Advertisement
ಬಹಿಷ್ಕಾರಕ್ಕೆ ಮಣಿದು ಕ್ರಮ ಕೈಗೊಂಡಿತೇ ಪೆಪ್ಸಿಕೊ!ಈ ಸಂಸ್ಥೆ 30 ವರ್ಷಗಳಿಂದ ಭಾರತದಲ್ಲಿ ವ್ಯಾಪಾರ ನಡೆಸುತ್ತ್ತಾ ಬಂದಿದೆ. ಆಲೂಗಡ್ಡೆ ಬೆಳೆಯ ವಿಷಯದಲ್ಲಿ ಭಾರತದ ರೈತರನ್ನು ಎದುರು ಹಾಕಿಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 9 ರೈತರ ಮೇಲೆ ತಲಾ 1 ಕೋಟಿ ರೂ.ಗಳ ಪರಿಹಾರ ಕೋರಿದ್ದ ಸಂಸ್ಥೆ ಈಗ ರೈತರ ಆಗ್ರಹಕ್ಕೆ ಮಣಿದಿದ್ದು, ಪ್ರಕರಣವನ್ನು ವಾಪಸ್ ಪಡೆದಿದೆ. ಮೂಲತಃ ಅಮೆರಿಕದ ಸಂಸ್ಥೆಯಾಗಿದ್ದರೂ ‘ಪೆಪ್ಸಿಕೊ ಇಂಡಿಯಾ’ವನ್ನು ದೇಶದಲ್ಲಿ ಸ್ಥಾಪಿಸಿತ್ತು.
ಪೆಪ್ಸಿಕೊ ಇಲ್ಲಿನ ರೈತರ ಮೇಲೆ ಪ್ರಕರಣ ದಾಖಲಿಸಿದ್ದಕ್ಕಾಗಿ ಸಂಸ್ಥೆಯ ಉತ್ಪನ್ನಗಳನ್ನು ಬಹಿಷ್ಕರಿಸಲು ನಿರ್ಣಯವಾಗಿತ್ತು. ಇದಕ್ಕೆ ಪೂರಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪೆಪ್ಸಿಕೊ ಉತ್ಪನ್ನವನ್ನು ಯಾರೂ ಖರೀದಿಸದಂತೆ ಪ್ರಚಾರಗಳು ಏರ್ಪಟ್ಟವು. ಟ್ವಿಟರ್‌ನಲ್ಲಿ #boycottPepsi ಎಂಬ ಹ್ಯಾಶ್‌ಟ್ಯಾಗ್ ಮೂಲಕ ಭಾರೀ ಆಕ್ರೋಶ ಮೂಡಿಬಂದಿತ್ತು. ಇದರಿಂದ ಎಚ್ಚೆತ್ತುಕೊಂಡ ಸಂಸ್ಥೆ ಪ್ರಕರಣವನ್ನು ಕೊನೆಗಾಣಿಸಲು ಯತ್ನಿಸಿತು.
Related Articles
Advertisement
ಪೆಪ್ಸಿಕೊ ತನ್ನ ‘ಲೇಸ್’ ಬ್ರ್ಯಾಂಡ್‌ನ ಚಿಪ್ಸ್‌ಗೆ ಎಫ್ಎಲ್ 2027 ಎಂಬ ವಿಶೇಷ ತಳಿಯ ಆಲೂಗಡ್ಡೆಯನ್ನು ಬಳಸುತ್ತಿದೆ. ಇದು ಎಫ್ಎಲ್ 1867 ಮತ್ತು ವಿಸ್‌ಚಿಪ್ (Wischip) ತಳಿಗಳ ಹೈಬ್ರಿಡ್ ತಳಿ. ಈ ವಿಶೇಷ ಆಲೂ ತಳಿಯನ್ನು ಸಸ್ಯ ಮಾದರಿ ಮತ್ತು ರೈತರ ಹಕ್ಕು ರಕ್ಷಣೆ ಕಾಯ್ದೆ (PPV FR Act) ಅಡಿ 2001ರಲ್ಲಿ ನೋಂದಾಯಿಸಿದೆ. 2009ರ ಬಳಿಕ ಎಫ್ಸಿ 5 ಆಲೂಗಡ್ಡೆಯ ಹಕ್ಕು ಪಡೆದಿದ್ದೇನೆ ಎಂಬುದು ಸಂಸ್ಥೆಯ ವಾದವಾಗಿತ್ತು. ಭಾರತದ ಶೇ. 50ರಷ್ಟು ಆಲೂಗಡ್ಡೆಯನ್ನು ಪೆಪ್ಸಿಕೊ ಪಡೆಯುತ್ತಿದೆ.
•••ಉದಯವಾಣಿ ಸ್ಪೆಷಲ್ ಡೆಸ್ಕ್
ಇಂಟರ್ನೆಟ್ ಚಿತ್ರ