Advertisement

ಕ್ರಾಂತಿಕಾರಿ ಭಗತ್‌ಸಿಂಗ್‌ ಜಯಂತಿ ಆಚರಣೆ

05:20 PM Sep 29, 2019 | Suhan S |

ಗದಗ: ತಾಲೂಕಿನ ಕುರ್ತಕೋಟಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾ ಲಯದಲ್ಲಿ ಭಗತ್‌ ಸಿಂಗ್‌ ವಿವಿಧೋದ್ದೇಶಗಳ ಟ್ರಸ್ಟ್‌ ವತಿಯಿಂದ ಕಾಂತ್ರಿಕಾರಿ ಭಗತ್‌ಸಿಂಗ್‌ ಅವರ 112ನೇ ಜಯಂತಿ ಆಚರಣೆ ಮತ್ತು ಪ್ರಬಂಧ ಸ್ಪರ್ಧೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು.

Advertisement

ಕಾಲೇಜಿನ ಪ್ರಾಚಾರ್ಯ ಎಚ್‌. ಎಸ್‌. ರಾಟೂರು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಪಿಡಿಒ ಕೆ.ಎಲ್‌. ಪೂಜಾರ, ಭಗತ್‌ ಸಿಂಗ್‌ ವಿವಿಧೋದ್ದೇಶಗಳ ಟ್ರಸ್ಟ್‌ ಅಧ್ಯಕ್ಷ ಪ್ರಭು ಪ್ರಭಯ್ಯನಮಠ, ಉಪಾಧ್ಯಕ್ಷ ಮಹೇಶ್ವರಯ್ಯ ಹಿರೇಮಠ, ಸದಸ್ಯರಾದ ಪ್ರಭು ಎ.ಎಚ್‌, ಮಂಜುನಾಥ ಬಿ.ಎ., ಶಿವಾನಂದ ಡಿ.ಎಸ್‌, ವಿಶ್ವನಾಥ ಎನ್‌.ಎಂ, ಮಂಜುನಾಥ ಪಿ.ಬಿ, ಕಿರಣ ಎಚ್‌.ಎಚ್‌, ದೇವರಡ್ಡಿ ಎಸ್‌.ಎಚ್‌, ಪ್ರಭು ಬಿ.ಟಿ, , ವೀರೇಶ ಎಂ.ಬಿ., ಕಾಲೇಜು ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು. ಐಶ್ವರ್ಯ ಬಾಳಿಕಾಯಿ ನಿರೂಪಿಸಿದರು. ಭರತ್‌ ಕುಮಾರ ವಂದಿಸಿದರು.

ಬಹುಮಾನ ವಿತರಣೆ: ಸ್ವಾತಂತ್ರ್ಯ ಹೋರಾಟಗಾರ ಭಗತ್‌ ಸಿಂಗ್‌ ಜಯಂತಿ ನಿಮಿತ್ತ ಗ್ರಾಮದ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿತ್ತು. ಪ್ರೌಢಶಾಲೆವಿಭಾಗದಲ್ಲಿ ಕೈರುಂನ್‌ ಎಚ್‌.ಎನ್‌ (ಪ್ರಥಮ), ಚೈತ್ರಾ ಸೋಮಣ್ಣನವರ (ದ್ವಿತೀಯ), ಚನ್ನಬಸಯ್ಯ ನಮಸ್ತೆಮಠ (ತೃತೀಯ) ಸ್ಥಾನ ಪಡೆದರು. ಕಾಲೇಜು ವಿಭಾಗದಲ್ಲಿ ಐಶ್ವರ್ಯ ಬಾಳಿಕಾಯಿ (ಪ್ರ), ದೀಪಾ ಅಡರಕಟ್ಟಿ (ದ್ವಿ) ಮತ್ತು ದೀಪಾ ಚನ್ನಾಪೂರ (ತೃ) ಸ್ಥಾನ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next