Advertisement
ಕುಡಿಯುವ ನೀರಿಗೂ ತತ್ವಾರ ಎದುರಿಸುವ ಮೂಲಕ ಭೀಕರ ಬರಕ್ಕೆ ಹೆಸರಾಗಿರುವ ವಿಜಯಪುರ ಜಿಲ್ಲೆಯ ರೈತರು ಕಠಿಣ ಪರಿಶ್ರಮದ ಫಲವಾಗಿ ಕಬ್ಬು ಬೆಳೆಯುತ್ತಿದ್ದಾರೆ. ಪರಿಣಾಮ ಇಂಡಿ, ಸಿಂದಗಿ ಭಾಗದಲ್ಲಿ ಕರ್ನಾಟಕ ಮಾತ್ರವಲ್ಲದೇ ಮಹಾರಾಷ್ಟ್ರದ ರಾಜಕೀಯ ನಾಯಕರ ಮಾಲೀಕತ್ವದ ನಾಲ್ಕೆಂದು ಖಾಸಗಿ ಸಕ್ಕರೆ ಕಾರ್ಖಾನೆಗಳು ಎರಡು ದಶಕಗಳಿಂದ ಇಲ್ಲಿ ಸಕ್ಕರೆ ಉತ್ಪಾದಿಸುತ್ತಿವೆ. ಜಿಲ್ಲೆಯಲ್ಲಿ ಸಹಕಾರಿ ಕ್ರಾಂತಿಯ ಫಲವಾಗಿ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಿಸುವ ಚಿಂತನೆ ಆರಂಭಗೊಂಡಾಗ ನಂದಿ ಹಾಗೂ ಭೀಮಾಶಂಕರ ಕಾರ್ಖಾನೆಗಳನ್ನು ಆರಂಭಕ್ಕೆ ನಿರ್ಧರಿಸಲಾಯಿತು. 1959ರಲ್ಲಿ ವಿಜಯಪುರ ತಾಲೂಕು ಕೃಷ್ಣಾನಗರ ಎಂಬಲ್ಲಿ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ಆರಂಭಗೊಂಡು, ಈಗ ದೇಶದಲ್ಲೇ ಅತ್ಯುತ್ತಮ ಸಹಕಾರಿ ಸಕ್ಕರೆ ಕಾರ್ಖಾನೆ ಎಂಬ ಹೆಗ್ಗಳಿಕೆ ಹೊಂದಿದೆ.
Related Articles
Advertisement
ಜಪಾನ್ ದೇಶದ ಆಧುನಿಕ ತಂತ್ರಜ್ಞಾನದ ಯತ್ರೋಪಕರಣಗಳ ಬಳಕೆಯೊಂದಿಗೆ ಇದೀಗ ಬಾಯ್ಲರ್, ಟಬೆ„ìನ್ ಸೇರಿದಂತೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ನಿರ್ಮಾಣಗೊಂಡಿದೆ. ಅ.24ರಂದು ಸಿಎಂ ಸಿದ್ದರಾಮಯ್ಯ ಅವರಿಂದಲೇ ಕಾರ್ಖಾನೆಯ ಕಬ್ಬು ಅರೆಯುವ ಮೊದಲ ಕಾರ್ಯಕ್ಕೆ ಚಾಲನೆ ದೊರೆಯಲಿದೆ. ಜಿ.ಎಸ್. ಕಮತ ಚುನಾವಣೆಯಲ್ಲಿ ಜನತೆಗೆ ಕೊಟ್ಟ ಮಾತನ್ನು ನಾನು ಉಳಿಸಿಕೊಂಡಿದ್ದು, ಈ ಭಾಗದ ರೈತರ ಪರಿಶ್ರಮದ ಫಲವಾಗಿ ಹಿರಿಯರು ಕಂಡ ಕನಸು ನನಸಾಗುತ್ತಿದೆ. ಇದರ ಹಿಂದೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದ ನಮ್ಮ ಸರ್ಕಾರದ ಒತ್ತಾಸೆ, ರೈತರ ಸಾಂಘಿಕ ಪ್ರಯತ್ನ, ಅವಳಿ ಜಿಲ್ಲೆಗಳ ರಾಜಕೀಯ ನಾಯಕರ ಸಹಕಾರ ಹೀಗೆ ಸಾಮಾನ್ಯರಿಂದ ದೊಡ್ಡವರವರೆಗೆ ಎಲ್ಲ ಹಂತದವರು ಕೊಡುಗೆಯೂ ಸ್ಮರಣಾರ್ಹ.
ಯಶವಂತರಾಯಗೌಡ ಪಾಟೀಲ, ಶಾಸಕ, ಇಂಡಿ ಕ್ಷೇತ್ರ ಕೆವಿಕೆ ಆರಂಭದಲ್ಲಿ ರಾಜ್ಯ ಸರ್ಕಾರ ಪಾತ್ರವೂ ಇದೆ
ವಿಜಯಪುರ: ಜಿಲ್ಲೆಯ ಇಂಡಿ ಪಟ್ಟಣದಲ್ಲಿ ಆರಂಭಗೊಂಡಿರುವ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಜ್ಯ ಸರ್ಕಾರದ ಪಾತ್ರ ಏನೂ ಇಲ್ಲ ಎಂದಿರುವ ಕೇಂದ್ರ ಸಚಿವ ರಮೇಶ ಜಿಗಜಿಣಗಿ ಅವರ ಹೇಳಿಕೆ ಅವಾಸ್ತವ. ಕೇಂದ್ರ ಆರಂಭಕ್ಕೆ ರಾಜ್ಯ ಸರ್ಕಾರ ಪ್ರಸಕ್ತ ಸಂದರ್ಭದಲ್ಲಿ ದುಬಾರಿ ಬೆಲೆಯ 53 ಎಕರೆ ಜಮೀನು ನೀಡಿದೆ ಎಂಬುವುದನ್ನು ಮರೆತಿದ್ದಾರೆ ಎಂದು ಇಂಡಿ ಶಾಸಕ ಯಶವಂತರಾಯಗೌಡ
ಪಾಟೀಲ ತಿರುಗೇಟು ನೀಡಿದ್ದಾರೆ. ಸೋಮವಾರ ಮರಗೂರು ಗ್ರಾಮದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ವಿಜ್ಞಾನ ಕೇಂದ್ರ ಆರಂಭಕ್ಕೆ ಅನುಮತಿ ನೀಡಿದ್ದರೂ ಅದಕ್ಕೆ ಸ್ಥಳ ನೀಡಿದ್ದು ರಾಜ್ಯ ಸರ್ಕಾರ. ಪ್ರಸಕ್ತ ಸಂದರ್ಭದಲ್ಲಿ ಎಕರೆಗೆ 1 ಕೋಟಿ ರೂ. ಅಧಿಕ ಬೆಲೆ ಬಾಳುವ ಕೃಷಿ ಫಾರ್ಮನ ಭೂಮಿಯನ್ನು ನೀಡಿದ್ದೆ ರಾಜ್ಯ ಸರ್ಕಾರ. ಒಂದೊಮ್ಮೆ ಕೇಂದ್ರ ಸಚಿವರಿಗೆ ನಿಜಕ್ಕೂ ಸಾಮರ್ಥ್ಯ ಇದ್ದಲ್ಲಿ, ರಾಜ್ಯ ಸರ್ಕಾರ ನೀಡಿರುವ ಈ ಭೂಮಿಯನ್ನು ರಳಿ ಕೊಟ್ಟು, ಕೇಂದ್ರದ ಅನುದಾನದಲ್ಲೇ ಭೂಮಿಕೊಡು ಕೃಷಿ ವಿಜ್ಞಾನ ಸ್ಥಾಪಿಸಲಿ ಎಂದು ಸವಾಲು ಹಾಕಿದರು. ಕೃಷಿ ವಿಜ್ಞಾನ ಕೇಂದ್ರಕ್ಕೆ ಸದರಿ ಜಮೀನು ನೀಡಿರುವ ಕಾರಣ ರಾಜ್ಯದ ಲಿಂಬೆ ಅಭಿವೃದ್ಧಿ ಮಂಡಳಿ ಇಂಡಿ ಪಟ್ಟಣದಲ್ಲೇ ಆರಂಭಗೊಳ್ಳುತ್ತಿರುವ ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಈ ಮಂಡಳಿ ಸ್ಥಾಪನೆಗೆ ಸ್ಥಳ ಇಲ್ಲದಂತಾಗಿದೆ. ರಾಜ್ಯ
ಸರ್ಕಾರ ಮಂಡಳಿ ಸ್ಥಾಪನೆಗೆ 1 ಕೋಟಿ ರೂ. ಅನುದಾನನ್ನೂ ನೀಡಿದೆ. ಹೀಗಾಗಿ ತಾತ್ಕಾಲಿಕವಾಗಿ ನೂತನವಾಗಿ ಉದ್ಘಾಟನೆಗೊಳ್ಳಲಿರುವ ಮಿನಿ ವಿಧಾನಸೌಧದಲ್ಲಿ ಮಂಡಳಿ ಕಚೇರಿ ತೆರೆಯುತ್ತಿದ್ದೇವೆ. ಒಂದೊಮ್ಮೆ ಕೇಂದ್ರ ಸರ್ಕಾರದಲ್ಲಿ ಪ್ರಭಾವಿಗಳಾಗಿರುವ ಸಚಿವ ರಮೇಶ ಜಿಗಜಿಣಗಿ ಅವರು ಕೇಂದ್ರ ಸರ್ಕಾರದ ಕೃಷಿ ವಿಜ್ಞಾನ ಕೇಂದ್ರಕ್ಕೆ ರಾಜ್ಯ ಸರ್ಕಾರದಿಂದ ಪಡೆದಿರುವ 53 ಎಕರೆ ಜಮೀನನ್ನು ಮರಳಿಸಿದಲ್ಲಿ, ಅಲ್ಲಿಯೇ ಲಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪನೆ ಮಾಡಿಸಲು ನೆರವಾಗುತ್ತದೆ ಎಂದು ಯಶವಂತರಾಯಗೌಡ ಕುಟುಕಿದ್ದಾರೆ. ಇದಲ್ಲದೇ ಇಂಡಿ ತಾಲೂಕಿನ ಬಹುಹಳ್ಳಿ ಕುಡಿಯುವ ನೀರಿನ ಯೋಜನೆಗೆ ಕೇಂದ್ರ-ರಾಜ್ಯ ಸರ್ಕಾರದ ಪಾಲು ತಲಾ ಶೇ. 50ರಷ್ಟು ಅನುದಾನ ಇದ್ದು, ಯೋಜನೆ ರೂಪಿಸುವ, ಕ್ರಿಯಾಯೋಜನೆ ತಯಾರಿಸುವ, ಅನುಷ್ಠಾನದ ಅಧಿಕಾರ ಹೊಂದಿರುವುದು ರಾಜ್ಯ ಸರ್ಕಾರ. ಹೀಗಿದ್ದರೂ ಕೇಂದ್ರ ಸಚಿವ ಜಿಗಜಿಣಗಿ ಅವರು ಕೇಂದ್ರದ ಪಾಲು ಶೇ. 60, ರಾಜ್ಯದ ಪಾಲು ಶೇ. 40ರಷ್ಟು ಎಂದು ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಕೇಂದ್ರ ಸಚಿವರಿಗೆ ನಿಜಕ್ಕೂ ಈ ವಿಷಯದಲ್ಲಿ ಅವರಿಗೆ ಸೂಕ್ತ ಮಾಹಿತಿ ಇಲ್ಲವೋ ಅಥವಾ ಉದ್ದೇಶಪೂರ್ವಕವಾಗಿ ಸುಳ್ಳು ಹೇಳುತ್ತಿದ್ದಾರೋ ತಿಳಿಯದಾಗಿದೆ ಎಂದೂ ವ್ಯಂಗ್ಯವಾಡಿದ್ದಾರೆ.