Advertisement

ಯೂಟರ್ನ್! ಸುಶಾಂತ್ ಸಾವಿನ ಹಿಂದೆ ಸಹೋದರಿ ಕೈವಾಡ? ವೈದ್ಯರ ವಿರುದ್ಧ ದೂರು ಕೊಟ್ಟ ರಿಯಾ

05:53 PM Sep 07, 2020 | Nagendra Trasi |

ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ತನಿಖಾ ಸಂಸ್ಥೆ ವತಿಯಿಂದ ವಿಚಾರಣೆ ಎದುರಿಸುತ್ತಿದ್ದ ನಟಿ ರಿಯಾ ಚಕ್ರವರ್ತಿ, ಸೋಮವಾರ (ಸೆಪ್ಟೆಂಬರ್ 07, 2020) ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ವಿರುದ್ಧ ದೂರು ನೀಡಿರುವ ಘಟನೆ ನಡೆದಿದೆ.

Advertisement

ಸುಳ್ಳು ಔಷಧ ಚೀಟಿ ನೀಡಿ ಸುಶಾಂತ್ ಸಿಂಗ್ ಅವರ ಸಾವಿಗೆ ಸಹೋದರಿಯೇ ಕಾರಣ ಎಂದು ಆರೋಪಿಸಿರುವ ರಿಯಾ ಚಕ್ರವರ್ತಿ, ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ , ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯ ಡಾ.ತರುಣ್ ಕುಮಾರ್ ಮತ್ತು ಇತರರ ವಿರುದ್ಧ ದೂರು ದಾಖಲಿಸಿದ್ದಾರೆ. ಸುಶಾಂತ್ ಗೆ ಸಮರ್ಪಕ ಔಷಧ ನೀಡದೆ ಅನಾರೋಗ್ಯಕ್ಕೆ ಈಡಾಗುವ ಔಷಧ ನೀಡಿರುವುದಾಗಿ ದೂರಿದ್ದಾರೆ.

ಕಾನೂನು ಬಾಹಿರ ಔಷಧ ಸೇವಿಸಿದ 5 ದಿನದೊಳಗೆ ಸುಶಾಂತ್ ಸಿಂಗ್ ಸಾವನ್ನಪ್ಪಿರುವುದಾಗಿ ರಿಯಾ ದೂರಿನಲ್ಲಿ ತಿಳಿಸಿದ್ದಾರೆ. ಸುಶಾಂತ್ ವಿಚಾರದಲ್ಲಿ ಸಹೋದರಿ ಪ್ರಿಯಾಂಕಾ ಮತ್ತು ಡಾ.ತರುಣ್ ಬಲವಂತವಾಗಿ ನಡೆದುಕೊಂಡ ರೀತಿಯಾಗಿದ್ದು, ಈ ಬಗ್ಗೆ ತನಿಖೆಯಾಗಲೇಬೇಕಾಗಿದೆ. ಮೃತ ಸುಶಾಂತ್ ಸಿಂಗ್ ಗೆ ಹೇಗೆ ಕಾನೂನು ಬಾಹಿರವಾದ ಔಷಧ ನೀಡಿದ್ದಾರೆ ಎಂಬುದು ಬಯಲಾಗಬೇಕು ಎಂದು ರಿಯಾ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next