Advertisement

ಕಂದಾಯ ಸಚಿವರಿಗೆ ಅಹವಾಲುಗಳ ಮಹಾಪೂರ

01:14 PM May 08, 2017 | |

ಜಗಳೂರು: ಪಟ್ಟಣಕ್ಕೆ ಆಗಮಿಸಿದ್ದ ಕಂದಾಯ ಸಚಿವ ಕಾಗೋಡ ತಿಮ್ಮಪ್ಪ ಅವರಿಗೆ ಸಾರ್ವಜನಿಕರಿಂದ ವಿವಿಧ ಅಹವಾಲು ಮತ್ತು ದೂರು ಅರ್ಜಿಗಳು ಸಲ್ಲಿಕೆಯಾದವು. ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಹಮ್ಮಿಕೊಂಡಿದ್ದ ಅಕ್ರಮ-ಸಕ್ರಮದಡಿ ಸಾಗುವಳಿ ಚೀಟಿ,

Advertisement

ಅನುಧಿಕೃತ ಮನೆ ನಿರ್ಮಾಣದ ಮನೆಗಳ ಹಕ್ಕುಪತ್ರ ಹಾಗೂ ವಿವಿಧ ಯೋಜನೆಗಳ ಪ್ರಮಾಣ ಕಂದಾಯ ಇಲಾಖೆಯ ವಿವಿಧ ಯೋಜನೆಗಳ ಪ್ರಮಾಣ ಪತ್ರಗಳ ಸಮಾರಂಭದಲ್ಲಿ ಸಚಿವ ಭಾಷಣದ ಮಧ್ಯೆಯೇ ಸಾರ್ವಜನಿಕರು ಅರ್ಜಿಗಳನ್ನು ಸಲ್ಲಿಸುವ ಮೂಲಕ ಗಮನ ಸೆಳೆದರು.

ವೇದಿಕೆಯ ಬಲಭಾಗದಲ್ಲಿ ಅರ್ಜಿ ಕೈಯಲ್ಲಿ ಹಿಡಿದು ಕುಳಿತಿದ್ದ ಅನೇಕ ರೈತರು ಸಚಿವರಿಗೆ ಸಲ್ಲಿಸಲು ಹವಣಿಸುತ್ತಿದ್ದರು. ಆದರೆ ಇದಕ್ಕೆ ಪೊಲೀಸರು ಅವಕಾಶ ನೀಡಲಿಲ್ಲ. ಕಾರ್ಯಕ್ರಮ ಮುಗಿದ ನಂತರ ಅರ್ಜಿ ಸ್ವೀಕರಿಸಲಾಗುವುದು ಎಂದು ಸಚಿವರು ರೈತರ ಮನವೊಲಿಸಿದರು. 

ಇತ್ತ ಎಡ ಭಾಗದಲ್ಲಿ ಕುಳಿತಿದ್ದ ಮಹಿಳೆಯರು ನಾವು ಸಚಿವರಿಗೆ ಅರ್ಜಿ ಸಲ್ಲಿಸಲು ಅವಕಾಶ ಕೊಡಬೇಕೆಂದು ಪೊಲೀಸರೊಂದಿಗೆ ವಾಗ್ವಾದಕ್ಕಿಳಿದರು. ಇದನ್ನು ಗಮನಿಸಿದ ಸಚಿವರು ಮಹಿಳೆಯರನ್ನು ವೇದಿಕೆಗೆ ಆಹ್ವಾನಿಸಿ ಅರ್ಜಿ ಪರಿಶೀಲನೆ ನಡೆಸಿದರು.

ಜಗಳೂರು ಪಟ್ಟಣದ ಸರ್ವೇ ನಂಬರ್‌ 90 ರಲ್ಲಿ ನಿವೇಶನದ ಹಕ್ಕುಪತ್ರ ನೀಡಲಾಗಿತ್ತು. ಆದರೆ 2006ನೇ ಸಾಲಿನಲ್ಲಿ ನಿವೇಶನವನ್ನು ಪರಿವರ್ತಿಸಿ ಕ್ರೀಡಾಂಗಣ ನಿರ್ಮಾಣ ಮಾಡಲಾಗಿದೆ. ನಮಗೆ ನ್ಯಾಯ ದೊರಕಿಸಿಕೊಡುವಂತೆ ಮಹಿಳೆಯರು ಸಚಿವರಲ್ಲಿ  ಅವಲತ್ತು ಕೊಂಡರು. 

Advertisement

ಮಹಾಪೂರ ದೂರು ಅರ್ಜಿ ಸಲ್ಲಿಕೆ: ಕಾರ್ಯಕ್ರಮ ಮುಗಿಸಿ ಹೊರಡುತ್ತಿದ್ದನ್ನು ಗಮನಿಸಿದ ಸಾರ್ವಜನಿಕರು ನಾಮುಂದು ತಾಮುಂದು ಎನ್ನುವಂತೆ ದೂರು ಅರ್ಜಿ ಸಲ್ಲಿಕೆಗೆ ಸಚಿವರಿಗೆ ಮುಗಿಬಿದ್ದರು. ತಾಳ್ಮೆಯಿಂದಲೇ ಎಲ್ಲಾ ಅರ್ಜಿ ಸ್ವೀಕರಿಸಿದ ಸಚಿವರು ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅರ್ಜಿದಾರರಿಗೆ ಭರವಸೆ ನೀಡಿದರು. 

ಶಾಸಕ ಎಚ್‌.ಪಿ.ರಾಜೇಶ್‌, ಜಿಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಸ್‌.ಕೆ. ಮಂಜುನಾಥ್‌, ತಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಮುದೇಗೌಡ್ರು ಬಸವರಾಜಪ್ಪ, ಜಿಪಂ ಸದಸ್ಯರಾದ ಉಮಾ ವೆಂಕಟೇಶ್‌, ಶಾಂತಕುಮಾರಿ,

ಎಪಿಎಂಸಿ ಅಧ್ಯಕ್ಷ ಯು.ಜಿ. ಶಿವಕುಮಾರ್‌, ಪಪಂ ಅಧ್ಯಕ್ಷೆ ನೂರಜಹಾನ್‌, ಉಪಾಧ್ಯಕ್ಷ ಹಾಲಸ್ವಾಮಿ, ಜಿಲ್ಲಾಧಿಕಾರಿ ಡಿ.ಎಸ್‌.ರಮೇಶ್‌, ತಹಶೀಲ್ದಾರ್‌ ಶ್ರೀಧರಮೂರ್ತಿ, ತಾಪಂ ಇಒ ಲಕ್ಷಿ ಪತಿ, ಸ್ವಾತಂತ್ರ ಹೋರಾಟಗಾರ ತಿಮ್ಮಾರೆಡ್ಡಿ, ಮುಖಂಡರಾದ ಲತ್ತಿಪ್‌ಸಾಬ್‌, ಕೆ.ಪಿ.ಪಾಲಯ್ಯ ಇತರರಿದ್ದರು.  

Advertisement

Udayavani is now on Telegram. Click here to join our channel and stay updated with the latest news.

Next