Advertisement

Rewind: 2024ರಲ್ಲಿ ನಿಷೇಧಿಸಲಾದ ಆಹಾರ ಉತ್ಪನ್ನಗಳ ಪಟ್ಟಿ ಇಲ್ಲಿದೆ

05:35 PM Dec 13, 2024 | ಶ್ರೀರಾಮ್ ನಾಯಕ್ |

ಈ ವರ್ಷ, ಭಾರತ ಸರ್ಕಾರ ಮತ್ತು ಆಹಾರ ಸುರಕ್ಷತಾ ಇಲಾಖೆ (FSSAI) ಗ್ರಾಹಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅನೇಕ ಆಹಾರ ಮತ್ತು ಆಹಾರ ಉತ್ಪನ್ನಗಳನ್ನು ನಿಷೇಧಿಸಿದೆ. ಹೋಟೆಲ್ ಹಾಗೂ ರಸ್ತೆ ಬದಿಯ ಅಂಗಡಿಗಳಲ್ಲಿ ಆಹಾರ ತಿಂದು ಹಲವು ಮಂದಿ ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಂಡಿದ್ದಾರೆ ಇದರ ಹಿನ್ನೆಲೆಯಲ್ಲಿ ಎಚ್ಚೆತ್ತ ಸರಕಾರ ಮತ್ತು ಆಹಾರ ಇಲಾಖೆ ಹಲವಾರು ಆಹಾರ ಮತ್ತು ಆಹಾರ ಉತ್ಪನ್ನಗಳನ್ನು ನಿರ್ಬಂಧಿಸಿದ್ದು ಈ ವರ್ಷ ಯಾವೆಲ್ಲಾ ಆಹಾರ ಉತ್ಪನ್ನಗಳನ್ನು ನಿಷೇಧಿಸಲಾಗಿದೆ ಎಂಬುದರ ಪಟ್ಟಿ ಇಲ್ಲಿದೆ.

Advertisement

1.ಕೃತಕ ಬಣ್ಣಗಳಿಂದ ತಯಾರಿಸಿದ ಸಿಹಿತಿಂಡಿಗಳು ಮತ್ತು ಬೇಕರಿ ಉತ್ಪನ್ನಗಳು
ಕೃತಕ ಬಣ್ಣದ ಸಿಹಿತಿಂಡಿಗಳು ಮತ್ತು ಬೇಕರಿ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಬಾಯಿ ಚಪಲ ತೀರಿಸಿಕೊಳ್ಳುವ ಭರದಲ್ಲಿ ನಾವು ಆಹಾರವನ್ನು ತಿಂದು ಇಲ್ಲದ ಕಾಯಿಲೆಗಳಿಗೆ ತುತ್ತಾಗುತ್ತೇವೆ. ಸಾಮಾನ್ಯ ಹೊಟ್ಟೆ ನೋವಿನಿಂದ ಹಿಡಿದು ಜೀವ ಹಿಂಡುವ ಕ್ಯಾನ್ಸರ್‌ ನಂತಹ ರೋಗಗಳಿಗೆ ತುತ್ತಾಗುತ್ತೇವೆ.ಕನ್ನಡದಲ್ಲಿ ಒಂದು ಗಾದೆಯಿದೆ, ”ಊಟ ಬಲ್ಲವನಿಗೆ ರೋಗವಿಲ್ಲ ಎಂದು. ಹಾಗಾಗಿ ನಾವು ತಿನ್ನುವ ಆಹಾರವು ಒಳ್ಳೆಯ ಗುಣಮಟ್ಟ ಇದ್ದರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಬಹುದು. ಕೃತಕ ಬಣ್ಣಗಳ ಬಳಕೆಯು ಕ್ಯಾನ್ಸರ್ ಮತ್ತು ಅಲರ್ಜಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು ಎಂದು ವರದಿ ತಿಳಿಸಿದೆ.

ಕರ್ನಾಟಕ ಸೇರಿದಂತೆ ಕೆಲವು ರಾಜ್ಯದಲ್ಲಿ ಕಲರ್​ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿ, ಪಾನಿಪೂರಿ ಹಾಗೂ ಕೆಲವೊಂದು ಕೇಕ್ ಗಳಲ್ಲಿ ಅಪಾಯಕಾರಿ ಕೃತಕ ಬಣ್ಣಗಳನ್ನು ಬೆರೆಸುವುದನ್ನು ಸರ್ಕಾರ ನಿರ್ಬಂಧಿಸಿದೆ.

2.ಅಧಿಕ ಟ್ರಾನ್ಸ್-ಫ್ಯಾಟ್ ಇರುವ ಆಹಾರಗಳು
ನಾವೆಲ್ಲರೂ ಸಾಮಾನ್ಯವಾಗಿ ಕೊಬ್ಬಿನಾಂಶ ಇರುವ ಆಹಾರವನ್ನು ಸೇವಿಸಲು ಇಷ್ಟಪಡುತ್ತೇವೆ. ಆದರೆ ಈ ವರ್ಷ ಹೆಚ್ಚಿನ ಟ್ರಾನ್ಸ್ ಫ್ಯಾಟ್ ಆಹಾರವನ್ನು ನಿಷೇಧಿಸಲಾಗಿದೆ.

ಭಾರತವು ಸೇರಿದಂತೆ ಕೆಲ ದೇಶಗಳು ಟ್ರಾನ್ಸ್­ಫ್ಯಾಟ್­ಗಳನ್ನು ಆಹಾರ ಪೂರೈಕೆಯಿಂದ ತೆಗೆದುಹಾಕಿದೆ. ಟ್ರಾನ್ಸ್ ಫ್ಯಾಟ್ ಹೃದ್ರೋಗ ಮತ್ತು ಬೊಜ್ಜಿನ ಅಪಾಯವನ್ನು ಹೆಚ್ಚಿಸುತ್ತದೆ.

Advertisement

ಇದರಿಂದಾಗಿ ಚಿಪ್ಸ್ ಮತ್ತು ಹುರಿದ ತಿಂಡಿಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕಲಾಗಿದೆ.

3. ಅಧಿಕ ಸೋಡಿಯಂ ಜಂಕ್ ಆಹಾರಗಳು
ನಾವೆಲ್ಲರೂ ಜಂಕ್ ಫುಡ್‌ಗಳನ್ನು ಸೇವಿಸಲು ಇಷ್ಟಪಡುತ್ತೇವೆ. ಆದರೆ ಅತಿಯಾದ ಉಪ್ಪು ಸೇವನೆಯು ರಕ್ತದೊತ್ತಡ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.


ಆದ್ದರಿಂದ, ಈ ವರ್ಷ ಅನೇಕ ತ್ವರಿತ ನೂಡಲ್ಸ್ , ರೆಡಿ-ಟು-ಈಟ್, ಹಾಗೂ ಇನ್ನಿತರ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

4.ಅವಧಿ ಮೀರಿದ ಸಮುದ್ರ ಆಹಾರ ಉತ್ಪನ್ನಗಳು
ಅವಧಿ ಮೀರಿದ ಸಮುದ್ರ ಆಹಾರವನ್ನು ನಿಷೇಧಿಸಲಾಗಿದೆ. ಆಹಾರ ವಿಷ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದಾಗಿ ಹಳಸಿದ ಸಮುದ್ರ ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ.

5. ನಕಲಿ ಸಾವಯವ ಉತ್ಪನ್ನಗಳು
ಅನೇಕ “ಸಾವಯವ” ಬ್ರಾಂಡ್‌ಗಳನ್ನು ತಪ್ಪಾಗಿ ಲೇಬಲ್ ಮಾಡುವುದು ಮತ್ತು ಕೃತಕ ರಾಸಾಯನಿಕಗಳ ಬಳಕೆಯಿಂದಾಗಿ “ಸಾವಯವ” ಬ್ರ್ಯಾಂಡ್‌ ಉತ್ಪನ್ನಗಳ ಮೇಲೆ ಕ್ರಮ ಕೈಗೊಳ್ಳಲಾಗಿದೆ.

ನಕಲಿ ಸಾವಯವ ಉತ್ಪನ್ನಗಳಿಂದ ಗ್ರಾಹಕರಿಗೆ ವಂಚನೆಯಾಗುವುದನ್ನು ತಪ್ಪಿಸಲು ಸರ್ಕಾರ ಕ್ರಮ ಕೈಗೊಳ್ಳಲಾಗಿದೆ.

6. ಎನರ್ಜಿ ಡ್ರಿಂಕ್ ನಿಷೇಧ
ಕೆಲವು ಬ್ರಾಂಡ್‌ಗಳ ಎನರ್ಜಿ ಡ್ರಿಂಕ್ಸ್ ಗಳನ್ನು ನಿಷೇಧಿಸಲಾಗಿದೆ. ಕೆಫೀನ್, ಸಕ್ಕರೆ ಮತ್ತು ಇನ್ನಿತರ ಅಂಶಗಳನ್ನು ಎನರ್ಜಿ ಡ್ರಿಂಕ್ಸ್​ ಹೊಂದಿರುತ್ತದೆ. ಇವು ದೇಹವನ್ನು ರಿಫ್ರೆಶ್ ಮಾಡುತ್ತದೆ ನಿಜ, ಆದರೆ ಎನರ್ಜಿ ಡ್ರಿಂಕ್ಸ್ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಕೂಡ ಉಂಟಾಗುತ್ತವೆ.


ಅತಿಯಾಗಿ ಕುಡಿಯುವುದರಿಂದ ಹೃದಯದ ಸಮಸ್ಯೆಗಳು ಬರಬಹುದು. ಇದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದರಿಂದ ಕೆಲವು ಎನರ್ಜಿ ಡ್ರಿಂಕ್ ಬ್ರಾಂಡ್‌ಗಳನ್ನು ಮಾರುಕಟ್ಟೆಯಿಂದ ತೆಗೆದುಹಾಕಲಾಗಿದೆ.

*ಶ್ರೀರಾಮ್‌ ನಾಯಕ್

Advertisement

Udayavani is now on Telegram. Click here to join our channel and stay updated with the latest news.

Next