ಮುಳಬಾಗಿಲು: ತಾಲೂಕಿನ ಕಂದಾಯ, ಸರ್ವೆ ಹಾಗೂ ನೋಂದಣಿ ಇಲಾಖೆಯಲ್ಲಿ ಹತ್ತಾರು ವರ್ಷಗಳಿಂದ ಕಚೇರಿಯಲ್ಲಿ ಕೆಲಸ ಮಾಡುತ್ತಾ ಭೂ ಮಂಜೂರಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ವ್ಯಸಗಿರುವ ನೌಕರರನ್ನು ಕೂಡಲೇ ಬೇರೆ ತಾಲೂಕಿಗೆ ವರ್ಗಾವಣೆ ಮಾಡಿ, ಭೂ ಹಗರಣ ಸಿಬಿಐಗೆ ಒಪ್ಪಿಸಬೇಕೆಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಪ್ರತಿಭಟಿಸಿದರು. ನಗರದ ಮಿನಿವಿಧಾನಸೌಧ ಎದುರು ಬಾರ್ ಕೋಲ್ ಚಳವಳಿ ಮಾಡುವ ಮೂಲಕ ತಹಶೀಲ್ದಾರ್ ರಾಜ್‌ಶೇಖರ್‌ಗೆ ಮನವಿ ಸಲ್ಲಿಸಲಾಯಿತು.
ವ್ಯಾಪಕ ಭ್ರಷ್ಟಾಚಾರ: ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ತಾಲೂಕಿನ ಕಂದಾಯ, ಸರ್ವೆ ಹಾಗೂ ನೋಂದಣಿ ಇಲಾಖೆಯಲ್ಲಿ ಹಲವು ನೌಕರರು ಹತ್ತಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ, ಭೂ ಮಾಫಿಯಾದೊಂದಿಗೆ ಶಾಮೀಲಾಗಿ, vಸರ್ಕಾರಿ ಗೋಮಾಳ, ಗುಂಡು ತೋಪು, ಕೆರೆಗಳಿಗೆ ರಾತ್ರೋರಾತ್ರಿ ನಕಲಿ ದಾಖಲೆ ಸೃಷ್ಟಿ ಮಾಡುವ ಮೂಲಕ ಭೂ ಮಂಜೂರಾತಿಯಲ್ಲಿ ವ್ಯಾಪಕ ಭ್ರಷ್ಟಾಚಾರ ವ್ಯಸಗಿದ್ದಾರೆ ಎಂದು ದೂರಿದರು.
ತನಿಖೆ ಸಿಬಿಐಗೆ ವಹಿಸಿ: ಇಲಾಖೆಯಲ್ಲಿ ನಡೆದಿರುವ ಭೂ ಹಗರಣ ತನಿಖೆಯನ್ನು ಸಿಬಿಐಗೆಒಪ್ಪಿಸಬೇಕು, ಸರ್ಕಾರಿ ಕಾನೂನನ್ನು ಗಾಳಿಗೆ ತೂರಿ ಹತ್ತಾರು ವರ್ಷಗಳಿಂದ ಇಲ್ಲಿಯೇ ಇದ್ದು 10 ಸಾವಿರ ಕೊಟ್ಟರೆ ಕಚೇರಿಯ ಅಭಿಲೇಖಾಲ ಯದಲ್ಲಿನ ಯಾವುದೇ ದಾಖಲೆ ಬೇಕಾದರೂ ದಲ್ಲಾಳಿಗಳಿಗೆ ಮಾರಾಟ ಮಾಡುತ್ತಾರೆ. ಅಲ್ಲದೇ, ಕೆಲವು ಜಮೀನು ಅಕ್ರಮಗಳನ್ನು ಬಯಲಿಗೆಳೆಯಲು ಟಪಾಲು ಸೆಕ್ಷನ್‌ನಲ್ಲಿ ಅರ್ಜಿ ನೀಡಿದರೆ, ಅಲ್ಲಿರುವ ಸಿಬ್ಬಂದಿ ಅದನ್ನೂ ಗೌಪ್ಯವಾಗಿಡದೆ, ದಲ್ಲಾಳಿಗಳಿಗೆ ಜೆರಾಕ್ಸ್ ಪ್ರತಿ ನೀಡುವ ಮೂಲಕ ಕೋಲಾಹಲ ಸೃಷ್ಟಿಸುತ್ತಾರೆ ಎಂದು ಆರೋಪಿಸಿದರು.
ಬೇರೆ ತಾಲೂಕಿಗೆ ವರ್ಗಾಹಿಸಿ: ಭೂಮಿ ಮಂಜೂರಾತಿಗಾಗಿ ಬಡವರು ನಮೂನೆ 50, 53, 57ರಲ್ಲಿ ಅರ್ಜಿ ಸಲ್ಲಿಸಿದರೆ, ನೌಕರರು ಆ ಅರ್ಜಿಗಳನ್ನು ಗೋಲ್‌ಮಾಲ್ ಮಾಡುವ ಮೂಲಕ ಸಾಕಷ್ಟು ಹಣ ಪಡೆದು ರಿಯಲ್ ಎಸ್ಟೇಟ್ ದಂಧೆಕೋರರ ಹೆಸರಿಗೆ ದರಕಾಸ್ತು ಕಮಿಟಿಯೂ ಇಲ್ಲದೇ, ಜಮೀನು ಮಂಜೂರು ಮಾಡುವ ದೊಡ್ಡ ಜಾಲವೇ ಇಲ್ಲಿದೆ ಎಂದರು.
ತಾಲೂಕು ಅಧ್ಯಕ್ಷ ಫಾರುಕ್‌ಪಾಷ ಮಾತನಾಡಿದರು. ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, ಜಿಲ್ಲಾಧ್ಯಕ್ಷೆ ಎ.ನಳಿನಿ, ಮರಗಲ್ ಶ್ರೀನಿವಾಸ್, ಯಲುವಳ್ಳಿ ಪ್ರಭಾಕರ್, ಅಣ್ಣಿಹಳ್ಳಿ ನಾಗರಾಜ್, ವಿಜಯ್‌ಪಾಲ್, ವೇಣು, ಪೊಮ್ಮರಹಳ್ಳಿ ನವೀನ್, ಜುಬೇರ್‌ಪಾಷ, ರಾಜೇಶ್ ಕಲೆ, ನಲ್ಲಾಂಡಹಳ್ಳಿ ಕೇಶವ, ಜಗದೀಶ್, ಸುಧಾಕರ್, ವಿನೋದ್, ರಾಮಮೂರ್ತಿ ರಾಘವೇಂದ್ರ, ಶಿವ, ಸಂತೋಷ್, ಅಂಬ್ಲಿಕಲ್ ಮಂಜುನಾಥ್, ರಂಜಿತ್,