡ, ಸದ್ಯ ಕೊನೆಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದೆ. ಇದರ ನಡುವೆಯೇ ನಿಧಾನವಾಗಿ ಚಿತ್ರದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿರುವ ಚಿತ್ರತಂಡ, ಈಗಾಗಲೇ ಚಿತ್ರದ ಫ‌ಸ್ಟ್‌ಲುಕ್‌, ಪೋಸ್ಟರ್‌ ಗಳನ್ನು ಬಿಡುಗಡೆ ಮಾಡಿದ್ದು, ಸಿನಿಪ್ರೇಮಿಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

Advertisement

ಇದೇ ಖುಷಿಯಲ್ಲಿರುವ ಚಿತ್ರತಂಡ, ದಸರಾ ವೇಳೆಗೆ ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ಮಾತನಾಡುವ ಚಿತ್ರದ ನಾಯಕ ಕಂ ನಿರ್ದೇಶಕ ರಿಚ್ಚಿ (ಹೇಮಂತ್‌), “ಇದೊಂದು ಸಸ್ಪೆನ್ಸ್‌-ಥ್ರಿಲ್ಲರ್‌ ಕಂ ಲವ್‌ ಸ್ಟೋರಿ ಇರುವ ಸಿನಿಮಾ. ಇಂದಿನ ಆಡಿಯನ್ಸ್‌ ಬಯಸುವ ಎಲ್ಲ ಥರದ ಎಂಟರ್‌ಟೈನ್ಮೆಂಟ್‌ ಎಲಿಮೆಂಟ್ಸ್‌ “ರಿಚ್ಚಿ’ಯಲ್ಲಿದೆ. ಚಿತ್ರದ ಮತ್ತೂಂದು ಹೈಲೈಟ್ಸ್‌ ಅಂದ್ರೆಇದರಲ್ಲಿರುವಹಾಡುಗಳು. “ರಿಚ್ಚಿ’ಯ 4 ಹಾಡುಗಳಿಗೆ ಅಗಸ್ತ್ಯ ಸಂತೋಷ್‌ ಸಂಗೀತ ಸಂಯೋಜಸಿದ್ದಾರೆ. ಸೋನು ನಿಗಮ್‌, ಕುನಾಲ್‌ ಗಾಂಜಾವಾಲ ಸೇರಿದಂತೆ ಹಲವರು ಹಾಡುಗಳಿಗೆ ಧ್ವನಿಯಾಗಿದ್ದಾರೆ.

ವಿನೋದ್‌, ಗೌಸ್‌ಫೀರ್‌, ಆನಂದ್‌ ಈ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಖ್ಯಾತ ನೃತ್ಯ ನಿರ್ದೇಶಕ ಚಿನ್ನಿ ಪ್ರಕಾಶ್‌ ಚಿತ್ರದ ಹಾಡುಗಳನ್ನು ಕೇಳಿ ಮೆಚ್ಚಿಕೊಂಡಿದ್ದು, ಹಾಡಿಗೆ ಕೊರಿಯೋಗ್ರಫಿ ಮಾಡುತ್ತಿದ್ದಾರೆ. ಚಿತ್ರರಂಗದ ಅನೇಕ ಹಿರಿಯರು ಈಗಾಗಲೇ ಹಾಡುಗಳನ್ನು ಕೇಳಿ ಮೆಚ್ಚಿಕೊಂಡಿದ್ದು, ಕನ್ನಡದ ಮಟ್ಟಿಗೆ ಇದೊಂದು ಮ್ಯೂಸಿಕಲ್‌ ಹಿಟ್‌ ಆಗುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಇದೇ ದಸರಾ ಸಂದರ್ಭದಲ್ಲಿ ಹಾಡುಗಳನ್ನು ರಿಲೀಸ್‌ ಮಾಡುವ ಪ್ಲಾನ್‌ ಇದೆ’ ಎಂದಿದ್ದಾರೆ. “ಮಾರುತಿ ಮೂವೀ ಮೇಕರ್’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ “ರಿಚ್ಚಿ’ ಚಿತ್ರದಲ್ಲಿ ರಿಚ್ಚಿ ಅವರೊಂದಿಗೆ ನಿಷ್ಕಲಾ, ಮನೋಜ್‌ ಮಿಶ್ರ (ಬಾಂಬೆ), ರಮೇಶ್‌ ಪಂಡಿತ್‌, ಮಿಮಿಕ್ರಿ ಗೋಪಿ, ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ವೀರೇಶ್‌ ಛಾಯಾಗ್ರಹಣ, ಅರ್ಜುನ್‌ಕಿಟ್ಟು ಸಂಕಲನವಿದೆ. ­

Advertisement

Udayavani is now on Telegram. Click here to join our channel and stay updated with the latest news.

Next