Advertisement

SIT ವಿಚಾರಣೆಗೆ ರೇವಣ್ಣ,ಪ್ರಜ್ವಲ್‌ ಗೈರು; ನಾಳೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್‌ ಸಾಧ್ಯತೆ

11:57 PM May 01, 2024 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿರುವ ಅಶ್ಲೀಲ ವೀಡಿಯೋಗಳಿರುವ ಪೆನ್‌ಡ್ರೈವ್‌ ಪ್ರಕರಣದ ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಾಗೂ ಅವರ ತಂದೆ ಹೊಳೆನರಸೀಪುರ ಶಾಸಕ ಎಚ್‌.ಡಿ. ರೇವಣ್ಣ ಎಸ್‌ಐಟಿ ವಿಚಾರಣೆಗೆ ಮಂಗಳವಾರ ಗೈರು ಹಾಜರಾಗಿದ್ದಾರೆ.

Advertisement

ಪ್ರಜ್ವಲ್‌ ರೇವಣ್ಣ ಕೊನೆಗೂ ಸಾಮಾಜಿಕ ಜಾಲತಾಣದಲ್ಲಿ ಪ್ರತ್ಯಕ್ಷವಾಗಿದ್ದು ವಿದೇಶದಲ್ಲಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಲು 7 ದಿನ ಕಾಲಾವಕಾಶ ನೀಡುವಂತೆ ತಮ್ಮ ವಕೀಲರ ಮೂಲಕ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ಮನವಿ ಮಾಡಿದ್ದಾರೆ.

ಹಾಸನದ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್‌ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದರೂ ಸಂಸದ ಪ್ರಜ್ವಲ್‌ ರೇವಣ್ಣ ಇಷ್ಟು ದಿನ ಮೌನಕ್ಕೆ ಶರಣಾಗಿದ್ದರು. ಇದೀಗ ಸಾಮಾಜಿಕ ಜಾಲತಾಣದಲ್ಲಿ ಪ್ರಕರಣದ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರೀಯೆ ನೀಡಿದ್ದಾರೆ. ವಿಚಾರಣೆಗೆ ಹಾಜರಾಗಲು ನಾನು ಬೆಂಗಳೂರಿನಲ್ಲಿ ಇಲ್ಲದ ಕಾರಣ, ನಾನು ನನ್ನ ವಕೀಲರ ಮೂಲಕ ಸಿಐಡಿ ಬೆಂಗಳೂರಿಗೆ ಮನವಿ ಮಾಡಿದ್ದೇನೆ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂಬುದಾಗಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಎಸ್‌ಐಟಿಗೆ ಕೊಟ್ಟ ಪತ್ರದಲ್ಲೇನಿದೆ?
ಪ್ರಜ್ವಲ್‌ ರೇವಣ್ಣ ಪರ ವಕೀಲ ಜಿ. ಅರುಣ್‌ ಮಂಗಳವಾರ ಸಿಐಡಿ ಕಚೇರಿಯಲ್ಲಿರುವ ಎಸ್‌ಐಟಿ ವಿಭಾಗಕ್ಕೆ ತೆರಳಿ ಪ್ರಜ್ವಲ್‌ ವಿಚಾರಣೆಗೆ ಹಾಜರಾಗಲು 7 ದಿನ ಸಮಯಾವಕಾಶ ಕೇಳಿದ್ದಾರೆ. ನನ್ನ ಕಕ್ಷಿದಾರರಾದ ಪ್ರಜ್ವಲ್‌ ಮನೆಯ ಮೇಲೆ ತಮ್ಮ ಕಚೇರಿಯಿಂದ ಕಳುಹಿಸಿರುವ ನೋಟಿಸನ್ನು ಅಂಟಿಸಿರುವ ಬಗ್ಗೆ ನನಗೆ ಪ್ರಜ್ವಲ್‌ ಕುಟುಂಬದವರಿಂದ ಬಂದ ಮಾಹಿತಿ ಪ್ರಕಾರ ಎ. 30ರಂದು ಕಲಂ 41 (ಎ) ಸಿ.ಆರ್‌.ಪಿ.ಸಿ ಪ್ರಕಾರ ತಮ್ಮ ನೋಟಿಸ್‌ನಲ್ಲಿ ತಾವು ಮೇ 1ರಂದು ತಮ್ಮ ಮುಂದೆ ಹಾಜರಾಗಲು ತಿಳಿಸಿರುತ್ತೀರಿ. ಆದರೆ, ಪ್ರಜ್ವಲ್‌ ರೇವಣ್ಣ ಬೆಂಗಳೂರಿನಿಂದ ಹೊರಗಡೆ ಪ್ರವಾಸದಲ್ಲಿದ್ದು ಅವರಿಗೆ ನೋಟಿಸ್‌ ಬಗ್ಗೆ ವಿಷಯ ತಿಳಿಸಲಾಗಿದೆ. ನನ್ನ ಕಕ್ಷಿದಾರರು ಬೆಂಗಳೂರಿಗೆ ಬಂದು ತಮ್ಮ ಮುಂದೆ ನೋಟಿಸ್‌ ಸೂಚನೆಯಂತೆ ಹಾಜರಾಗಲು 7 ದಿನಗಳ ಕಾಲಾವಕಾಶ ಅಗತ್ಯವಿರುವುದಾಗಿ ತಿಳಿಸಿದ್ದು, ನನ್ನ ಕಕ್ಷಿದಾರರಿಗೆ ಸುಮಾರು 7 ದಿನಗಳ ಕಾಲಾವಕಾಶ ಕೊಟ್ಟು ಮತ್ತೊಂದು ದಿನಾಂಕದಂದು ತಮ್ಮ ಮುಂದೆ ವಿಚಾರಣೆಗೆ ಹಾಜರಾಗಲು ಅವಕಾಶ ನೀಡಬೇಕೆಂದು ಈ ಮೂಲಕ ತಮ್ಮಲ್ಲಿ ನನ್ನ ಕಕ್ಷಿದಾರರ ಪರವಾಗಿ ಕೋರುತ್ತೇನೆ ಎಂದು ಉಲ್ಲೇಖಿಸಲಾಗಿದೆ.

ಪ್ರಜ್ವಲ್‌ ವಕೀಲರು ಏನನ್ನುತ್ತಾರೆ ?
ಪ್ರಜ್ವಲ್‌ ರೇವಣ್ಣ ಪರ ವಕೀಲ ಅರುಣ್‌ ಜಿ. ಮಾತನಾಡಿ, ನಮ್ಮ ಕಕ್ಷಿದಾರರ ಮನವಿ ಮೇಲೆ ಎಸ್‌ಐಟಿ ಟೀಂಗೆ ಮನವಿ ಮಾಡಲಾಗಿದೆ. ಅವರ ಮನೆಗೆ ಸಿಆರ್‌ಪಿಸಿ 41ರ ಅಡಿ ನೊಟೀಸ್‌ ನೀಡಲಾಗಿತ್ತು. ವಿಚಾರಣೆಗೆ ಹಾಜರಾಗಲು 7 ದಿನಗಳ ಕಾಲ ಅವಕಾಶ ಕೋರಿದ್ದೇವೆ. ವಿಚಾರಣೆಗೆ ಹಾಜರಾಗುತ್ತೇನೆ ಅಂತಾ ಹೇಳಿ¨ªಾರೆ. ನಾವು ಯಾವುದೇ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ನಾವು ತನಿಖೆಗೆ ಸಹಕಾರ ಮಾಡಲು ಸಿದ್ಧರಿದ್ದೇವೆ. ಎಚ್‌.ಡಿ. ರೇವಣ್ಣ ಅವರೂ ಸಹ ಹೇಳಿದ್ದಾರೆ. ನಾವು ತನಿಖೆಗೆ ಏನೆಲ್ಲ ಸಹಕಾರ ಬೇಕು ಮಾಡುತ್ತೇವೆ. ನಾನು ಸದ್ಯಕ್ಕೆ ಪ್ರಜ್ವಲ್‌ ರೇವಣ್ಣ ಅವರ ಪರ ಮಾತ್ರ ಅರ್ಜಿ ಹಾಕಿದ್ದೇನೆ. ನಮಗೆ ಮನೆ ಬಾಗಿಲು ಬಳಿ ಸಿಕ್ಕಿರೋ ನೋಟಿಸ್‌ ಪ್ರಕಾರ 24 ಗಂಟೆಯಲ್ಲಿ ಬಂದಿಲ್ಲ ಅಂದರೆ ಕ್ರಮ ಅಂತಾ ಹೇಳಲಿಲ್ಲ. ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು. ಅದಕ್ಕೆ ಸಹಕಾರ ನೀಡುತ್ತೇವೆ. 7 ದಿನದಲ್ಲಿ ವಿಚಾರಣೆಗೆ ಹಾಜರಾಗುತ್ತಾರೆ. ವಿದೇಶಕ್ಕೆ ಹೋಗಿದ್ದು ಪೂರ್ವಯೋಜಿತ ಅನ್ನೋದು ಸುಳ್ಳು. ಇದೇ ಕೇಸ್‌ಗಾಗಿ ಅವರು ದೇಶ ಬಿಟ್ಟಿಲ್ಲ. ಕೇಸ್‌ ಬಗ್ಗೆ ಸಾಕಷ್ಟು ಚರ್ಚೆ ಆಗಿದೆ. ಕೇಸ್‌ ದಾಖಲಾಗುವ ಮುಂಚೆಯೇ ಹೋಗಿದ್ದಾರೆ. ನಾವು ಕೇಸ್‌ ಬಗ್ಗೆ ಮಾತನಾಡಿದ್ದೇವೆ ಎಂದು ತಿಳಿಸಿದರು.

Advertisement

ವಿಚಾರಣೆಗೆ ಗೈರಾದ ರೇವಣ್ಣ
ಮಾಜಿ ಸಚಿವ ರೇವಣ್ಣ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ನೀಡಲಾಗಿತ್ತು. ಮಂಗಳವಾರ ಅವರು ವಿಚಾರಣೆಗೆ ಹಾಜರಾಗಲಿಲ್ಲ. ಹಾಸನ ಲೋಕಸಭಾ ಕ್ಷೇತ್ರದ ಮತದಾನ ಮುಗಿಯುತ್ತಿದ್ದಂತೆಯೇ ಪ್ರಜ್ವಲ್‌ ರೇವಣ್ಣ ರಾತ್ರೋರಾತ್ರಿ ಜರ್ಮನಿಗೆ ಹಾರಿದ್ದರು. ಇದೀಗ ಮೇ 3ಕ್ಕೆ ಜರ್ಮನಿಯಿಂದ ಬೆಂಗಳೂರಿಗೆ ವಾಪಸ್‌ ಆಗಲಿದ್ದಾರೆ ಎಂಬ ಮಾಹಿತಿಗಳಿವೆ. ತಮ್ಮ ವಕೀಲರ ಜತೆಗೆ ಕಾನೂನು ವಿಚಾರಗಳನ್ನು ಚರ್ಚಿಸಿ ವಿಚಾರಣೆಗೆ ಹಾಜರಾಗುವ ಸಾಧ್ಯತೆಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next