ಮಂಗಳೂರು : ದಕ್ಷಿಣ ಕನ್ನಡ- ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳನ್ನೊಳ ಗೊಂಡ ಜಿಲ್ಲಾ ಕಂಬಳ ಸಮಿತಿ ಅಧಿಕೃತವಾಗಿ ಬಿಡುಗಡೆಗೊಳಿಸಿದ್ದ ಈ ಬಾರಿಯ ಕಂಬಳ ಋತುವಿನ ವೇಳಾ ಪಟ್ಟಿ ಮತ್ತೆ ಪರಿಷ್ಕರಣೆ ಯಾಗಿದೆ. ನ. 26ರಂದು ಬಂಟ್ವಾಳ ಕಕ್ಯಪದವಿನ ಸತ್ಯಧರ್ಮ ಜೋಡು ಕರೆ ಕಂಬಳದೊಂದಿಗೆ ಚಾಲನೆ ದೊರೆಯಲಿದೆ.
ಈ ಹಿಂದಿನ ವೇಳಾಪಟ್ಟಿಯಂತೆ ನ. 5ರಂದು ಶಿರ್ವ ಜೋಡುಕರೆ ಕಂಬಳದೊಂದಿಗೆ ಕಂಬಳ ಋತು ಆರಂಭಗೊಳ್ಳಬೇಕಿತ್ತು. ಆದರೆ ಅಂದು ಕಂಬಳ ನಡೆಸಲು ಅನನು ಕೂಲವಾಗಿದ್ದು, ಶಿರ್ವ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಉತ್ಸವದ ಧ್ವಜಾರೋಹಣದ ಮೊದಲು ಕಂಬಳ ನಡೆಯಬೇಕಾಗಿರುವುದರಿಂದ ಡಿ. 13ರಂದು ಕಂಬಳ ನಡೆಸಲು ಉದ್ದೇಶಿಸಲಾಗಿದೆ.
ಮಾತ್ರವಲ್ಲದೆ ನ. 12ರ ಪಿಲಿಕುಳ ಮತ್ತು ನ. 19ರ ಪಜೀರು ಕಂಬಳವೂ ಮುಂದೂಡಲ್ಪಟ್ಟಿದೆ. ಪಿಲಿಕುಳ ಕಂಬಳಕ್ಕೆ ಸಂಬಂಧಿಸಿದಂತೆ ಸಿದ್ಧತೆಯೇ ನಡೆದಿಲ್ಲ. ಇನ್ನು ಪಜೀರು ಕಂಬಳ ಕರೆಗೆ ಕೆಲವು ದಿನಗಳ ಹಿಂದಷ್ಟೇ ಶಿಲಾನ್ಯಾಸ ನಡೆದಿದೆ. ಕರೆ ಇನ್ನಷ್ಟೇ ಸಿದ್ಧವಾಗಬೇಕಿರುವುದರಿಂದ ಹೊಸ ದಿನಾಂಕ ನೀಡಲಾಗಿಲ್ಲ. ಕಟಪಾಡಿ, ಜೆಪ್ಪು ಸಹಿತ ಇತರ ಕೆಲವು ಕಂಬಳಗಳ ದಿನಾಂಕಗಳಲ್ಲೂ ಸಣ್ಣಪುಟ್ಟ ಬದಲಾವಣೆಯಾಗಿದೆ.
ಪರಿಷ್ಕೃತ ವೇಳಾಪಟ್ಟಿ :
ದಿನಾಂಕ |
ಸ್ಥಳ |
ನ. 26 |
ಕಕ್ಯಪದವು |
ಡಿ. 3 |
ವೇಣೂರು |
ಡಿ. 10 |
ಬಾರಾಡಿ ಬೀಡು |
ಡಿ. 13 |
ಶಿರ್ವ |
ಡಿ. 17 |
ಹೊಕ್ಕಾಡಿಗೋಳಿ |
ಡಿ. 24 |
ಮೂಡುಬಿದಿರೆ |
ಡಿ. 31 |
ಮೂಲ್ಕಿ |
ಜ. 7 |
ಮಿಯ್ನಾರು |
ಜ. 15 ` |
ಅಡ್ವೆ |
ಜ. 22 |
ಮಂಗಳೂರು |
ಜ. 28 |
ಐಕಳ ಬಾವ |
ಫೆ. 4 |
ಪುತ್ತೂರು |
ಫೆ. 11 |
ವಾಮಂಜೂರು |
ಫೆ. 18 |
ಜಪ್ಪಿನಮೊಗರು |
ಫೆ. 26 |
ಕಟಪಾಡಿ |
ಮಾ. 4 |
ಬಂಟ್ವಾಳ |
ಮಾ. 11 |
ಉಪ್ಪಿನಂಗಡಿ |
ಮಾ. 18 |
ಬಂಗಾಡಿ |
ಮಾ. 25 |
ಪೈವಳಿಕೆ |
ಎ. 1 |
ಸುರತ್ಕಲ್ |
ಎ. 8 |
ಪಣಪಿಲ |