ರಾಮನಗರ: ಜೆಎಂಬಿ ಉಗ್ರ ಮುನೀರ್ ವಾಸವಿದ್ದ ಮನೆಗೆ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ಹಾಗೂ ಪೊಲೀಸ್ ಕೇಂದ್ರ ಕಚೇರಿ ಅಧಿಕಾರಿಗಳ ತಂಡ ಬುಧವಾರ ಮತ್ತೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ನಗರದ ಟ್ರೂಪ್‌ಲೈನ್‌ನಲ್ಲಿ ಅಮೀರ್‌ಖಾನ್ ಎಂಬುವರಿಗೆ ಸೇರಿದ ಮನೆಯಲ್ಲಿ ಜೆಎಂಬಿ ಉಗ್ರ ಮುನೀರ್ ವಾಸವಿದ್ದ ಮನೆಯನ್ನು ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ. ಕೆಲವೊಂದು ವಸ್ತುಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಉಗ್ರನ ಸೆರೆಯ ನಂತರ ಆತನ ಪತ್ನಿ ಶಾಜಿದ ಬೀಬಿ ಕೆಲವು ವಸ್ತುಗಳನ್ನು ತೆಗೆದುಕೊಂಡು ಮನೆ ತೊರೆದಿದ್ದಾಳೆ, ಆದರೆ ಮಾರಾಟಕ್ಕೆಂದು ತಂದಿರುವ ಬಟ್ಟೆ, ಮನೆಯ ನಿತ್ಯೋಪಯೋಗಿ ವಸ್ತುಗಳು ಮನೆಯಲ್ಲೇ ಇವೆ. ಪೊಲೀಸರು ಮನೆಯಲ್ಲಿರುವ ವಸ್ತುಗಳನ್ನೆಲ್ಲಾ ಜಾಲಾಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 2 ಗಂಟೆಗಳ ಕಾಲ ಮನೆಯ ಇಂಚಿಂಚು ಶೋಧನೆ ನಡೆಸಿದ್ದಾರೆ.
ಮಾಹಿತಿ ಸಂಗ್ರಹ: ಶೋಧನೆಯ ವೇಳೆ ಕೆಲವು ವಸ್ತುಗಳು, ಕೆಲವು ಮಾಹಿತಿ ಸಂಗ್ರಹವಾಗಿದೆ ಎನ್ನಲಾಗಿದೆ. ಅಲ್ಲದೆ ಮನೆಯ ಅಕ್ಕಪಕ್ಕದ ನಿವಾಸಿಗಳು, ಕೆಲವು ಸ್ಥಳೀಯರಿಂದಲೂ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೀಘ್ರ ಮತ್ತೂಂದು ತಂಡ ಭೇಟಿ: ತನಿಖಾಧಿಕಾರಿಗಳ ತಂಡ ನಗರದ ಟಿಪ್ಪುನಗರ ಸೇರಿದಂತೆ ಕೆಲವು ಬಡಾವಣೆಗಳಿಗೆ ವಾಹನದಲ್ಲೇ ಸುತ್ತಾಡಿ ಭೇಟಿ ನೀಡಿದರು. ಕೆಲವೊಂದು ಕಟ್ಟಡಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಇಲ್ಲಿ ಉಗ್ರ ಮುನೀರ್‌ನ ಹತ್ತಿರದ ಸಂಬಂಧಿ ಹಾಗೂ ಮತ್ತೂಬ್ಬ ವಾಸವಿದ್ದರು ಎನ್ನಲಾಗಿದೆ. ಆದರೆ ಮತ್ತೆಲ್ಲೂ ಪರಿಶೀಲನೆ ಮಾಡಿಲ್ಲ ಎನ್ನಲಾಗಿದೆ.
ಸದ್ಯದಲ್ಲೇ ನವದೆಹಲಿಯಿಂದ ಎನ್‌ಐಎ ಅಧಿಕಾರಿಗಳ ಮತ್ತೂಂದು ತಂಡ ರಾಮನಗರಕ್ಕೆ ಭೇಟಿ ನೀಡಲಿದ್ದು, ಶೋಧಕಾರ್ಯ ಚುರುಕುಗೊಳ್ಳಲಿದೆ ಎಂದು ಮೂಲಗಳು ತಿಳಿಸಿ ಕಟ್ಟಡದ ಮಾಲೀಕಆಸ್ಪತ್ರೆಗೆ ದಾಖಲು ಜೆಎಂಬಿ ಉಗ್ರ ಮುನೀರ್ ವಾಸವಿದ್ದ ಬಾಡಿಗೆ ಮನೆಯ ಮಾಲೀಕ ಅಮೀರ್ ಖಾನ್ ಬೆಂಗಳೂರು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದೊಂದು ವಾರದಿಂದ ಎದೆ ನೋವಿನಿಂದ ಬಳಲುತ್ತಿದ್ದ ಅವರು, ಸೋಮವಾರ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಎನ್‌ಐಎ ಅಧಿಕಾರಿಗಳು ಮುನೀರ್‌ನನ್ನು ಬಂಧಿಸಿದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಲು ಸಾಧ್ಯವಾಗಿರಲಿಲ್ಲ. ಮಂಗಳವಾರ ಎದೆ ನೋವು ತೀವ್ರಗೊಂಡ ಹಿನ್ನೆಲೆಯಲ್ಲಿ ಜಯದೇವ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಅವರ ಪರಿಚಯಸ್ಥರು ತಿಳಿಸಿದರು.