Advertisement

ಇಂದು ಆರೂರಿನಲ್ಲಿ ಕಂದಾಯ ಸಚಿವರ ಗ್ರಾಮ ವಾಸ್ತವ್ಯ

02:38 AM Feb 19, 2022 | Team Udayavani |

ಉಡುಪಿ: ಆರೂರಿನಲ್ಲಿ ಫೆ. 19ರಂದು ಗ್ರಾಮವಾಸ್ತವ್ಯ ನಡೆಸಲಿರುವ ಕಂದಾಯ ಸಚಿವ ಆರ್‌. ಅಶೋಕ್‌ ಅವರನ್ನು ಎತ್ತಿನ ಗಾಡಿ ಮೆರವಣಿಗೆ ಮೂಲಕ ಕರೆದೊಯ್ಯಲಾಗುವುದು ಎಂದು ಶಾಸಕ ರಘುಪತಿ ಭಟ್‌ ಹೇಳಿದರು.

Advertisement

ಫೆ. 19ರ ಮಧ್ಯಾಹ್ನ ಸಚಿವರು ಕೊಕ್ಕರ್ಣೆಗೆ ಆಗಮಿಸಲಿದ್ದಾರೆ. ಅನಂತರ ಸಭೆಯಲ್ಲಿ ವಿವಿಧ ಇಲಾಖೆಗಳ ಸವಲತ್ತು ವಿತರಿಸ ಲಾಗುವುದು. ಡೀಮ್ಡ್ ಫಾರೆಸ್ಟ್‌ ಸಮಸ್ಯೆ ಕುರಿತು ಪ್ರತ್ಯೇಕ ಸಂವಾದ ಇದೆ. ಅಕ್ರಮ-ಸಕ್ರಮ ಅರ್ಜಿ ವಿಲೇವಾರಿ, 94ಸಿ ಅರ್ಜಿಗಳ ವಿಲೇವಾರಿ ಆಗಲಿದೆ ಎಂದು ಶಾಸಕರು ಶುಕ್ರವಾರ ತಿಳಿಸಿದರು.

ಕುಡುಬಿ ಕಾಲನಿಗೆ ಭೇಟಿ
ಸಂಜೆ 5ಕ್ಕೆ ಒಳಬೈಲಿನ ಕುಡುಬಿ ಕಾಲನಿಗೆ ಭೇಟಿ ನೀಡಿ, ಸಂವಾದ ನಡೆಸಲಿದ್ದಾರೆ. ರಾತ್ರಿ ಆರೂರು ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದರು.

ಕೊರಗರ ಮನೆಯಲ್ಲಿ ಉಪಾಹಾರ
ಫೆ. 20ರ ಬೆಳಗ್ಗೆ ಕೆಂಜೂರಿನ ಕುಮಾರ ಕೊರಗ ಅವರ ಮನೆಯಲ್ಲಿ ಸಚಿವರಿಗೆ ಉಪಾಹಾರ ವ್ಯವಸ್ಥೆ ಮಾಡಿದ್ದೇವೆ. ಅನಂತರ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿ ವಡ್ಡಂಬೆಟ್ಟು ಹಾಗೂ ಕಲ್ಲುಗೋಳ ರಸ್ತೆ ಉದ್ಘಾಟನೆ ನಡೆಸಲಿದ್ದು, ಕೆಂಜೂರು ಕೊರಗ ಕಾಲನಿಗೆ ಭೇಟಿ ನೀಡಿ ಸಂವಾದ ನಡೆಸಲಿದ್ದಾರೆ ಎಂದರು.

ಸಾವಿರಕ್ಕೂ ಅಧಿಕ ಮಂದಿಗೆ ಸವಲತ್ತು ವಿತರಣೆ
ಕೊಕ್ಕರ್ಣೆಯಲ್ಲಿ ಕಂದಾಯ ಸಚಿವರ “ಜನಸ್ಪಂದನ’ ಕಾರ್ಯಕ್ರಮ ದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ಹಾಗೂ ಬ್ರಹ್ಮಾವರ ತಾಲೂಕಿನ ಕಂದಾಯ ಇಲಾಖೆ ವತಿಯಿಂದ ಸಾವಿರಕ್ಕೂ ಅಧಿಕ ಮಂದಿಗೆ ವಿವಿಧ ಇಲಾಖೆಗಳ ಸವಲತ್ತು ವಿತರಿಸಲಾಗುವುದು ಎಂದು ಶಾಸಕ ರಘುಪತಿ ಭಟ್‌ ಕೊಕ್ಕರ್ಣೆಯಲ್ಲಿ ನಡೆದ ಸಿದ್ಧತೆ ಸಭೆಯಲ್ಲಿ ತಿಳಿಸಿದರು.

Advertisement

ಮುಂದಿನ ವಾರ ತೀರ್ಪು
ಹಿಜಾಬ್‌ ವಿಚಾರವಾಗಿ ಮುಂದಿನ ವಾರದ ಅಂತ್ಯದೊಳಗೆ ತೀರ್ಪು ಬರುವ ಸಾಧ್ಯತೆಯಿದೆ. ನ್ಯಾಯಾಲಯದ ಆದೇಶವನ್ನು ಸ್ವಾಗತಿಸಲಿದ್ದೇವೆ. ತೀರ್ಪು ವ್ಯತಿರಿಕ್ತವಾಗಿದ್ದಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಚಿಂತನೆ ನಡೆಸಲಿದ್ದೇವೆ.

ಸರಕಾರಿ ಬಾಲಕಿಯರ ಪಿಯು ಕಾಲೇಜಿನ 6 ವಿದ್ಯಾರ್ಥಿಗಳು ಹಿಜಾಬ್‌ ತೆಗೆದಿಟ್ಟು ತರಗತಿಗೆ ಬರುತ್ತಿ ದ್ದುದಕ್ಕೆ ದಾಖಲೆಗಳು ನಮ್ಮಲ್ಲಿವೆ ಎಂದರು.

ತನಿಖೆ ಆಗುತ್ತಿದೆ
ಎನ್‌ಐಎ ತನಿಖೆಗೆ ಆಗ್ರಹಿಸಿ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದೇವೆ. ನಮ್ಮಿಂದ ಮಾಹಿತಿ ಕೇಳಿದ್ದು, ನೀಡಿದ್ದೇವೆ ಹಾಗೂ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ ಎಂದರು. ಉಡುಪಿ ನಗರ ಬಿಜೆಪಿ ಅಧ್ಯಕ್ಷ ಮಹೇಶ್‌ ಠಾಕೂರ್‌, ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರಮೋದರಿಗೆ ಸ್ವಾಗತವಿದೆ
ಪ್ರಮೋದ್‌ ಬಿಜೆಪಿಗೆ ಬಂದರೆ ಸ್ವಾಗತ. ಅವರು ಈ ಬಗ್ಗೆ ನನ್ನೊಂದಿಗೆ ಮಾತುಕತೆ ನಡೆಸಿಲ್ಲ. ಹಿಂದೆ ಚುನಾವಣೆ ಸಂದರ್ಭ ಅವರು ಬಿಜೆಪಿಗೆ ಬರುವುದನ್ನು ವಿರೋಧಿ ಸಿದ್ದೆ. ಸಂದರ್ಭಾನುಸಾರ ಎಲ್ಲರೂ ನೆಲೆ ಗಟ್ಟಿ ಮಾಡಿಕೊಳ್ಳಲು ಬಯಸು ತ್ತಾರೆ. ಈಗ ನಮ್ಮ ನೆಲೆ ಭದ್ರವಾಗಿದೆ. 17 ಶಾಸಕರು ಬಾರದೆ ಇದ್ದಿದ್ದರೆ ನಮ್ಮ ಸರಕಾರವೇ ಬರುತ್ತಿರಲಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next