Advertisement

ಅಳಿವಿನ ಭೀತಿಯಲ್ಲಿ ರೈನೋಗಳು; ಘೇಂಡಾಮೃಗಗಳಿಗೆ ಪ್ರವಾಹ ತಂದೊಡ್ಡಿದೆ ಸಂಕಷ್ಟ

01:50 PM Jul 20, 2020 | mahesh |

ಈಶಾನ್ಯ ರಾಜ್ಯ ಅಸ್ಸಾಂಗೆ ಮಳೆ, ಪ್ರವಾಹ ಹೊಸತಲ್ಲ. ಆದರೆ, ಈ ವರ್ಷ ಕೋವಿಡ್ ವೈರಸ್‌ ವಿರುದ್ಧದ ಹೋರಾಟದ ನಡುವೆಯೇ ಪ್ರವಾಹದ ವಿರುದ್ಧವೂ ಸೆಣಸಬೇಕಾದ ಅನಿವಾರ್ಯತೆಗೆ ರಾಜ್ಯ ಸಿಲುಕಿದೆ. ಇಲ್ಲಿನ 33 ಜಿಲ್ಲೆಗಳ ಪೈಕಿ 25 ಜಿಲ್ಲೆಗಳು ಮಳೆ, ಪ್ರವಾಹದಿಂದ ತತ್ತರಿಸಿಹೋಗಿದ್ದು, 40 ಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ. ಅದರಲ್ಲೂ ವಿಶ್ವವಿಖ್ಯಾತ ಕಾಜಿರಂಗಾ ರಾಷ್ಟ್ರೀಯ ಉದ್ಯಾನದಲ್ಲಿನ ವನ್ಯಜೀವಿಗಳು ತೀವ್ರ ಸಂಕಷ್ಟಕ್ಕೆ ಗುರಿಯಾಗಿವೆ. ಅಸ್ಸಾಂನ ಹೆಮ್ಮೆ ಎಂದೇ ಕರೆಯಲ್ಪಡುವ ಒಂದು ಕೊಂಬಿನ ಘೇಂಡಾಮೃಗಗಳು(ರೈನೋ) ವಿನಾಶದಂಚಿನಲ್ಲಿದ್ದು, ಅವುಗಳ ಉಳಿವಿಗೆ ಈ ಪ್ರವಾಹ ಮತ್ತಷ್ಟು ಅಡ್ಡಿ ಉಂಟುಮಾಡಿದೆ.

Advertisement

ಇಬ್ಬರು ಶತ್ರುಗಳು
ಅಸ್ಸಾಂನ ರೈನೋಗಳಿಗೆ ಇಬ್ಬರು ಶತ್ರುಗಳು. ಒಂದು ಪ್ರವಾಹ, ಮತ್ತೂಂದು ಬೇಟೆಗಾರರು. ಬೇಟೆಯ ವಿರುದ್ಧ ಅರಣ್ಯ ಅಧಿಕಾರಿಗಳು ದಶಕಗಳಿಂದ ನಡೆಸುತ್ತಿರುವ ಹೋರಾಟಕ್ಕೆ ಇತ್ತೀಚೆಗಷ್ಟೇ ಗೆಲುವು ದೊರಕತೊಡಗಿದೆ. ಅಷ್ಟರಲ್ಲೇ, ಪ್ರಕೃತಿ ವಿಕೋಪವು ರೈನೋಗಳ ಜೀವಕ್ಕೆ ಅಪಾಯ ತಂದೊಡ್ಡಿದೆ. ಕಾಜಿರಂಗಾ ಉದ್ಯಾನದ ಶೇ.95 ಭಾಗ ಜಲಾವೃತವಾಗಿದ್ದು, ಉದ್ಯಾನದೊಳಗಿನ 223 ಅರಣ್ಯ ಶಿಬಿರಗಳ ಪೈಕಿ 153 ಮುಳುಗಡೆಯಾಗಿವೆ.


3,500 ಜಗತ್ತಿನಲ್ಲಿ ಉಳಿದಿರುವ ಒಂದು ಕೊಂಬುಳ್ಳ ಘೇಂಡಾಮೃಗಗಳ ಸಂಖ್ಯೆ
2,400 ಈ ಪೈಕಿ ಕಾಜಿರಂಗಾ ದಲ್ಲಿರುವ ಘೇಂಡಾಮೃಗಗಳು
430 ಚ.ಕಿ.ಮೀ. ಕಾಜಿರಂಗಾ ಉದ್ಯಾನದ ಒಟ್ಟು ವಿಸ್ತೀರ್ಣ
ಶೇ.95 ಪ್ರಸ್ತುತ ಪ್ರವಾಹ ದಿಂದಾಗಿ ಜಲಾವೃತಗೊಂಡ ಉದ್ಯಾನದ ಭಾಗ
76 ಈ ವರ್ಷ ಮಳೆ, ಪ್ರವಾಹಕ್ಕೆ ಬಲಿಯಾದ ವನ್ಯಜೀವಿಗಳು
45  ಗಾಯಗೊಂಡಿರುವ ಪ್ರಾಣಿಗಳು
121 ಅರಣ್ಯಾಧಿಕಾರಿಗಳು ರಕ್ಷಿಸಿರುವ ಪ್ರಾಣಿಗಳ ಸಂಖ್ಯೆ 
02 ಈ ವರ್ಷ ಕೊಚ್ಚಿಹೋಗಿ ಸತ್ತ ಘೇಂಡಾಮೃಗಗಳು
30 2017ರ ಪ್ರವಾಹದಲ್ಲಿ ಮೃತ
17 2019ರಲ್ಲಿ ಕೊಚ್ಚಿಹೋದ ಖಡ್ಗಮೃಗಗಳು

Advertisement

Udayavani is now on Telegram. Click here to join our channel and stay updated with the latest news.

Next