Advertisement

Revanna Case; ಸಾಲ ತೀರಿಸೋಕೆ ಕೂಲಿಗೆ ಬಂದಿದ್ದೀನಿ ಅಂತ ಮಹಿಳೆ ಹೇಳಿದ್ಲು

12:55 AM May 06, 2024 | Vishnudas Patil |

ಹುಣಸೂರು: ತಾಲೂಕಿನ ಕಾಳೇನಹಳ್ಳಿಯಲ್ಲಿರುವ ಎಚ್‌.ಡಿ.ರೇವಣ್ಣರ ಮಾಜಿ ಆಪ್ತ ಕಾರ್ಯದರ್ಶಿ ರಾಜಗೋಪಾಲ್‌ ಫಾರಂ ಹೌಸ್‌ನಲ್ಲಿದ್ದ ಸಂತ್ರಸ್ತ ಮಹಿಳೆ ತಾನು ಸಂಘದ ಸಾಲ ತೀರಿಸಲು ಕೂಲಿಗೆ ಬಂದಿರುವುದಾಗಿ ಹೇಳಿಕೆ ನೀಡಿದ್ದಳು ಎಂದು ಅಲ್ಲಿನ ಕೂಲಿ ಕಾರ್ಮಿಕರು ತಿಳಿಸಿದ್ದಾರೆ.

Advertisement

ಸಹಕಾರ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ರಾಜಗೋಪಾಲ್‌ ನಿವೃತ್ತಿ ಬಳಿಕ ಕಾಳೇಹಳ್ಳಿ
ಯಲ್ಲಿ 25 ಎಕ್ರೆಯ ಫಾರಂ ಹೌಸ್‌ ನಿರ್ಮಿಸಿಕೊಂಡಿದ್ದರು. ತೋಟ ನೋಡಿಕೊಳ್ಳಲು ಎರಡು ಕುಟುಂಬ
ಗಳನ್ನೂ ಇರಿಸಿದ್ದರು. ಇದೇ ತೋಟದಲ್ಲಿ ಸಂತ್ರಸ್ತ ಮಹಿಳೆಯನ್ನು ಇರಿಸಲಾಗಿತ್ತು. ಪೊಲೀಸರು ಸಂತ್ರಸ್ತ ಮಹಿಳೆಯ ರಕ್ಷಣೆಗೂ ಮುನ್ನ ನಡೆದ ವಿದ್ಯ ಮಾನಗಳನ್ನು ಉದಯವಾಣಿ ಜತೆಗೆ ಕಾರ್ಮಿಕ
ರಾದ ಸ್ವಾಮಿ, ಗೋವಿಂದ ಎಳೆಎಳೆಯಾಗಿ ಬಿಚ್ಚಿಟ್ಟರು.

ಆ ಮಹಿಳೆಯನ್ನು ಹೊಸದಾಗಿ ಬಂದಿರೋ ಕೂಲಿ ಕೆಲಸದವಳು ಎಂದು ತಿಳಿದುಕೊಂಡಿದ್ದೆವು. ಅಪಹರಿಸಿ ಇಲ್ಲಿಟ್ಟಿದ್ದಾರೆ ಅಂತ ಗೊತ್ತಿರಲಿಲ್ಲ. ಆದರೆ ನಾವು ಸುಖಾಸುಮ್ಮನೆ ಪೊಲೀಸರಿಂದ ಏಟು ತಿನ್ನಬೇಕಾಯಿತು. ಪೊಲೀಸರು ಸಿಕ್ಕಸಿಕ್ಕ ಕಡೆ ಹಲ್ಲೆ ನಡೆಸಿದರು ಎಂದು ಕೂಲಿ ಕಾರ್ಮಿಕರು ಅಳಲು ತೋಡಿಕೊಂಡರು.
ಆ ಮಹಿಳೆ ನಾಲ್ಕೈದು ದಿನಗಳ ಹಿಂದೆ ತೋಟದ ಮನೆಗೆ ಬಂದಿದ್ದು, ಕೇಳಿದ್ದಕ್ಕೆ ಸಂಘದಲ್ಲಿ ಸಾಲ ಮಾಡಿದ್ದೆ, ತೀರಿಸಲು ಕೂಲಿ ಕೆಲಸಕ್ಕೆ ಬಂದಿದ್ದೇನೆ ಅಂತ ಹೇಳಿದ್ದಳು. ಶನಿವಾರ ಬೆಳಗ್ಗೆ ತೋಟದಲ್ಲಿ ನಾವು ಕೆಲಸ ಮಾಡುವಾಗ “ಆಯಮ್ಮ ಎಲ್ಲಿ’ ಎಂದು ಪೊಲೀಸರು ಕೇಳಿದರು. ನಮಗೆ ಗೊತ್ತಿಲ್ಲ ಅನ್ನುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಹಲ್ಲೆ ನಡೆಸಿದರು. ಪೊಲೀಸರನ್ನು ನೋಡುತ್ತಿದ್ದಂತೆ ಆ ಮಹಿಳೆ ಪಕ್ಕದ ತೋಟದ ಕಡೆ ಓಡಿ ಹೋದಳು. ಆಮೇಲೆ ನಮಗೆ ನೈಜ ವಿಚಾರ ಗೊತ್ತಾಯಿತು ಎಂದು ಹೇಳಿದರು. ರೇವಣ್ಣ ಕಡೆಯ ಹೇಮಂತ ಕುಮಾರ್‌ ಎಂಬವರು ಆಗಾಗ ಇಲ್ಲಿಗೆ ಬರುತ್ತಿದ್ದ. ಎಲ್ಲದಕ್ಕೂ ಹೇಮಂತ ಕುಮಾರ್‌ ಕಾರಣ ಎಂದು ಕಾರ್ಮಿಕರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next