Advertisement
ಏಳು ಸೆಂಟ್ಸ್ ವಿಸ್ತಾರವಿರುವ ಕೆರೆಸುಮಾರು 700-800 ವರ್ಷಗಳ ಇತಿಹಾಸವಿರುವ ಕಲ್ಲಮಠ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದ ಕಲ್ಯಾಣಿ ಕೆರೆ ತುಂಬಿರುವ ಹೂಳು ತೆರವುಗೊಂಡು ಮರುಜೀವ ಪಡೆಯಲಿದೆ.ಕಲ್ಲಮಠ ದೇವಸ್ಥಾನದ ಕೆರೆಯು ಏಳು ಸೆಂಟ್ಸ್ ವಿಸೀ¤ರ್ಣದ ಜಾಗದಲ್ಲಿತ್ತು. ಸರಕಾರಿ ಜಾಗದಲ್ಲಿರುವ ಈ ಕೆರೆಯ ಪಹಣಿ ಪತ್ರದಲ್ಲಿ 7 ಸೆಂಟ್ಸ್ ಎಂದು ನಮೂದಾಗಿದ್ದರೂ ಪ್ರಸ್ತುತ ಸುತ್ತಮುತ್ತಲ ಮಣ್ಣು ಬಿದ್ದು ಹೂಳು ತುಂಬಿ ಕೆರೆಯೇ ಮುಚ್ಚಿಹೋಗಿದೆ. ಮೂರು ನಾಲ್ಕು ಸೆಂಟ್ಸ್ ಜಾಗದಲ್ಲಿ ಸಣ್ಣ ಹೊಂಡದಂತೆ ಗೋಚರವಾಗುತ್ತದೆ. ಮಳೆಗಾಲದಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಈ ಹೊಂಡದಲ್ಲಿ ನೀರು ನಿಂತರೆ ಉಳಿದೆಲ್ಲ ಸಮಯ ಬತ್ತಿ ಬರಡಾಗುತ್ತಿತ್ತು.
ಕೊಡವೂರು ವಾರ್ಡ್‌ನಲ್ಲಿ ಶಂಕರನಾರಾಯಣ ತೀರ್ಥ, ರಕ್ತೇಶ್ವರಿ ಕೆರೆ, ಜೋಡುಕೆರೆ, ಶೇಣರ ಜಿಡ್ಡ, ಕ್ರೋಡಾಮುನಿ ತಪಸ್ಸು ಮಾಡಿದ ಕೆರೆ ಸಹಿತ ಒಟ್ಟು ಏಳು ಕೆರೆಗಳಿವೆ. ಕಳೆದವರ್ಷ ಶಂಕರನಾರಾಯಣ ತೀರ್ಥ ಅಭಿವೃದ್ಧಿಪಡಿಸಲಾಗಿದೆ.
Related Articles
ವಾರ್ಡ್‌ನಲ್ಲಿರುವ ಸಂಘ – ಸಂಸ್ಥೆಗಳು ಒಗ್ಗೂಡಿಸಿ ಅವರಿಂದ ವಾರ್ಡ್ ಅಂತರ್ಜಲ ವೃದ್ಧಿ ಪರಿಸರ ಸಂರಕ್ಷಣೆ ಮಾಡುವ ಯೋಚನೆಯಿದೆ. ಕೆರೆಗಳ ಹೂಳು ತೆಗೆದು ಅಭಿವೃದ್ಧಿ ಪಡಿಸಲಾಗುತ್ತದೆ. ಮಳೆಗಾಲದಲ್ಲಿ ಗಿಡ ನೆಡುವ ಯೋಜನೆ ಇದೆ. ಜೊತೆಗೆ ಕೊಡವೂರು ವಾರ್ಡ್ ಅನ್ನು ಪ್ಲಾಸ್ಟಿಕ್ ಮುಕ್ತ ವಾರ್ಡ್‌ನ್ನಾಗಿ ಮಾಡಬೇಕು ಎಂಬ ಕುರಿತು ಚಿಂತನೆ ನಡೆದಿದೆ.
-ವಿಜಯ ಕೊಡವೂರು, ನಗರಸಭಾ ಸದಸ್ಯರು
Advertisement
ಊರಿಗಾಗಿ ಸಣ್ಣ ಸೇವೆಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಕೆರೆಗಳ ಅಭಿವೃದ್ಧಿ ಕಾರ್ಯಕ್ಕೆ ಮುಂದಾಗಿದ್ದೇವೆ. ಒಂದು ತಿಂಗಳ ಹಿಂದೆ ಕಲ್ಲಮಠದ ಲಕ್ಷ್ಮೀನಾರಾಯಣ ದೇವಸ್ಥಾನದ ಕೆರೆಯಲ್ಲಿ ನಮ್ಮ ಕೊಡವೂರು ಕಾನಂಗಿಯ ಸ್ನೇಹಿತ ಯುವ ಸಂಘದ ಯುವಕರ ತಂಡ ಬಂದು ಶ್ರಮದಾನ ಮಾಡಿದೆ. ನಗರಸಭೆ ಜೆಸಿಬಿ ಯಂತ್ರವನ್ನು ನೀಡಿದೆ, ಉಳಿದೆಲ್ಲ ಕಾರ್ಯಗಳನ್ನು ನಮ್ಮ ಸದಸ್ಯರು ಶ್ರಮದಾನದ ಮೂಲಕ ನಡೆಸುತಿದ್ದಾರೆ.
– ರಾಜ್ ಸುವರ್ಣ, ಅಧ್ಯಕ್ಷರು, ಸ್ನೇಹಿತ ಯುವ ಸಂಘ