Advertisement

ರಾಯನ್‌ ಶಿಕ್ಷಣ ಸಂಸ್ಥೆಯಿಂದ ವಾರ್ಷಿಕ ಮಿನಿಥಾನ್‌

04:05 PM Dec 13, 2017 | Team Udayavani |

ನವಿಮುಂಬಯಿ: ರಾಯನ್‌ ಇಂಟರ್‌ ನ್ಯಾಷನಲ್‌ ಮತ್ತು ಸೈಂಟ್‌ ಕ್ಸೇವಿಯರ್ ಶೈಕ್ಷಣಿಕ ಸಂಸ್ಥೆಗಳ ಜಂಟಿ ಆಯೋಜನೆಯಲ್ಲಿ ವಾರ್ಷಿಕ ಮಿನಿಥಾನ್‌ -2017 ಓಟವು ಡಿ. 10 ರಂದು ಆದ್ದೂರಿಯಾಗಿ ನಡೆಯಿತು.

Advertisement

ನವಿಮುಂಬಯಿ ನಗರ ಪಾಲಿಕೆಯ ಮೇಯರ್‌ ಜಯವಂತ ಸುತಾರ್‌, ನವಿ ಮುಂಬಯಿ ಪೋಲಿಸ್‌ ಉಪಾಯುಕ್ತ ಕಿರಣ್‌ ಪಾಟೀಲ್‌, ಸ್ಥಾನೀಯ ನಗರ ಸೇವಕ ರವೀಂದ್ರ ಇಥಾಪೆ ಮತ್ತು ಇತರ ಗಣ್ಯರು ಸೇರಿ ಬಲೂನ್‌ ಹಾಗೂ ರಾಯನ್‌ ಶಿಕ್ಷಣ  ಸಂಸ್ಥೆಯ ಧ್ವಜವನ್ನು ಹಾರಿಸಿ ಮಿನಿಥಾನ್‌ ಓಟಕ್ಕೆ ಚಾಲನೆ ನೀಡಿದರು.

ಮಿನಿಥಾನ್‌ ಓಟದಲ್ಲಿ ರಾಯನ್‌ ವಿದ್ಯಾ ಸಂಸ್ಥೆಯ ಮುಂಬಯಿ, ಥಾಣೆ, ನವಿ ಮುಂಬಯಿ ಮತ್ತು ರಾಯಘಡದಿಂದ 17 ಶಾಲೆಯ 9617 ಮಕ್ಕಳು ಪಾಲ್ಗೊಂಡಿದ್ದರು. ಈ ಓಟವನ್ನು 12 ರ ವಯೋಮಿತಿ, 14 ರ ವಯೋಮಿತಿ, 16 ರ ವಯೋಮಿತಿ ಹಾಗೂ 18 ರ ವಯೋಮಿತಿ ವಿಭಾಗದಲ್ಲಿ ನಡೆಸಲಾಯಿತು. ಶಾಲೆಯ ಆಡಳಿತ ವರ್ಗ, ಶಿಕ್ಷಕ ವೃಂದ, ಮತ್ತು ದೈಹಿಕ ಶಿಕ್ಷಕ ವೃಂದದವರು ಶ್ರಮವಹಿಸಿ ಮಿನಿಥಾನ್‌ ಯಶಸ್ವಿಯಾಗಲು ಸಹಕರಿಸಿದರು. ನೆರೂಲ್‌ ನವಿಮುಂಬಯಿಯಲ್ಲಿ ಸರಪಣಿ ರಚಿಸಿ ಓಟದ ವ್ಯವಸ್ಥೆಯ ಸೌಂದರ್ಯವನ್ನು ಹೆಚ್ಚಿಸಲಾಗಿತ್ತು.

ರಾಯನ್‌ ವಿದ್ಯಾ ಸಂಸ್ಥೆ ದೇಶ-ವಿದೇಶಗಳಲ್ಲಿ ವಿದ್ಯಾ ಸಂಸ್ಥೆ ನಡೆಸುತ್ತಿದ್ದು 1998 ರಿಂದ ಏÇÉಾ ರಾಜ್ಯಗಳಲ್ಲಿ ಮಿನಿಥಾನ್‌ ಓಟ ನಡೆಸುತ್ತಾ ಬಂದಿದೆ. ವಿದ್ಯೆಯೊಂದಿಗೆ ಅಟೋಟ ಸ್ಪರ್ಧೆಗಳ ಮೂಲಕ ನಮ್ಮ ಮಕ್ಕಳನ್ನು ಸದೃಢರನ್ನಾಗಿ ಮಾಡುವುದೆ ನಮ್ಮ ಮೂಲ ಉದ್ದೇಶವಾಗಿದೆ  ಎಂದು ಶಾಲ ನಿರ್ದೇಶಕ, ರಾಯನ್‌ ಪಿಂಟೋ, ಎ. ಎಫ್‌. ಮತ್ತು ನಿರ್ದೇಶಕಿ ಇದೇ ಸಂದರ್ಭದಲ್ಲಿ ನುಡಿದರು. ಶಿಸ್ತು ಮತ್ತು ಶ್ರಮ ನಮ್ಮ ಮೂಲ ಉದೇಶ ಎಂದು ನ್ಪೋರ್ಟ್ಸ್ ಸಮನ್ವಯಕ ಸುನಿಲ್‌ ಪೂಜಾರಿ ಅವರು ಅಭಿಪ್ರಾಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next