ಮಾಲೂರು: ರೈತರೊಬ್ಬರಪಹಣಿತಿದ್ದುಪಡಿಗಾಗಿಲಂಚದ ಬೇಡಿಕೆ ಇಟ್ಟಿದ್ದ ಇಲ್ಲಿನ ಕಸಬಾ ಹೋಬಳಿಯ ಕಂದಾಯನಿರೀಕ್ಷಕ ಸುಬ್ರಹ್ಮಣ್ಯಂ(54) ಎಸಿಬಿ ಬಲೆಗೆ ಬಿದ್ದಿದ್ದಾನೆ.
ತಾಲೂಕಿನ ಮಾರಸಂದ್ರ ಗ್ರಾಮದ ರೈತ ನಾರಾಯಣ.ಮೂರ್ತಿ ಎಂಬಾತನ ಪಹಣಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿ ಸಿದ್ದು, ಇದಕ್ಕಾಗಿ ಕಂದಾಯ ನಿರೀಕ್ಷಕ 2 ಲಕ್ಷ ರೂ.ಲಂಚದ ಬೇಡಿಕೆ ಇಟ್ಟಿದ್ದು, ಮೊದಲ ಕಂತಾಗಿ 10 ಸಾವಿರ ರೂ.ಪಡೆಯುವ ವೇಳೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿ ಬಂಧಿಸಿದ್ದಾರೆ.
ಅನೇಕ ವರ್ಷಗಳಿಂದ ತಾಲೂಕಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಸುಬ್ರಹ್ಮಣ್ಯಹಲವು ಹುದ್ದೆಗಳನ್ನು ನಿರ್ವಹಿಸಿದ್ದು, ಈ ಹಿಂದೆ ಧಾರ್ಮಿಕ ದತ್ತಿ ಇಲಾಖೆಯ ವಿಷಯ ನಿರ್ವಹಕರಾಗಿ ಕಾರ್ಯನಿರ್ವಹಿಸಿದ್ದರು. ಇತ್ತೀಚೆಗೆ ಒಂದುವರ್ಷದ ಹಿಂದೆ ಕಂದಾಯ ನಿರೀಕ್ಷಕರಾಗಿ ಪ್ರಭಾರ ವಹಿಸಿಕೊಂಡಿದ್ದರು. ಇವರ ಮನೆ ಮತ್ತು ಕಚೇರಿ ಮೇಲೆಎರಡು ಮೂರು ಬಾರಿ ಲೋಕಾಯುಕ್ತ ಅಧಿಕಾರಿಗಳ ಅಕ್ರಮ ಆಸ್ತಿ ಆರೋಪದ ಮೇಲೆ ದಾಳಿ ನಡೆಸಿದ್ದರು. ಸರ್ಕಾರಿ ಕೆಲಸಗಳಿಗೂ ದರ ನಿಗದಿ: ಇತ್ತೀಚಿನ ದಿನಗಳಲ್ಲಿಮಾಲೂರು ತಾಲೂಕು ಕಚೇರಿಯು ಭ್ರಷ್ಟಾಚಾರದ ಕೂಪಲಾಗುತ್ತಿದ್ದು, ಇಲ್ಲಿನ ಪ್ರತಿ ಕೆಲಸಕ್ಕೂ ಅಧಿಕಾರಿ ವರ್ಗದರವನ್ನು ನಿಗದಿಪಡಿಸಿಕೊಂಡಿದ್ದು, ನೇರವಾಗಿ ಬಂದ ವ್ಯಕ್ತಿಗಳಿಗಿಂತ ಮಧ್ಯವರ್ತಿಗಳ ಮೂಲಕ ಕೆಲಸ ಮಾಡುವ ಪ್ರವೃತ್ತಿಯನ್ನು ಬೆಳೆಸಿಕೊಂಡಿದ್ದರು.
ಯಾವುದೇಕೆಲಸಕ್ಕೂಲಂಚದ ದರ ನಿಗದಿಪಡಿಸಿಕೊಂಡಿರುವ ಅಧಿಕಾರಿ ವರ್ಗ ಮಧ್ಯವರ್ತಿಗಳ ಮೂಲಕ ಹಣ ಪಡೆಯುತ್ತಿದ್ದ ನಿದರ್ಶಗಳಿವೆ. ರಿಯಲ್‌ಎಸ್ಟೇಟ್‌ಕುಳಗಳು ತಮಗೆ ಅಗತ್ಯವಾಗಿರುವಂತೆ ಭೂ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ದೊಡ್ಡ ಗುಂಪನ್ನೇ ಸೃಷ್ಟಿಸಿಕೊಂಡಿದ್ದಾರೆ. ವಾರದಲ್ಲಿ ಎರಡನೇ ಬೇಟೆ: ಇಲ್ಲಿನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವಾಹನ ಚಾಲಕರ ತರಬೇತಿ ಸಂಸ್ಥೆಯ ಪ್ರಾಂಶುಪಾಲ ನಿಲಯದ ಊಟದ ಬಿಲ್ ಮಾಡಲು ಗುತ್ತಿಗೆದಾರರಿಂದ ಲಂಚ ಪಡೆಯುತ್ತಿರುವ ಆರೋಪದ ಮೇಲೆ ಎಸಿಬಿ ದಾಳಿಗೆ ಒಳಗಾಗಿ ವಾರ ಕಳೆಯುವ ಮೊದಲೇ ಕಂದಾಯ ಇಲಾಖೆಯ ಕಸಬಾ ರೆವಿನ್ಯೂ ಇನ್ಸ್ ಪೆಕ್ಟರ್ ಲಂಚದ ಆರೋಪಕ್ಕೆ ಸಿಲುಕಿದ್ದಾರೆ.
ಅಧಿಕಾರಿಗಳ ಅಮಾನತು :
ದೊಮ್ಮರಹಳ್ಳಿ ಸರ್ಕಾರಿ ಭೂಮಿಗೆ ಬೇನಾಮಿ ದಾಖಲೆ ಸೃಷ್ಟಿಸಿದ ಆರೋಪದ ಅಡಿಯಲ್ಲಿ ಇಲ್ಲಿನಕಂದಾಯ ಇಲಾಖೆಯ ಆರ್‌ಆರ್‌ಟಿ ಮತ್ತು ಭೂದಾಖಲೆಗಳ ಶಾಖೆಗಳ 7 ಕ್ಕೂ ಅಧಿಕಾರಿಗಳುಅಮಾನತು ಆಗಿದ್ದು, ಇದೇ ಹಾದಿಯಲ್ಲಿ ಇನ್ನಿಬ್ಬರುನೌಕರರು ಅಮಾನತುಗೊಂಡಿದ್ದಾರೆ. ಇಎಸ್‌ಟಿಶಾಖೆಯ ಅನಿತಾ ಮತ್ತು ಅಬಿಲೇಖಾಲಯದವಾಜೀದ್‌ಪಾಶ ಅವರುಗಳನ್ನು ಅಮಾನತುಪಡಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.