Advertisement
ಕೇಂದ್ರ ಸರಕಾರ ಮೋಟರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದು ನಿಯಮ ಉಲ್ಲಂಘಿಸಿದವರಿಗೆ ದುಬಾರಿ ದಂಡ ವಿಧಿಸುವ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಮುಂದಾಗಿದೆ. ವಾಹನ ತಪಾಸಣೆ ಮಾಡುವ ಸಂದರ್ಭ ಗಣಕೀಕೃತ ಹೊಗೆ ತಪಾಸಣೆ ಕೇಂದ್ರದಲ್ಲಿ ಪರೀಕ್ಷೆ ಮಾಡಿ ಮಾಲಿನ್ಯಕಾರವಲ್ಲ ಎನ್ನುವ ಪ್ರಮಾಣ ಪತ್ರ ಹೊಂದಿರದ ವಾಹನ ಮಾಲಕನಿಗೆ ಭಾರೀ ದಂಡ ವಿಧಿಸಲಾಗುತ್ತಿದೆ.
Related Articles
Advertisement
ವಾಹನಗಳ ಎಂಜಿನ್ ಸರಿಯಿದ್ದರೆ ಮಾಲಿನ್ಯ ಕಾರಕ ಹೊಗೆ ಇರುವುದಿಲ್ಲ. ಆಗ ಹೊಗೆ ಪರೀಕ್ಷೆ ಒಂದು ನಿಮಿಷದಲ್ಲಿ ಮುಗಿಯುತ್ತದೆ. ಮಾಲಿನ್ಯಕಾರಕವಾಗಿದ್ದರೆ ಮಾತ್ರ ಪರೀಕ್ಷೆಗೆ ಎರಡು-ಮೂರು ನಿಮಿಷಗಳು ಬೇಕಾಗುತ್ತದೆ. ಇದು ಆನ್‌ಲೈನ್ ಮೂಲಕ ನಡೆಯುವ ಪ್ರಕ್ರಿಯೆ. ದಂಡಕ್ಕೆ ಬೆಚ್ಚಿದ ಸವಾರರು ಎಲ್ಲ ಕಡೆ ಒಮ್ಮೆಲೆ ವಾಹನಗಳು ಹೊಗೆ ಪರೀಕ್ಷೆಗೆ ಬಂದಿರುವುದರಿಂದ ಸರ್ವರ್ ಕೊಂಚ ಸಮಸ್ಯೆ ಉಂಟಾಗಿದೆ.
ವಾಹನಗಳ ಸಂಖ್ಯೆ ಹೆಚ್ಚಳ
ವಾಹನಗಳ ಹೊಗೆ ತಪಾಸಣೆಗೆ ಬರುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ದಿನಕ್ಕೆ ಎರಡು ಬಂದರೆ ಅದೇ ಹೆಚ್ಚಿತ್ತು. ಸೆ. 9ರಂದು ಬಂದ ಶೇ. 80ರಷ್ಟು ವಾಹನಗಳ ಹೊಗೆ ತಪಾಸಣೆ ಪ್ರಮಾಣ ಪತ್ರದ ಅವಧಿ ಮುಕ್ತಾಯವಾಗಿ ತಿಂಗಳಾಗಿತ್ತು. -ಸತೀಶ್ ಶೆಟ್ಟಿ, ಎಮಿಷನ್ ಟೆಸ್ಟ್ ಸೆಂಟರ್ ಮಾಲಕ
ಮುಂಚಿತವಾಗಿ ಟೆಸ್ಟ್
ನನ್ನ ವಾಹನದ ಹೊಗೆ ತಪಾಸಣೆ ಪ್ರಮಾಣಪತ್ರದ ಅವಧಿ ನಾಳೆಗೆ ಮುಕ್ತಾಯವಾಗುತ್ತದೆ. ಕೆಲಸದ ಒತ್ತಡದಲ್ಲಿ ಮರೆತರೆ ಭಾರೀ ದಂಡ ತೆರಬೇಕಾಗುತ್ತದೆ. ಅದಕ್ಕಾಗಿ ಒಂದು ದಿನ ಮುಂಚಿತವಾಗಿ ಎಮಿಷನ್ ಟೆಸ್ಟ್ ಕೇಂದ್ರಕ್ಕೆ ಬಂದಿದ್ದೇನೆ.
– ರೂಪಾ,ಉಡುಪಿ
ಅಧಿಕ ದಂಡ ವಿಧಿಸಲು ಆರಂಭಿಸಿರುವುದು ವಾಹನ ಚಾಲಕರಲ್ಲಿ ರಸ್ತೆ ನಿಯಮಗಳನ್ನು ಪಾಲಿಸುವಂತೆ ಮಾಡಿದೆ. ಹೊಗೆ ತಪಾಸಣೆ ಮಾಡದೆ ಇರುವ ವಾಹನಗಳು ಎಮಿಷನ್ ಟೆಸ್ಟ್ ಕೇಂದ್ರಕ್ಕೆ ಲಗ್ಗೆಯಿಟ್ಟಿವೆ. ಪ್ರಮಾಣ ಪತ್ರವಿಲ್ಲದ ವಾಹನಗಳು ರಸ್ತೆಗೆ ಬರಲು ಹಿಂದೇಟು ಹಾಕುತ್ತಿವೆ.