ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ತಿದ್ದುಪಡಿಗಳ ಪುನರ್ ಪರಿಶೀಲನೆ ಅಗತ್ಯ. ರೈತರ ಅಭಿಪ್ರಾಯಗಳನ್ನು ಮಾನ್ಯ ಮಾಡದೆ ಸರ್ಕಾರಗಳು ಕೃಷಿ ಕಾಯ್ದೆಗಳನ್ನು ಜಾರಿ ಮಾಡಬಾರದು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ, ಕೃಷಿ ಆರ್ಥಿಕ ತಜ್ಞ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ಅವರು ಅಭಿಪ್ರಾಯಪಟ್ಟರು.
ಇದನ್ನೂ ಓದಿ:- “ನನ್ನ ಪುತ್ರ ಡ್ರಗ್ಸ್ ಸೇವಿಸಲಿ” ಎಂದಿದ್ದ ಶಾರುಖ್ ಖಾನ್ : ಹಳೆಯ ವಿಡಿಯೋ ವೈರಲ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ತಿದ್ದುಪಡಿಗಳ ಬಗ್ಗೆ ದೆಹಲಿಯಲ್ಲಿ ರೈತರ ಬೃಹತ್ ಹೋರಾಟ ಮುಂದುವರಿದಿದೆ. ರೈತರ ಹೋರಾಟಕ್ಕೆ ದೇಶದ ರೈತರಿಂದ ಅಷ್ಟೇ ಅಲ್ಲ.
ಜಾಗತಿಕ ಬೆಂಬಲವೂ ವ್ಯಕ್ತವಾಗಿದೆ. ರೈತ ಸಮುದಾಯದೊಂದಿಗೆ ಚರ್ಚಿಸದೆ ಏಕಪಕ್ಷೀಯವಾಗಿ ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದು ದಿಢೀರನೆ ಜಾರಿಗೊಳಿಸುವ ಅನಿವಾರ್ಯತೆಯಿರಲಿಲ್ಲ. ಹಾಗಾಗಿ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿಗಳ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕು. ಎಂದರು. ಕೊರೊನಾ ವ್ಯಾಪಕವಾಗಿ ಹರಡಿದ ಸಂದರ್ಭದಲ್ಲಿ ಜಾರಿಯಾದ ಲಾಕ್‌ಡೌನ್‌ನಿಂದ ರೈತ ಸಮುದಾಯ ಭಾರೀ ಸಂಕಷ್ಟ ಅನುಭವಿಸಿತು. ಆ ಸಂದರ್ಭದಲ್ಲಿ ಸರ್ಕಾರ ಕೃಷಿ ಕ್ಷೇತ್ರದ ಬಗ್ಗೆ ಗಮನಹರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ ಅವರು, ರೈತರ ಕೃಷಿ ಉತ್ಪನ್ನಗಳು ಸ್ಥಳೀಯವಾಗಿಯೇ ಮಾರಾಟವಾಗುವ ವ್ಯವಸ್ಥೆ ಜಾರಿಯಾದರೆ ಮಾತ್ರ ಕೃಷಿ ಕ್ಷೇತ್ರ ಹಾಗೂ ರೈತರಿಗೆ ನ್ಯಾಯ ಒದಗಿಸಲು ಸಾಧ್ಯ. ಬಹುಮುಖ್ಯವಾಗಿ ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿಗೊಳಿಸುವ ಕಾನೂನು ಜಾರಿಗೊಳಿಸುವುದು, ಕೃಷಿ ಉತ್ಪನ್ನಗಳ ಉತ್ಪಾದನಾ ವೆಚ್ಚದ ಶೇ.50 ದರ ಸೇರಿಸಿ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು.
ಡಾ. ಎಂ.ಎಸ್. ಸ್ವಾಮಿನಾಥನ್ ವರದಿಯನ್ನು ಆಧಾರವಾಗಿಟ್ಟುಕೊಂಡು ಬೆಂಬಲ ಬೆಲೆಯನ್ನು ಖಾತರಿಗೊಳಿಸಬೇಕು ಎಂದು ಹೇಳಿದರು. ಕರ್ನಾಟಕದಲ್ಲಿರುವ ರೈತರ ಬವಣೆ ಅರಿಯಲು 2020-21ರ ಮುಂಗಾರಿಗಿಂತ ಮೊದಲು ನಡೆಸಲಾದಸಮೀಕ್ಷೆಯ ಅಂಕಿ-ಅಂಶಗಳನ್ನು ಸಂಖ್ಯಾ ಶಾಸ್ತ್ರದ
ಮಾದರಿಗಗಳನ್ನು ಬಳಸಿ ಅಧ್ಯಯನದ ವರದಿ ರೂಪಿಸಲಾಗಿದೆ. ಸರ್ಕಾರ ಅದನ್ನು ಪರಿಗಣಿಸಬೇಕು. ಕಾಲ್‌ಡೌನ್ ಸಂದರ್ಭದಲ್ಲಿ ಉದ್ಯೋಗ ಖಾತರಿ ಯೋಜನೆಯ ಫಲಾನುಭವವನ್ನು ರೈತರಿಗೆದೊರಕಿಸಿಕೊಡುವ ಆಶ್ವಾಸನೆಯನ್ನು ಕೇಂದ್ರ ಸರ್ಕಾರವು ನೀಡಿತ್ತು. ಆದರೆ ಇದು ರೈತರಿಗೆ ಅದರಲ್ಲೂ ಬಡ ಮತ್ತು ಸಣ್ಣ ರೈತರಿಗೆ ತಲಪಲಿಲ್ಲ.
ಕೊರೊನಾ ಮತ್ತು ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರ ಬೇರೆ ವಲಯಗಳ ಮೇಲೆ ಗಮನಹರಿಸಿದಂತೆ ಕೃಷಿ ಕೇತ್ರದತ್ತ ಗಮನಕೊಡಲಿಲ್ಲ ಎಂದ ಅವರು, ಈ ಸಂಬಂಧ ನಡೆಸಿದ ಸಮೀಕ್ಷೆಯಲ್ಲಿ ಶೇ.55 ರಷ್ಟು ರೈತರು ತಮ್ಮ ಅಭಿಪ್ರಾಯ ದಾಖಲಿಸಿದ್ದಾರೆ ಎಂದರು. ರೈತ ಮುಖಂಡ ಮಂಜುನಾಥ ದತ್ತ ಇತರರು ಹಾಜರಿದ್ದರು.