Advertisement

ಅಭಿವೃದ್ಧಿ ಮಾಡದವರಿಗೆ ಮತ ಕೇಳುವ ಹಕ್ಕಿಲ್ಲ : ಸಚಿವ ರೇವಣ್ಣ

11:28 AM Apr 12, 2019 | keerthan |

ಸಕಲೇಶಪುರ: ಕೋಮುವಾದಿ ಶಕ್ತಿಗಳನ್ನು ಮಟ್ಟ ಹಾಕಲು ಜೆಡಿಎಸ್‌ಗೆ ಮತ ನೀಡಬೇಕೆಂದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಡಿ ರೇವಣ್ಣ ಹೇಳಿದರು. ಗುರುವಾರ ಪಟ್ಟಣದಲ್ಲಿ ರೋಡ್‌ ಶೋ ನಡೆಸಿದ ನಂತರ ಹಳೇ ಬಸ್‌ ನಿಲ್ದಾಣ ಸಮೀಪ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯ ಸಮಗ್ರ ಅಭಿ ವೃದ್ಧಿಗೆ ಕಳೆದ ಅರ್ಧ ದಶಕದಿಂದ ದೇವೇ ಗೌಡರು ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಶಕ್ತಿ ತುಂಬಲು ಹಾಸನದಿಂದ ಪ್ರಜ್ವಲ್‌ ರೇವಣ್ಣ ಆಯ್ಕೆಯಾಗಲೇ ಬೇಕಿದೆ ಎಂದರು.

Advertisement

ರೈತರ ಸಾಲ ಮನ್ನಾ: ರಾಜ್ಯ ಸಮ್ಮಿಶ್ರ ಸರ್ಕಾರ 47 ಸಾವಿ ಕೋಟಿ ಸಾಲ ಮನ್ನಾಮಾಡಿದೆ ಇದರ ಲಾಭವನ್ನು ಜಿಲ್ಲೆಯ 45 ಸಾವಿರ ಕುಟುಂಬ ಪಡೆದಿದೆ. ಆದರೆ ಕಳೆದ ಸರ್ಕಾರದಲ್ಲಿ ನಾಲ್ಕು ವರ್ಷ ಮಂತ್ರಿಯಾಗಿದ್ದ ಎ.ಮಂಜು ಜಿಲ್ಲೆಗೆ ನೀಡಿರುವ ಕೊಡುಗೆ ಏನು? ಕೇವಲ ಭಾವನಾತ್ಮಕವಾಗಿ ಮಾತನಾಡಿ ಮತ ಸೆಳೆಯುವ ನಾಟಕವಾಡುತ್ತಿರುವ ಬಿಜೆಪಿಯನ್ನು ನಂಬಬೇಡಿ. ರೆಫೇಲ್‌ನಂತಹ ದೊಡ್ಡ ಹಗರಣದಲ್ಲಿ ಪಾಲು ದಾರರಾಗಿರುವ ಮೋದಿ ಮುಂದೆ ಪ್ರಧಾನಿಯಾಗುವುದು ಅಸಾಧ್ಯ ಎಂದರು.

ಅಭಿವೃದ್ಧಿ ಪರ್ವ: ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ವಿವಿಧ ಅನುದಾನದ ಮೂಲಕ 600 ಕೋಟಿ
ರೂ. ಅನುದಾನ ನೀಡಲಾಗಿದೆ. ಮಲೆನಾಡು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಜೆಡಿಎಸ್‌ ಆಡಳಿತದ ಅವಧಿಯಲ್ಲಿ ನಡೆದಿರುವುದು. ಇದನ್ನೆಲ್ಲ ಗಮನದಲ್ಲಿಟ್ಟು ಈ ತಿಂಗಳ 18ರಂದು ನಡೆಯಲಿರುವ ಚುನಾವಣೆ ಯಲ್ಲಿ ಜೆಡಿಎಸ್‌ಗೆ ಮತ ನೀಡಬೇಕು ಎಂದು ಮನವಿ ಮಾಡಿದರು.

ಅತಿದೊಡ್ಡ ಬಸ್‌ ನಿಲ್ದಾಣ: ಶಾಸಕ ಎಚ್‌.ಕೆ. ಕುಮಾರ ಸ್ವಾಮಿಮಾತನಾಡಿ,
ಏಷ್ಯದಲ್ಲೇ ದೊಡ್ಡದಾದ ಬಸ್‌ ನಿಲ್ದಾಣವನ್ನು ಹಾಸನದಲ್ಲಿ ನಿರ್ಮಿಸಿದ ಕೀರ್ತಿ ಎಚ್‌.ಡಿ. ರೇವಣ್ಣನವರಿಗೆ ಸಲ್ಲುತ್ತದೆ. ಅಭಿವೃದ್ಧಿಯ ಹರಿಕಾರ ಎಂದು ಕರೆಸಿಕೊಳ್ಳುವ ರೇವಣ್ಣ ನವರು ಕೆಲಸವನ್ನು ಮುಂದುವರಿಸಬೇಕು. ಹಾಗೂ ಸಮ್ಮಿಶ್ರ ಸರ್ಕಾರಕ್ಕೆ ಬಲ ತುಂಬಬೇಕಾದರೆ ಜಿಲ್ಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿಗೆ ಮತ ನೀಡ ಬೇಕು ಎಂದರು. ಕಾಂಗ್ರೆಸ್‌ ಮುಖಂಡ ಸಿದ್ದಯ್ಯ ಮಾತನಾಡಿ, ಕಾಂಗ್ರೆಸ್‌ ಸ್ಪರ್ಧಿಸಿರುವಕಡೆ ಜೆಡಿಎಸ್‌ ಕಾರ್ಯ ಕರ್ತರು ಅಭ್ಯರ್ಥಿ ಗೆಲುವಿಗಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಇದೆ ರೀತಿ ಜಿಲ್ಲೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೆ ಕಾಂಗ್ರೆಸ್‌ ಕಾರ್ಯಕರ್ತರು ನಿಸ್ವಾರ್ಥವಾಗಿ ಕೆಲಸ ಮಾಡಬೇಕು ಎಂದರು.

ಈ ವೇಳೆ ಹೆಬ್ಬಸಾಲೆ ಗ್ರಾಪಂ ಸದಸ್ಯ ರಘು ನಂದನ್‌ ಜೆಡಿಎಸ್‌ಗೆ ಸೇರ್ಪಡೆಯಾದರು. ಪಟ್ಟಣದ ಸಕಲೇಶ್ವರ ಸ್ವಾಮಿ ದೇವಸ್ಥಾನದಿಂದ ಹಳೆ ಬಸ್‌ ನಿಲ್ದಾಣದವರೆಗೂ ಜೆಡಿಎಸ್‌ , ಕಾಂಗ್ರೆಸ್‌ ಕಾರ್ಯಕರ್ತರು ಜಂಟಿ ಮೆರವಣಿಗೆ ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್‌ ರಾಜ್ಯ ಉಪಾಧ್ಯಕ್ಷ ಬಾಳ್ಳುಜಗನ್ನಾಥ್‌, ತಾಲೂಕು ಕಾಂಗ್ರೆಸ್‌ ಅಧ್ಯಕ್ಷ ಭಾಸ್ಕರ್‌, ತಾಲೂಕು ಜೆಡಿಎಸ್‌ ಅಧ್ಯಕ್ಷ ಕೆ.ಎಲ್‌ ಸೋಮಶೇಖರ್‌, ಜೆಡಿಎಸ್‌ ಪಕ್ಷದ ಮುಖಂಡರಾದ ಸಚಿನ್‌ ಪ್ರಸಾದ್‌, ಸ.ಭಾ ಭಾಸ್ಕರ್‌ ಮುಂತಾದವರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next