Advertisement

ಹೋಬಳಿ ಮಟ್ಟದಲ್ಲಿ ಕಂದಾಯ, ಪಿಂಚಣಿ ಅದಾಲತ್‌’

01:44 AM Jun 27, 2019 | Sriram |

ಮಂಗಳೂರು: ವಿವಿಧ ರೀತಿಯ ಪಿಂಚಣಿ ಸೌಲಭ್ಯಗಳನ್ನು ಶೀಘ್ರ ಹಾಗೂ ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಪ್ರತೀ ಹೋಬಳಿ ಮಟ್ಟದಲ್ಲಿ ತಿಂಗಳಿಗೊಮ್ಮೆ ಕಂದಾಯ ಅದಾಲತ್‌ ಮತ್ತು ಪಿಂಚಣಿ ಅದಾಲತ್‌ಗಳನ್ನು ನಡೆಸಲು ನಿರ್ದೇಶಿಸ‌ಲಾಗಿದೆಎಂದು ಮುಖ್ಯಮಂತ್ರಿಗಳ ಸಂಸ ದೀಯ ಕಾರ್ಯದರ್ಶಿ ಐವನ್‌ ಡಿ’ಸೋಜಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಕಂದಾಯ ಅದಾಲತ್‌ ಅಭಿಯಾನ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಈ ವೇಳೆ ಜನಪ್ರತಿನಿಧಿಗಳು, ಎಲ್ಲ ಫಲಾನುಭವಿ ಗಳನ್ನು ಒಟ್ಟು ಸೇರಿಸಿ ಸಮಸ್ಯೆ ಪರಿಹಾ ರಕ್ಕೆ ಪ್ರಯತ್ನಿಸಲಾಗುವುದು ಎಂದರು.

ಕಂದಾಯ ಇಲಾಖೆಗೆ ಸಂಬಂಧಿಸಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ಪಿಂಚಣಿ ಎಲ್ಲರಿಗೂ ಸರಿಯಾಗಿ ಸಿಗುತ್ತಿಲ್ಲ ಎನ್ನುವ ಮಾತುಗಳು ಅದಾಲತ್‌ ಸಮಯದಲ್ಲಿ ಕೇಳಿ ಬಂದಿವೆ. ಹೋಬಳಿ ಮಟ್ಟದಲ್ಲಿ ಗ್ರಾಮ ಲೆಕ್ಕಿಗರು ಪರಿಶೀಲನೆ ಮಾಡಿಕೊಂಡು ಬಳಿಕ ಪಿಂಚಣಿ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ಮಾಡುವಂತೆ ಸೂಚಿಸಲಾಗಿದೆ. 2018ರ ಎ. 1ರಿಂದ ಮೇ 31ರ ವರೆಗೆ 22,502 ಪಿಂಚಣಿದಾರರನ್ನು ಗುರುತಿಸಲಾಗಿದೆ. ಬಾಕಿ ಉಳಿದಿದ್ದರೆ ಅವರಿಗೆ ವಿಶೇಷ ಪಿಂಚಣಿ ಅದಾಲತ್‌ಗಳನ್ನು ಮಾಡಲಾಗುತ್ತದೆ. 2019 ಎ. 1ರಿಂದ ಮೇ 31ರ ವರೆಗೆ ಕಂದಾಯ ಅದಾಲತ್‌ನಲ್ಲಿ ಸುಮಾರು 2,044 ಅರ್ಜಿಗಳನ್ನು ಇತ್ಯರ್ಥಗೊಳಿಸ ಲಾಗಿದೆ ಎಂದರು.

ಕೆಲವೆಡೆ ಅಧಿಕಾರಿಗಳು ಯೋಜನೆ ಜಾರಿಗೆ ತರುವಲ್ಲಿ ಕಾನೂನಿನ ತೊಡಕಿನ ಬಗ್ಗೆ ಪ್ರಗತಿ ಪರಿಶೀಲನೆಯ ವೇಳೆ ಗಮನಕ್ಕೆ ತಂದಿದ್ದು, ಈ ಕುರಿತು ಅಧಿವೇಶನದಲ್ಲಿ ಗಮನ ಸೆಳೆಯ ಲಾಗುವುದು. ಕಾನೂನಿನಲ್ಲೂ ಬದಲಾ ವಣೆ ತರುವ ಕುರಿತು ಮುಖ್ಯಮಂತ್ರಿ ಗಳ ಜತೆ ಚರ್ಚಿಸಲಾಗುವುದು. ನೂತನ ತಾಲೂಕು ಗಳಲ್ಲಿ ಇಲಾಖೆಯ ಅಧಿಕಾರಿಗಳು ಕೂಡಲೇ ಕಚೇರಿಯನ್ನು ತೆರೆದು ಕಾರ್ಯನಿರ್ವಹಿಸಬೇಕು. ಕಾನೂನು ಉಲ್ಲಂಘಿಸಿದರೆ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದರು.

ಪ್ರಾಪರ್ಟಿ ಕಾರ್ಡ್‌ಗೆ ಹೊಸ ಕೇಂದ್ರ ?

ಪ್ರಾಪರ್ಟಿ ಕಾರ್ಡ್‌ ಕಡ್ಡಾಯವಾಗುತ್ತಿದ್ದಂತೆ ತಾಲೂಕು ಕಚೇರಿ ಕೇಂದ್ರದಲ್ಲಿ ಪಿಆರ್‌ ಕಾರ್ಡ್‌ಗೆ ಜನರ ಒತ್ತಡ ಹೆಚ್ಚಾಗುತ್ತಿದೆ. ಅದನ್ನು ತಪ್ಪಿಸಲು ಹೊಸ ಸೆಂಟರ್‌ವೊಂದನ್ನು ಆರಂಭಿಸುವ ಕುರಿತು ಈಗಾಗಲೇ ಚರ್ಚೆ ನಡೆಸಲಾಗಿದೆ. ಜಿಲ್ಲಾಧಿಕಾರಿ ಅವರು ವಾರದಲ್ಲಿ ಒಂದು ದಿನ ಮಧ್ಯಾಹ್ನ ಬಳಿಕ ಸಮಯ ಮೀಸಲಿಟ್ಟು ಕುಂದು ಕೊರತೆಗಳನ್ನು ಬಗಹರಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು. ಮುಖ್ಯಮಂತ್ರಿ ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡುವುದರಿಂದ ಖರ್ಚು ಮಾತ್ರ ಲಾಭ ಇಲ್ಲ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಹೇಳಿಕೆಗೆ ತಿರುಗೇಟು ನೀಡಿ ಐವನ್‌, ಬಿಜೆಪಿಯವರು ಜೈಲುವಾಸ ಮಾಡಿ ಬಂದವರು. ಅವರಿಗೆ ಗ್ರಾಮವಾಸ್ತವ್ಯದ ಕಲ್ಪನೆ ಬರಲು ಸಾಧ್ಯವಿಲ್ಲ ಎಂದರು.
Advertisement

Udayavani is now on Telegram. Click here to join our channel and stay updated with the latest news.

Next