Advertisement

ಮುಂದಿನ ತಿಂಗಳು ಎಸ್ ಬಿಐನಿಂದ ಪರಿಷ್ಕೃತ ನಿಯಮ ಜಾರಿ

08:49 AM Sep 19, 2019 | mahesh |

ಹೊಸದಿಲ್ಲಿ: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಸರ್ವೀಸ್ ಚಾರ್ಜ್ (ಸೇವಾ ಶುಲ್ಕ)ವನ್ನು ಮುಂದಿನ ತಿಂಗಳು ಪರಿಷ್ಕರಿಸುವ ಸಾಧ್ಯತೆ ಇದೆ. ಇದರಿಂದ ಹಣ ಹಿಂದೆಗೆತ (ವಿತ್ ಡ್ರಾ)ದಲ್ಲಿ ಬದಲಾವಣೆ ಮತ್ತು ಖಾತೆಯಲ್ಲಿ ಮಾಸಿಕ ಕನಿಷ್ಠ ಮೊತ್ತವನ್ನು ನಿಗದಿಪಡಿಸಲಿದೆ. ಕೆಲವು ವಿಭಾಗಗಳಲ್ಲಿ ಈಗಿರುವ ದಂಡವನ್ನು ಪರಿಷ್ಕರಿಸಲಾಗಿದೆ.

Advertisement

ಪ್ರಮುಖ ನಿಯಮಗಳು
ಖಾತೆಯಲ್ಲಿ ಬ್ಯಾಂಕ್ ನಿಗದಿಪಡಿಸಿದ ಕನಿಷ್ಠ ಮೊತ್ತ (ಮಿನಿಮಂ ಬ್ಯಾಲೆನ್ಸ್) ಇಲ್ಲದೇ ಇದ್ದರೆ ಇಂತಿಷ್ಟು ಮೊತ್ತವನ್ನು ದಂಡದ ರೂಪದಲ್ಲಿ ನಾವು ತೆರಬೇಕಾಗುತ್ತದೆ. ಕನಿಷ್ಠ ಮೊತ್ತ ಮತ್ತು ದಂಡಗಳ ಅನುಪಾತ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಬೇರೆ ಬೇರೆ ಇದೆ. ಇನ್ನು ಎನ್. ಇ. ಎಫ್. ಟಿ ಮತ್ತು ಆರ್. ಟಿ. ಜಿ. ಎಸ್ ಳಿಗೂ ಕೆಲವು ನಿಯಮಗಳು ಅನ್ವಯವಾಗಲಿದೆ.

ನಗರದಲ್ಲಿ ಎಷ್ಟಿದೆ?
ನಗರಗಳಲ್ಲಿನ ಶಾಖೆಗಳಲ್ಲಿ ಗ್ರಾಹಕರು ಮಾಸಿಕ 3000 ರೂ. ಗಳನ್ನು ಹೊಂದಿರಲೇ ಬೇಕಾಗುತ್ತದೆ. ಒಂದು ವೇಳೆ ಈ ನಿಗದಿತ ಮೊತ್ತವನ್ನು ನಾವು ಖಾತೆಯಲ್ಲಿ ಹೊಂದಲಿ ವಿಫಲವಾದರೆ ದಂಡ ತೆರಬೇಕಾಗುತ್ತದೆ. ಉದಾ: ನಿಗದಿತ ಕನಿಷ್ಠ ಮೊತ್ತದ ಅರ್ಧ ಎಂದರೆ 1,500 ರೂ.ಗಳಷ್ಟನ್ನೇ ಕಾಯ್ದುಕೊಂಡರೆ ನಾವು 10 ರೂ. ಮತ್ತು ಜಿಎಸ್ಟಿ ದಂಡವನ್ನು ತೆರಬೇಕಾಗುತ್ತದೆ. ಅರ್ಧಕ್ಕಿಂತ ಹೆಚ್ಚ ಎಂದರೆ ಶೇ. 75ರಷ್ಟು ಮೊತ್ತ ಕಡಿಮೆ ಇದ್ದರೆ 15 ರೂ. ಮತ್ತು ಜಿಎಸ್ಟಿಯನ್ನು ತೆರಬೇಕಾಗುತ್ತದೆ.

ಸೆಮಿ ಅರ್ಬನ್ ಪ್ರದೇಶದಲ್ಲಿ ಹೇಗೆ?
ಇನ್ನು ಸೆಮಿ ಅರ್ಬನ್ ಪ್ರದೇಶಗಳಲ್ಲಿ ಕನಿಷ್ಠ ಮೊತ್ತವನ್ನು 2000 ರೂ. ಎಂದು ನಿಗದಿಪಡಿಸಲಾಗಿದೆ. ಇಂತಹ ಕಡೆಗಳಲ್ಲಿ ಕನಿಷ್ಠ ಮೊತ್ತ ಶೇ. 50ರ ಷ್ಟಿದ್ದರೆ ಅದಕ್ಕೆ 7.50 ರೂ. ಮತ್ತು ಜಿಎಸ್ಟಿ ಸೇರಿಸಿ ದಂಡ ವಿಧಿಸಲಾಗುತ್ತದೆ. ಶೇ. 75ರಷ್ಟು ಹಣ ಕೊರತೆ ಇದ್ದರೆ 10 ರೂ. ಮತ್ತು ಜಿಎಸ್ಟಿ ತೆರಬೇಕಾಗುತ್ತದೆ.

ಗ್ರಾಮೀಣದಲ್ಲಿ ಎಷ್ಟು?
ಗ್ರಾಮೀಣ ಭಾಗಗಳಲ್ಲಿ 1,000 ರೂ.ಗಳನ್ನು ಕನಿಷ್ಠ ಠೇವಣಿ ಎಂದು ನಿಗದಿಪಡಿಸಲಾಗಿದೆ. ಇಲ್ಲಿ ಶೇ. 50ರಷ್ಟು ಹಣ ಇದ್ದರೆ 5 ರೂ. ಎಂದೂ ಶೇ. 75ರಷ್ಟು ಹಣ ಇದ್ದರೆ 7.50 ರೂ.ಗಳನ್ನು ಜಿಎಸ್ಟಿಯೊಂದಿಗೆ ಪಾವತಿಮಾಡಬೇಕಾಗಿತ್ತದೆ.

Advertisement

ಆರ್. ಟಿ. ಜಿ. ಎಸ್, ಎನ್ ಇ ಎಫ್ ಟಿ ಗೂ ಇದೆ ಚಾರ್ಜ್
ಬ್ಯಾಂಕ್ ವ್ಯವಹಾರಗಳಲ್ಲಿ ಬಳಸಲಾಗುವ NEFT (ನ್ಯಾಶನಲ್ ಎಲೆಕ್ಟ್ರಾನಿಕ್ ಫಂಢ್ಟ್ರಾನ್ಸ್ಫಾರ್ಮರ್) ಮತ್ತು RTGS (ರಿಯಲ್ ಟೈಮ್ ಗ್ರಾಸ್ ಸೆಟ್ಲಮೆಂಟ್) ಮೇಲೆಯೂ ಪರಿಷ್ಕೃತ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತದೆ. 10,000 ರೂ. ವರೆಗಿನ NEFT ಗಳಿಗೆ 2 ರೂ. ಮತ್ತು ಜಿಎಸ್ಟಿ, 2 ಲಕ್ಷ ರೂ. ಹಣ ವರ್ಗಾವಣೆಗೆ 20 ರೂ. ಮತ್ತು ಜಿಎಸ್ಟಿಯನ್ನು ವಿಧಿಸಲಾಗುತ್ತದೆ. 2 ಲಕ್ಷದಿಂದ 5 ಲಕ್ಷದ ವರೆಗಿನ RTGS ಗಳಿಗೆ 20 ರೂ. ಮತ್ತು ಜಿಎಸ್ಟಿ, 5 ಲಕ್ಷಕ್ಕಿಂತ ಮೆಲ್ಪಟ್ಟ ಹಣಕ್ಕೆ 40 ರೂ. ಮತ್ತು ಜಿಎಸ್ಟಿ ಪಾವತಿಸಬೇಕಾಗುತ್ತದೆ.

ಟ್ರಾನ್ಸಾಕ್ಷನ್ ಗಳಿಗೆ ಹೇಗೆ?
ನಾವು ಬಳಸುತ್ತಿರುವ ಡೆಪೋಸಿಟ್ ಮತ್ತು ವಿತ್ಡ್ರಾವಲ್ಸ್ಗೂ ಇನ್ನು ಮುಂದೆ ದಂಡದ ಬಿಸಿ ತಾಗಲಿದೆ. ಉಳಿತಾಯ ಖಾತೆಗೆ 3 ಉಚಿತ ವಹಿವಾಟುಗಳನ್ನು ನೀಡಲಾಗಿದ್ದು, 4ನೇ ವಹಿವಾಟಿಗೆ ನೀವು 50 ರೂ. ಮತ್ತು ಜಿಎಸ್ಟಿಯನ್ನು ದಂಡವಾಗಿ ತೆರಬೇಕಾಗುತ್ತದೆ.

2 ಲಕ್ಷ ಠೇವಣಿ ಮಿತಿ!
ನಾನ್ ಹೋಂ ಬ್ರ್ಯಾಂಚ್ ಅಥವ ನಮ್ಮ ಖಾತೆಯಿಂದ ಮತ್ತೂಂದು ಖಾತೆಗೆ ಹಣ ವರ್ಗಾವಣೆ/ಠೇವಣಿಗೆ ಪ್ರತಿದಿನ 2 ಲಕ್ಷ ರೂ. ಮಾತ್ರ ಇಡಬಹುದಾಗಿದೆ. ಇದಕ್ಕಿಂತ ಹೆಚ್ಚು ಠೇವಣಿಗಳ ಪ್ರಸ್ತಾವ ಬಂದರೆ ಬ್ಯಾಂಕ್ ಮೆನೇಜರ್ ಅವರ ವಿವೇಚನೆಗೆ ಬಿಡಲಾಗಿದೆ. ಮಾಸಿಕ 25,000 50,000 ಮಾಸಿಕ ಸರಾಸರಿ ಬ್ಯಾಲೆನ್ಸ್ ಹೊಂದಿರುವ ಖಾತೆದಾರರು 10 ಉಚಿತ ಕ್ಯಾಶ್ ವಿತ್ಡ್ರಾ ಸೌಲಭ್ಯ ಹೊಂದಲಿದ್ದಾರೆ. ಬಳಿಕದ ವಹಿವಾಟುಗಳಿಗೆ 50 ರೂ. ಮತ್ತು ಜಿಎಸ್ಟಿ ದಂಡ ಅನ್ವಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next