Advertisement
ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು 2023-24ನೇ ಸಾಲಿನಲ್ಲಿ ರಾಜ್ಯದ ಸರಕಾರಿ ಪ್ರೌಢಶಾಲೆಗಳ 9ನೇ ತರಗತಿ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ತರಬೇತಿ ನೀಡಲು ಪ್ರತೀ ಶಾಲೆಗೆ ಘಟಕ ವೆಚ್ಚ 3 ಸಾವಿರ ರೂ.ಗಳಂತೆ ಎಲ್ಲ ಜಿಲ್ಲೆಗಳ 5,307 ಶಾಲೆಗಳಿಗೆ ಸುಮಾರು 1.59 ಕೋಟಿ ರೂ.ಗಳನ್ನು ಸರಕಾರ ಮಂಜೂರುಗೊಳಿಸಿದೆ.
Related Articles
ನವೆಂಬರ್ ಅಂತ್ಯದೊಳಗೆ ಆರ್ಹ ತರಬೇತುದಾ ರರನ್ನು ಆಯ್ಕೆ ಮಾಡಿ ಎಸ್‌ಡಿಎಂಸಿ ಸಭೆ ಕರೆದು ಶಿಕ್ಷಕರ ಸಮ್ಮುಖದಲ್ಲಿ ವಿದ್ಯಾರ್ಥಿನಿಯರ ಹಿತರಕ್ಷಣೆ ಕೇಂದ್ರವಾಗಿಟ್ಟುಕೊಂಡು ದೂರು ಬರದಂತೆ ಪರಿಣಾಮಕಾರಿ ಯಾಗಿ ತರಬೇತಿ ನೀಡಬೇಕಿದೆ. ತರಬೇತಿ ವೇಳೆ ದೈಹಿಕ ಶಿಕ್ಷಣ ಶಿಕ್ಷಕರ ಉಪಸ್ಥಿತಿ ಕಡ್ಡಾಯ.
Advertisement
ಕೇವಲ 7 ತಾಸು!ಮರಳಿ ಆರಂಭಿಸಿದ ಆತ್ಮರಕ್ಷಣೆ ಕಲೆ ತರಬೇತಿಯ ಒಟ್ಟು ಅವಧಿ ಕೇವಲ 7 ತಾಸು. ಇದರಿಂದ ಹೆಚ್ಚಿನ ಪ್ರಯೋಜನವಾಗದು ಎನ್ನುವ ಅಭಿಪ್ರಾಯ ಪೋಷಕರದು. ಕಡಿಮೆ ಅವಧಿಯಾದ್ದರಿಂದ ಕರಾಟೆ ಶಿಕ್ಷಕರು ತರಬೇತಿ ನೀಡಲು ಹಿಂದೇಟು ಹಾಕುವ ಸಂಭವವೇ ಹೆಚ್ಚು. ಕನಿಷ್ಠ 3ರಿಂದ 4 ತಿಂಗಳ ಅವಧಿಗೆ ನಿಗದಿಪಡಿಸಿದ್ದರೆ ಹಳ್ಳಿಯ ಮಕ್ಕಳಿಗೆ ಅನುಕೂಲವಾಗುತ್ತಿತ್ತು ಎಂದು ರಾಜ್ಯ ಕರಾಟೆ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಪೂಜಾರಿ ಬೆಳ್ಮಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಬಾಲಕಿಯರ ಆತ್ಮರಕ್ಷಣೆ ಕಲೆ ಯೋಜನೆ ಮರು ಜಾರಿಯಾಗಲಿದ್ದು, ನವೆಂಬರ್ – ಡಿಸೆಂಬರ್ ಅವಧಿಯಲ್ಲಿ ತರಬೇತಿ ನೀಡಲಾಗುವುದು. ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ.
– ಗಣಪತಿ, ದಯಾನಂದ ನಾಯಕ್ ಡಿಡಿಪಿಐಗಳು, ಉಡುಪಿ, ದಕ್ಷಿಣ ಕನ್ನಡ ಹೆಣ್ಣು ಮಕ್ಕಳ ರಕ್ಷಣೆ ತರಬೇತಿಯ ಉದ್ದೇಶ. ಆದರೆ ಅಲ್ಪಾವಧಿಯ ತರಬೇತಿಯಿಂದ ವಿಶೇಷ ಪ್ರಯೋಜನವಾಗದು. ಪುನಾರಂಭಿಸಿದ್ದರೂ ಆರ್ಥಿಕ ಭಾರದ ನೆಪವೊಡ್ಡಿ ಕಡಿಮೆ ಅವಧಿಗೆ ಇಳಿಸಲಾಗಿದೆ. ಅವಧಿ ಹೆಚ್ಚಿಸುವಂತೆ ಮನವಿ ಸಲ್ಲಿಸಲಾಗುವುದು.
– ನದೀಮ್, ಅಧ್ಯಕ್ಷ, ರಾಜ್ಯ ಕೀಡಾ ಕರಾಟೆ ಶಿಕ್ಷಕರ ಸಂಘ ಬೆಂಗಳೂರು