Advertisement
ತುರ್ತು ಕ್ರಮ ಕೈಗೊಳ್ಳಿಒಂದೂವರೆ ತಿಂಗಳ ಹಿಂದೆ ಹೇಳಿದ್ದರೂ ಕುಂದಾಪುರ ಭಾಗದಲ್ಲಿ ಮರಳು ಟೆಂಡರ್‌ಗೆ ಇನ್ನೂ ಕ್ರಮಕೈಗೊಂಡಿಲ್ಲ. ಮರಳುಗಾರಿಕೆ ಎಂದರೆ ಬಳ್ಳಾರಿ ಗಣಿಯಂತಾಗಿದೆ ಎಂಬ ಟೀಕೆ ಕೇಳುತ್ತಿದೆ. ತುರ್ತಾಗಿ ಕಿರು ಅವಧಿಯ ಟೆಂಡರ್ ಪ್ರಕ್ರಿಯೆ ನಡೆಸಿ ಬಾಕಿ ಉಳಿದ ಮರಳು ದಿಬ್ಬಗಳನ್ನು ಏಲಂ ಮಾಡಿ ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ಗಣಿ ಇಲಾಖೆ ಅಧಿಕಾರಿಗಳಿಗೆ ಹೇಳಿದರು.
ಬಳ್ಕೂರು, ಅಂಪಾರು, ಹಳ್ನಾಡು, ಶಂಕರ ನಾರಾಯಣ, ಮೊಳಹಳ್ಳಿ ಕಡೆಗಳ ವಾರಾಹಿ ಹೊಳೆಯಲ್ಲಿ 8 ಕಡೆ ಮರಳು ತೆಗೆಯಲು ಟೆಂಡರ್ ಪ್ರಕ್ರಿಯೆ ಬಾಕಿಯಿದೆ ಎಂದು ಇಲಾಖಾಧಿಕಾರಿ ಹೇಳಿದರು. ಹೂಳೆತ್ತಿ ಹರಾಜು ಹಾಕಿ
ಬೈಂದೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಲ್ಲ ಕಿಂಡಿ ಅಣೆಕಟ್ಟುಗಳ ಹೂಳೆತ್ತಿಸಬೇಕು. ಈ ಪೈಕಿ ಲಭ್ಯವಿರುವ ಮರಳನ್ನು ಗ್ರಾ.ಪಂ. ಮಟ್ಟದಲ್ಲಿ ಏಲಂ ಮಾಡಿ ಕನಿಷ್ಟ ದರದಲ್ಲಿ ಬಡವರಿಗೆ ನೀಡಬೇಕು. ಅಭಿವೃದ್ಧಿ ಕಾಮಗಾರಿ, ಮನೆ ನಿರ್ಮಾಣಕ್ಕೆ ಮರಳಿನ ಕೊರತೆಯಾಗಬಾರದು ಎಂದು ಬಿ.ಎಂ. ಸುಕುಮಾರ ಶೆಟ್ಟಿ ಹೇಳಿದರು.
Related Articles
Advertisement
ಹೂಳೆತ್ತಲು 3 ವರ್ಗೀಕರಣ ಮಾಡಿ ಮರಳು ಸಿಗುವಲ್ಲಿ ಮೊದಲು ತೆಗೆದು ಏಲಂ, ಅನಂತರ ಇತರೆಡೆ ಹೂಳೆತ್ತಲಾಗುವುದು ಎಂದರು. ಗಣಿ ಇಲಾಖೆ ಅಧಿಕಾರಿ ರಾಮ್ ಜಿ. ನಾಯ್ಕ, 1 ವಾರದೊಳಗೆ ಆದ್ಯತೆಯ ಪಟ್ಟಿ ನೀಡಿ. ಜಂಟಿ ಸರ್ವೆ ನಡೆಸಲಾಗುವುದು ಎಂದರು.
ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಎಸ್.ಕುಂದರ್, ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಬೈಂದೂರು ತಹಶೀಲ್ದಾರ್ ಬಸಪ್ಪ ಪೂಜಾರ್, ಇಒ ಭಾರತಿ, ಕುಂದಾಪುರ ಇಒ ಡಾ| ನಾಗಭೂಷಣ್ ಉಡುಪ ಉಪಸ್ಥಿತರಿದ್ದರು.
ಅಭಿವೃದ್ಧಿ ಕಾರ್ಯಗಳಿಗೆ 370 ಕೋ.ರೂ. ಮಂಜೂರು
ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಈ ವರ್ಷ 300 ಕೋ.ರೂ., ಕಳೆದ ವರ್ಷ 70 ಕೋ.ರೂ. ಮಂಜೂರಾಗಿದ್ದು ಕಾಮಗಾರಿಗೆ ಮರಳಿನ ಕೊರತೆಯಿದೆ. ಇನ್ನಷ್ಟು ಕಡೆ ಕಾಲುಸಂಕ, ಶ್ಮಶಾನ, ರಿಕ್ಷಾ ತಂಗುದಾಣ ಮಾಡಲು ಅನುದಾನ ನೀಡಲಾಗುವುದು. ಸೌಕೂರು ಏತ ನೀರಾವರಿ ಯೋಜನೆಗೆ 74 ಕೋ.ರೂ.ಗೆ ಟೆಂಡರ್ ಆಗಿದೆ.
-ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು