Advertisement

HD Revanna: ರೇವಣ್ಣಗೆ ಧೈರ್ಯ ತುಂಬಿದ ಜೆಡಿಎಸ್‌ ಶಾಸಕರು

09:10 PM May 09, 2024 | Suhan S |

ಬೆಂಗಳೂರು: ಅರಕಲಗೂಡು ಕ್ಷೇತ್ರದ ಜೆಡಿಎಸ್‌ ಶಾಸಕ ಎ.ಮಂಜು ಹಾಗೂ ಶ್ರವಣಬೆಳಗೊಳದ ಸಿ.ಎನ್‌.ಬಾಲಕೃಷ್ಣ ಗುರುವಾರ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಎಚ್‌.ಡಿ.ರೇವಣ್ಣ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿ ಧೈರ್ಯ ತುಂಬಿದರು.

Advertisement

ಬಳಿಕ ಎ.ಮಂಜು ಮಾಧ್ಯಮದವರ ಜತೆಗೆ ಮಾತನಾಡಿ, ಈ ರೀತಿ ಘಟನೆಗಳು, ದ್ವೇಷದ ರಾಜಕಾರಣ ಯಾರಿಗೂ ಆಗಬಾರದು. ರೇವಣ್ಣ ಅವರನ್ನು ಅನಗತ್ಯವಾಗಿ ಪ್ರಕರಣದಲ್ಲಿ ಸಿಲುಕಿಸಿರುವುದು ತಪ್ಪು. ಯಾರೇ ತಪ್ಪು ಮಾಡಿದರೂ ಕ್ರಮ ತೆಗೆದುಕೊಳ್ಳಿ. ಇದರಲ್ಲಿ ಎರಡನೇ ಮಾತಿಲ್ಲ. ರೇವಣ್ಣ ಮೇಲೆ ಈ ರೀತಿಯ ಆಪಾದನೆ ಮಾಡಿರುವುದು ತಪ್ಪು ಎಂದರು.

ರೇವಣ್ಣ ಅವರು ಆರೋಗ್ಯವಾಗಿ, ಧೈರ್ಯವಾಗಿ, ಚೆನ್ನಾಗಿ ಇದ್ದಾರೆ. ಸೋಮವಾರ ರೇವಣ್ಣ ಅವರಿಗೆ ಜಾಮೀನು ಸಿಗಲಿದೆ ಎಂಬ ನಂಬಿಕೆ ಇದೆ. ಅವರಿಗೆ ಧೈರ್ಯ ತುಂಬಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next