ಕೈಗೆಟುಕುವ ಬೆಲೆಯೊಂದಿಗೆ ಅತ್ಯುತ್ತಮ ಮೈಲೇಜ್‌ನ ಗುಣಲಕ್ಷಣದೊಂದಿಗೆ ಮಾರುಕಟ್ಟೆ ಪ್ರವೇಶಿಸಿರುವ ರಿವೋಲ್ಟ್ ಎಲೆಕ್ಟ್ರಿಕ್ ಬೈಕ್‌ಗಳು ಆಕರ್ಷಣೀಯವಾಗಿದ್ದು, ಬಿಡುಗಡೆಯ ಮುಂದಿನ ಹಂತವಾಗಿ ವಿತರಣಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ.
ಪುಣೆ ಮೂಲದ ರಿವೋಲ್ಟ್ ಸಂಸ್ಥೆ ಸದ್ಯ ಪುಣೆ ಮತ್ತು ದೆಹಲಿ ನಗರಗಳಲ್ಲಿ ಮಾತ್ರ ಹೊಸ ಎಲೆಕ್ಟ್ರಿಕ್ ಬೈಕ್‌ಗಳ ವಿತರಣೆಗೆ ಚಾಲನೆ ನೀಡಿದ್ದು, ಕೆಲವೇ ದಿನಗಳ ಅಂತರದಲ್ಲಿ ದೇಶದ ಇತರೆ ಪ್ರಮುಖ ನಗರಗಳಲ್ಲಿಯೂ ಮಾರಾಟ ಜಾಲ ತೆರೆಯುವ ಸೂಚನೆ ನೀಡಿದೆ. ತನ್ನ ಮೊದಲ ಪ್ರಯತ್ನದಲ್ಲೇ ರಿವೋಲ್ಟ್ ಸಂಸ್ಥೆ ವಿನೂತನ ಮಾದರಿಯ ಆರ್‌ವಿ 300 ಮತ್ತು ಆರ್‌ವಿ 400 ಎನ್ನುವ ಎರಡು ಎಲೆಕ್ಟ್ರಿಕ್ ಬೈಕಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದ್ದು, ಬೈಕ್ ಬೆಲೆಯಲ್ಲಿಯೂ ಭಾರೀ ರಿಯಾಯಿತಿ ಇದೆ.
ಕೇಂದ್ರ ಸರಕಾರ ಎಲೆಕ್ಟ್ರಿಕ್ ವಾಹನ ಮಾರಾಟದತ್ತ ಹೆಚ್ಚಿನ ಆಸಕ್ತಿ ತೋರಿಸಿದ್ದು, ಜಿಎಸ್‌ಟಿ ಮತ್ತ ತೆರಿಗೆ ದರದಲ್ಲಿ ಇಳಿಕೆ ಮಾಡುವುದರೊಂದಿಗೆ ವಿನಾಯಿತಿ ಮತ್ತು ಸಬ್ಸಡಿ ಯೋಜನೆಗಳನ್ನು ನೀಡಿದೆ. ಈ ಪರಿಣಾಮ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಿದೆ ಎಂದು ಕಂಪೆನಿ ಪ್ರಕಟನೆ ತಿಳಿಸಿದೆ.
ಇನ್ನೂ ಎಲೆಕ್ಟ್ರಿಕ್ ಬೈಕ್‌ಗಳ ಆವೃತ್ತಿಯನ್ನು ತಿಂಗಳ ಇಎಂಐ ಆಧಾರದ ಮೇಲೆಯೂ ಲಭ್ಯವಿದ್ದು, 37 ತಿಂಗಳ ಅವಧಿಯ ಲೆಕ್ಕದಲ್ಲಿ ತಿಂಗಳಿಗೆ ರೂ.2999(ಆರ್‌ವಿ300), ರೂ.3499(ಆರ್‌ವಿ400 ಬೆಸ್) ಮತ್ತು ರೂ.3999(ಆರ್‌ವಿ400 ಪ್ರೀಮಿಯಂ) ದರವನ್ನು ನಿಗದಿ ಮಾಡಿದೆ.
ಒಂದೇ ಹಂತದಲ್ಲಿ ದರ ಪಾವತಿಸುವ ಗ್ರಾಹಕರಿಗೆ ಎಕ್ಸ್ ಶೋರೂಂ ಪ್ರಕಾರ ಆರ್‌ವಿ 300 ಬೈಕಿಗೆ ರೂ.84,999 ಹಾಗೂ ಆರ್‌ವಿ 400 ಪ್ರೀಮಿಯಂ ಬೈಕಿಗೆ ರೂ.98,999 ದರ ನಿಗದಿಪಡಿಸಿದೆ. ಹೀಗಾಗಿ ಗ್ರಾಹಕರು ತಮ್ಮ ಅನುಕೂಲಕ್ಕೆ ತಕ್ಕಂತೆ ಇಎಂಐ ಅಥವಾ ಪೂರ್ಣ ಪ್ರಮಾಣದ ದರ ಪಾವತಿಸಿ ಬೈಕ್‌ಗಳನ್ನು ಖರೀದಿಸ ಬಹುದಾಗಿದ್ದು, ಇದು ಇತರೆ ಆಟೋ ಉತ್ಪಾದನಾ ಸಂಸ್ಥೆಗಳಿಂತ ವಿಭಿನ್ನವಾಗಿದೆ.