ರಾಜ್ಯಾದ್ಯಂತ ಭ್ರಷ್ಟಾಚಾರ ನಿಗ್ರಹ ದಳ ಮಾ.16ರ ಮುಂಜಾನೆ 18 ಅಧಿಕಾರಿಗಳ ಮನೆಗೆ ದಿಢೀರ್ ದಾಳಿ ನಡೆಸಿತ್ತು. ರಾಜ್ಯದ 20 ಜಿಲ್ಲೆಗಳ 77 ಸ್ಥಳಗಳಿಗೆ ಏಕಕಾಲಕ್ಕೆ ಎಸಿಬಿ ತಂಡ ಗಳು ದಾಳಿ ನಡೆಸಿ ತನಿಖೆ ನಡೆಸಿತ್ತು. ಸತತ 14 ಗಂಟೆಗಳ ಕಾಲ ನಡೆದ ಈ ಕಾರ್ಯಾಚರಣೆ ಯಲ್ಲಿ 400ಕ್ಕೂ ಅಧಿಕ ಸಿಬಂದಿ ಭಾಗಿಯಾಗಿ ದ್ದರು. ಈ ವೇಳೆ 18 ಮಂದಿ ಅಧಿಕಾರಿಗಳ ಮನೆ, ಕಚೇರಿ, ಖಾಸಗಿ ಕಚೇರಿ, ಫಾರ್ಮ್ ಹೌಸ್, ಅವರ ಸಂಬಂಧಿಕರು, ಆಪ್ತರು ಹಾಗೂ ಲೆಕ್ಕಪತ್ರ ಪರಿಶೋಧಕರ ಮನೆಗಳ ಮೇಲೂ ದಾಳಿ ನಡೆಸಲಾಗಿತ್ತು.
Advertisement
ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಪ್ರಕಟ; ಕರಾವಳಿಯ 9 ಮಂದಿ ಆಯ್ಕೆ
ಕರ್ನಾಟಕ ಯಕ್ಷಗಾನ ಅಕಾಡೆಮಿಯು ವಾರ್ಷಿಕ ಪ್ರಶಸ್ತಿಗಳನ್ನು ಮಾ.7ರಂದು ಪ್ರಕಟಿಸಿತು. ಡಾ| ಕಬ್ಬಿನಾಲೆ ವಸಂತ ಭಾರದ್ವಾಜ್ ಅವರಿಗೆ ಪಾರ್ತಿಸುಬ್ಬ ಪ್ರಶಸ್ತಿ ಹಾಗೂ ಕಾಸರಗೋಡಿನ ಡಾ| ಕೆ. ರಮಾನಂದ ಬನಾರಿ, ಮೈಸೂರಿನ ಡಾ| ಎಚ್.ಆರ್. ಚೇತನ ಅವರಿಗೆ ಪುಸ್ತಕ ಬಹುಮಾನ ಪ್ರಶಸ್ತಿ ಲಭಿಸಿತ್ತು. ಬೈಲೂರಿನ ಮುತ್ತಪ್ಪ ತನಿಯ ಪೂಜಾರಿ, ಉಜಿರೆಯ ನರೇಂದ್ರ ಕುಮಾರ್ ಜೈನ್, ಹಳ್ಳಾಡಿ ಯ ಜಯರಾಮ ಶೆಟ್ಟಿ, ಆಜ್ರಿ ಗೋಪಾಲ ಗಾಣಿಗ, ಕೊಕ್ಕಡ ಈಶ್ವರ ಭಟ್, ಬೋಳಾರ ಸುಬ್ಬಯ್ಯ ಶೆಟ್ಟಿ, ಮಂಗಲ್ಪಾಡಿಯ ರಾಮ್ ಸಾಲಿಯಾನ್ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.
ಹಾವೇರಿ ಜಿಲ್ಲೆಯ ಚಳಗೇರಿಯ ನವೀನ್ ಉಕ್ರೇನ್‌ನಲ್ಲಿ ರಷ್ಯಾದ ಕ್ಷಿಪಣಿ ದಾಳಿಗೆೆ ತುತ್ತಾಗಿ ಸಾವನ್ನಪ್ಪಿದ್ದರು. ಖಾರ್ಕಿವ್‌ನ ನ್ಯಾಶ ನಲ್ ಮೆಡಿಕಲ್ ಯುನಿವ ರ್ಸಿಟಿಯಲ್ಲಿ 4ನೇ ವರ್ಷದ ಎಂಬಿಬಿಎಸ್ ಕಲಿಯುತ್ತಿದ್ದ ನವೀನ್ ಮಾ.1ರಂದು ಆಹಾರ ಖರೀದಿಸಲೆಂದು ತಾನಿದ್ದ ವಸತಿ ಸಮುಚ್ಚಯದ ಬಂಕರ್‌ನಿಂದ ಹೊರಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ಮಾ.21 ರಂದು ನವೀನ್ ಮೃತದೇಹವನ್ನು ರಾಜ್ಯಕ್ಕೆ ತರಲಾಗಿತ್ತು. ರಾಜ್ಯದ ಏಕಲವ್ಯ, ಕ್ರೀಡಾರತ್ನ ಪ್ರಶಸ್ತಿ ಪ್ರಕಟ
2021ನೇ ಸಾಲಿನ ಕ್ರೀಡಾ ಪ್ರಶಸ್ತಿಗಳನ್ನು ಎ.4ರಂದು ರಾಜ್ಯ ಸರಕಾರ ಪ್ರಕಟಿಸಿತ್ತು. ಕಬಡ್ಡಿ ಪಟು ಪ್ರಶಾಂತ್ ಕುಮಾರ್ ರೈ, ವಾಲಿಬಾಲ್ ಪಟು ಅಶ್ವಲ್ ರೈ ಅವರಿಗೆ ಏಕಲವ್ಯ, ಕಂಬಳ ಓಟಗಾರ ಮುದ್ದುಮನೆ ಗೋಪಾಲ ನಾಯ್ಕ, ಖೋಖೋ ಪಟು ಕೆ. ದೀಕ್ಷಾರಿಗೆ ಕ್ರೀಡಾರತ್ನ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಟ್ರಸ್ಟ್, ಮಂಗಳೂರಿನ ಬಾಲಾಂಜ ನೇಯ ಜಿಮ್ನಾಶಿಯಂ ಕ್ರೀಡಾಪೋಷಕ, ಕುಸ್ತಿ ಪಟು ಲಕ್ಷ್ಮೀ ಮತ್ತು ಬಾಲ್ ಬ್ಯಾಡ್ಮಿಂಟನ್ ಆಟಗಾರ ಕಿರಣ್ ಕುಮಾರ್ ಕ್ರೀಡಾರತ್ನ ಪ್ರಶಸ್ತಿ ಗಳಿಸಿದ್ದರು.
Related Articles
ಕುಣಿಗಲ್‌ನ ಶ್ರೀ ಬಸವೇಶ್ವರ ಮಠ ಹಾಗೂ ಸತ್ಯಶನೈಶ್ಚರಸ್ವಾಮಿ ಕ್ಷೇತ್ರದಲ್ಲಿ ನಿರ್ಮಿಸಲಾದ ವಿಶ್ವದಲ್ಲೇ ಅತೀ ಎತ್ತರದ 161 ಅಡಿ ಪಂಚಮುಖಿ ಆಂಜನೇಯಸ್ವಾಮಿ ವಿಗ್ರಹವನ್ನು ಎ.10ರಂದು ಸಿಎಂ ಬೊಮ್ಮಾಯಿ ಲೋಕಾರ್ಪಣೆಗೊಳಿಸಿದ್ದರು. ವಿಗ್ರಹದ ತಳಭಾಗದಿಂದ ಮೇಲಿನ ಭಾಗದವರೆಗೆ 4,800 ಕೆ.ಜಿ. ತಾಮ್ರ ಉಪಯೋಗಿಸಲಾಗಿದೆ. ಕಿರೀಟಕ್ಕೆ ಚಿನ್ನ, ಬೆಳ್ಳಿ, ತಾಮ್ರ ಹಾಗೂ ಕೆ.ಜಿ.ಗಟ್ಟಲೆ ಒಂದು ರೂ. ನಾಣ್ಯ ಬಳಸಲಾಗಿದೆ.
Advertisement
ಪ.ಜಾ./ಪಂ. ದವರಿಗೆ ಉಚಿತ ವಿದ್ಯುತ್ರಾಜ್ಯದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಎಲ್ಲ ಸಮುದಾಯಗಳಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪೂರೈಸಲಾಗುವುದೆಂದು ಎ. 5ರಂದು ಸರಕಾರ ಘೋಷಿಸಿತ್ತು. ಕುಟೀರ ಜ್ಯೋತಿ ಯೋಜನೆ ಅಡಿ ಈಗ ನೀಡಲಾಗುತ್ತಿರುವ 40 ಯೂನಿಟ್‌ವರೆಗೆ ಉಚಿತ ವಿದ್ಯುತ್‌ನ್ನು 75 ಯೂನಿಟ್‌ಗೆ ಹೆಚ್ಚಿಸಲಾಗಿತ್ತು. ಇದರೊಂದಿಗೆ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಭೂ ಒಡೆತನ ಯೋಜನೆಯಡಿ ನೀಡಲಾಗುತ್ತಿದ್ದ 15 ಲಕ್ಷ ರೂ. ಸಹಾಯಧನವನ್ನು 20 ಲಕ್ಷ ರೂ.ಗೆ ಹೆಚ್ಚಿಸುವ ನಿರ್ಧಾರ ಕೈಗೊಂಡಿತ್ತು. ಬನ್ನಂಜೆ ರಾಜಾನಿಗೆ ಜೀವಾವಧಿ ಶಿಕ್ಷೆ
ಅಂಕೋಲಾದ ಉದ್ಯಮಿ ಆರ್.ಎನ್. ನಾಯ್ಕ ಹತ್ಯೆ ಪ್ರಕರಣದಲ್ಲಿ ಭೂಗತಪಾತಕಿ ಬನ್ನಂಜೆ ರಾಜಾ ಸಹಿತ ಎಂಟು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಬೆಳಗಾವಿಯ ಕೋಕಾ ನ್ಯಾಯಾಲಯ ಎ.4ರಂದು ತೀರ್ಪು ನೀಡಿತ್ತು. ಪ್ರಾಧ್ಯಾಪಕರ ಪರೀಕ್ಷೆ ಅಕ್ರಮ: ಇಬ್ಬರ ಸೆರೆ
ರಾಜ್ಯ ಸರಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಹುದ್ದೆ ನೇಮಕಾತಿಗೆ ನಡೆದ ಪರೀಕ್ಷೆ ವೇಳೆ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ ಅಕ್ರಮ ನಡೆಸಿದ ಆರೋಪದ ಮೇಲೆ ಮೈಸೂರು ಮೂಲದ ಅತಿಥಿ ಉಪನ್ಯಾಸಕಿ ಸೌಮ್ಯಾ ಮತ್ತು ಬೆಂಗಳೂರು ಮೂಲದ ಓರ್ವನನ್ನು ಪೊಲೀಸರು ಬಂಧಿಸಿದ್ದರು. ಮಾರ್ಚ್‌ನಲ್ಲಿ ನಡೆದ ಸಹಾಯಕ ಪ್ರಾಧ್ಯಾಪಕರ ಹುದ್ದೆಯ ಪರೀಕ್ಷೆಯ ವೇಳೆ ವಾಟ್ಸ್‌ಆ್ಯಪ್‌ನಲ್ಲಿ ಪರೀಕ್ಷಾರ್ಥಿಗಳಿಗೆ ಪ್ರಶ್ನೆಗಳನ್ನು ಸೌಮ್ಯಾ ಕಳುಹಿಸಿದ್ದರು. ಪ್ರಮುಖ ಘಟನೆಗಳು
ಮಾರ್ಚ್ 2022
ಮಾ.4: ಬೊಮ್ಮಾಯಿ ಅವರಿಂದ ಚೊಚ್ಚಲ ಬಜೆಟ್ ಮಂಡನೆ
ಮಾ.5: ಸಂಗೀತಾ ಮ್ಯೂಸಿಕ್ (ಕ್ಯಾಸೆಟ್) ಸಂಸ್ಥೆಯ
ಮಾಲಕ ಎಚ್.ಎಂ. ಮಹೇಶ್ ನಿಧನ
ಮಾ.8: ನಾರಿ ಶಕ್ತಿ ಪುರಸ್ಕಾರ; ರಾಜ್ಯದ ನಿವೃತಿ ರೈ
ಹಾಗೂ ಶೋಭಾ ಗಸ್ತಿಗೆ ಪ್ರಶಸ್ತಿ
ಮಾ.11: ಕಲುಬುರಗಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಒಂದೇ ಕುಟುಂಬದ ಐವರ ಸಹಿತ ಒಂಬತ್ತು ಮಂದಿ ಸಾವು
ಮಾ.13: ಮೈಸೂರು ವಿವಿಯಿಂದ ಪುನೀತ್ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೆಟ್
ಮಾ.16: 12-14 ವರ್ಷದ ಮಕ್ಕಳಿಗೆ ಕೊರೊನಾ ನಿರೋಧಕ ಲಸಿಕೆ ನೀಡಿಕೆ ಆರಂಭ
ಮಾ.18: ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡೆಗೆ ಸರಕಾರದ ಚಿಂತನೆ: ವಿಪಕ್ಷಗಳಿಂದ ಟೀಕೆ
ಮಾ.23: ಧಾರ್ಮಿಕ ದಿನವಾಗಿ ಯುಗಾದಿ ಆಚರಣೆಗೆ ಘೋಷಣೆ
ಮಾ.24: ಹರ್ಷ ಹತ್ಯೆ ಪ್ರಕರಣದ ತನಿಖೆ ಹೊಣೆ ಎನ್‌ಐಎ ಹೆಗಲಿಗೆ
ಮಾ. 30: ಪ್ರಧಾನಿ ಮೋದಿ ಜತೆ ಪರೀಕ್ಷಾ ಪೇ ಚರ್ಚಾಗೆ ರಾಜ್ಯದ 84 ಮಂದಿ ಆಯ್ಕೆ ಎಪ್ರಿಲ್ 2022
ಎ.1: ಸಕಾಲ: ನವೀಕೃತ ವೆಬ್‌ಸೈಟ್‌ಗೆ ಚಾಲನೆ
ಎ.4: ವಿದ್ಯುತ್ ದರ ಏರಿಕೆ; ಪ್ರತಿ ಯೂನಿಟ್‌ಗೆ 35 ಪೈಸೆ ಹೆಚ್ಚಳ
ಸಂಗೀತ ಸಂಯೋಜಕ ರಿಕ್ಕಿ ಕೇಜ್‌ಗೆ 2ನೇ ಗ್ರ್ಯಾಮಿ ಪ್ರಶಸ್ತಿ
ಎ. 6: ಉನ್ನತ ಶಿಕ್ಷಣದಲ್ಲಿ ಕನ್ನಡ ಕಲಿಕೆಯನ್ನು ಕಡ್ಡಾಯ ಗೊಳಿಸುವ ರಾಜ್ಯ ಸರಕಾರದ ಪ್ರಯತ್ನಕ್ಕೆ ಹೈಕೋರ್ಟ್ ತಡೆ
ಎ.8: ನಗರದ 14 ಶಾಲೆಗಳಿಗೆ ಹುಸಿ ಬಾಂಬ್ ಬೆದರಿಕೆ
ಎ.9: ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್, ಗ್ರಂಥಾಲಯ ಇಲಾಖೆಯಿಂದ ಓದುವ ಬೆಳಕು ಕಾರ್ಯಕ್ರಮ
ಎ.10: ಪಿಎಸ್‌ಐ ಅಕ್ರಮ ನೇಮಕಾತಿ ಕೇಸು ಸಿಐಡಿ ತನಿಖೆಗೆ
ಎ.12: ಗುತ್ತಿಗೆಗಾರ ಸಂತೋಷ್ ಉಡುಪಿಯಲ್ಲಿ ನಿಗೂಢ ಸಾವು; ಡೆತ್‌ನೋಟ್‌ನಲ್ಲಿ ಸಚಿವ ಈಶ್ವರಪ್ಪ ಹೆಸರು ಪ್ರಸ್ತಾವ
ಎ.14: ಸಂತೋಷ್ ಸಾವು ಪ್ರಕರಣ; ಈಶ್ವರಪ್ಪ ರಾಜೀನಾಮೆ
ಎ.17: ಹುಬ್ಬಳ್ಳಿಯಲ್ಲಿ ದಿಢೀರ್ ಗಲಭೆ; 89 ಮಂದಿ ಬಂಧನ
ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷರಾಗಿ ಸಿ.ಎಂ.ಇಬ್ರಾಹಿಂ ಅಧಿಕಾರ ಸ್ವೀಕಾರ
ಎ.19: ಪಿಎಸ್‌ಐ ಹಗರಣ: ಟಾಪರ್‌ಗಳ ವಿಚಾರಣೆ
ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಶನ್ ರಚನೆಗೆ ತೀರ್ಮಾನ
ರಾಜ್ಯದ ಕಾಶೀ ಯಾತ್ರಾರ್ಥಿಗಳಿಗೆ ಸರಕಾರದಿಂದ ಸಹಾಯಧನ ಘೋಷಣೆ
ಎ.21: ಹುಬ್ಬಳ್ಳಿ ಗಲಭೆ ಸೂತ್ರಧಾರನ ಬಂಧನ
ಪಿಎಸ್‌ಐ ಹಗರಣ, 10 ಮಂದಿ ಬಂಧನ
ಎ.22: ಪಿಎಸ್‌ಐ ಹಗರಣ, ಖರ್ಗೆ ಆಪ್ತನ ಬಂಧನ
ಎ.27: ಪಿಎಸ್‌ಐ ಹಗರಣ; ನೇಮಕಾತಿ ವಿಭಾಗದ ಮುಖ್ಯಸ್ಥ ಅಮೃತ್ ಪೌಲ್ ಎತ್ತಂಗಡಿ
ಎ.29: ಪಿಎಸ್‌ಐ ಹಗರಣದ ಮುಖ್ಯ ಆರೋಪಿ ದಿವ್ಯಾ ಹಾಗರಗಿ ಕಲಬುರಗಿಯಲ್ಲಿ ಬಂಧನ
ಸಾವಿರ ಕೋಟಿ ಕ್ಲಬ್‌ಗ ಕೆಜಿಎಫ್ 2 ಚಿತ್ರ ಸೇರ್ಪಡೆ