Advertisement
ಈ ಬೈಕಿನ ಬ್ಯಾಟರಿ ಒಂದುಚಾರ್ಚ್ಗೆ 156 ಕಿ.ಮೀ. ದೂರದ ವರೆಗೆ ಚಲಿಸುತ್ತದೆಂದು ಹೇಳಲಾಗಿದೆ. ಗರಿಷ್ಠ ವೇಗ 85 ಕಿ.ಮೀ. ಇದ್ದು, ಎರಡೂ ಚಕ್ರಗಳಿಗೆ ಡಿಸ್ಕ್ ಬ್ರೇಕ್‌ಗಳು ಇರಲಿವೆ. ಜತೆಗೆ, ಕೃತಕ ಬುದ್ಧಿಮತ್ತೆಯ ತಂತ್ರಜ್ಞಾನವೂ ಇದರಲ್ಲಿ ಇರಲಿದ್ದು, ಬ್ಲೂಟೂತ್ ಕನೆಕ್ಟಿವಿಟಿ, ದೂರದಲ್ಲೇ ನಿಂತು ಸ್ಮಾರ್ಟ್‌ಫೋನ್ ಮೂಲಕ ಬೈಕ್ ಸ್ಟಾರ್ಟ್ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ರೆಬೆಲ್ ರೆಡ್ ಹಾಗೂ ಕಾಸ್ಮಿಕ್ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಇದು ಲಭ್ಯವಾಗಲಿದ್ದು, ಇದರ ಬೆಲೆ ಅಂದಾಜು 1 ಲಕ್ಷ ರೂ. ಇರಬಹುದೆಂದು ನಿರೀಕ್ಷಿಸಲಾಗಿದೆ.