Advertisement

ರಾಮಾಯಣದ ರಭಸಕ್ಕೆ ಕೊಚ್ಚಿಹೋದ ಅಮೆಝಾನ್, ನೆಟ್ ಫ್ಲಿಕ್ಸ್ ; ನೆಟ್ಟಿಜನ್ಸ್ ಭರ್ಜರಿ ಟಾಂಗ್!

09:05 AM Apr 03, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್ ವಿರುದ್ಧ ಹೋರಾಡಲು ದೇಶಕ್ಕೆ ದೇಶವೇ ಸಂಪೂರ್ಣ ಲಾಕ್ ಡೌನ್ ಆಗಿರುವ ಈ ಸ್ಥಿತಿಯಲ್ಲಿ ಮನೆಯಲ್ಲೇ ಕುಳಿತಿರುವ ಭಾರತೀಯರಿಗೆ ಅವರ ಹಳೆಯ ದಿನಗಳ ನೆನಪುಗಳನ್ನು ಮರುಕಳಿಸುವ ಉದ್ದೇಶದಿಂದ ದೂರದರ್ಶನ ಹಳೆಯ ಕ್ಲಾಸಿಕ್ ಧಾರಾವಾಹಿಗಳ ಮರುಪ್ರಸಾರವನ್ನು ಈಗಾಗಲೇ ಪ್ರಾರಂಭಿಸಿದೆ.

Advertisement

ಭಾರತದ ಮಹಾಪುರಾಣಗಳಾಗಿರುವ ರಾಮಾಯಣ ಮತ್ತು ಮಹಾಭಾರತಗಳನ್ನು ಧಾರಾವಾಹಿ ರೂಪದಲ್ಲಿ ಜನರ ಮುಂದೆ 90ರ ದಶಕದಲ್ಲಿ ಪ್ರಸ್ತುತಪಡಿಸಲಾಗಿತ್ತು. ಮತ್ತು ಆ ಕಾಲಕ್ಕೆ ದೂರದರ್ಶನಕ್ಕೊಂದು ಹೊಸ ಇಮೇಜ್ ತಂದುಕೊಟ್ಟ ಧಾರಾವಾಹಿಗಳಾಗಿ ರಾಮಾಯಣ, ಮಹಾಭಾರತ ದಾಖಲೆಯನ್ನೇ ಸೃಷ್ಟಿಸಿದ್ದವು. ಇದರೊಂದಿಗೆ, ಶಕ್ತಿಮಾನ್, ಫ್ಲಾಪ್ ಶೋ, ಮಾಲ್ಗುಡಿ ಡೇಸ್, ಶ್ರೀಮಾನ್ ಶ್ರೀಮತಿ, ಚಾಣಕ್ಯ ಸೇರಿದಂತೆ ಇನ್ನಷ್ಟು ಕ್ಲಾಸಿಕ್ ಧಾರಾವಾಹಿಗಳು ದೂರದರ್ಶನದ ಟ್ರೇಡ್ ಮಾರ್ಕ್ ಗಳಾಗಿ ಗುರುತಿಸಿಕೊಂಡಿದ್ದವು.

ಇದೀಗ ಲಾಕ್ ಡೌನ್ ಸಂದರ್ಭದಲ್ಲಿ ಹಲವು ವೀಕ್ಷಕರ ಒತ್ತಾಯದ ಮೇರೆಗೆ ಈ ಕ್ಲಾಸಿಕ್ ಧಾರಾವಾಹಿಗಳಲ್ಲಿ ಕೆಲವನ್ನು ಮರು ಪ್ರಸಾರ ಮಾಡಲು ದೂರದರ್ಶನ ನಿರ್ಧರಿಸಿದೆ. ಮಾತ್ರವಲ್ಲದೆ ರಾಮಾಯಣ (ಡಿಡಿ ನ್ಯಾಷನಲ್), ಮಹಾಭಾರತ (ಡಿಡಿ ಭಾರತಿ) ಮತ್ತು ಶಕ್ತಿಮಾನ್ (ಡಿಡಿ ನ್ಯಾಷನಲ್) ಧಾರಾವಾಹಿಗಳು ಈಗಾಗಲೇ ತಮ್ಮ ಪ್ರಸಾರವನ್ನು ಪ್ರಾರಂಭಿಸಿವೆ.

ಅದರಲ್ಲೂ ರಾಮಾಯಣ ಧಾರಾವಾಹಿಯಂತೂ ಮರುಪ್ರಸಾರದ ಮೊದಲ ದಿನವೇ ಸುಮಾರು 50 ಕೋಟಿ ವೀಕ್ಷಕರನ್ನು ತಲುಪಿದೆ ಎಂಬ ಲೆಕ್ಕಾಚಾರ ಇದೀಗ ಹೊರಬಿದ್ದಿದೆ. ಈ ಕ್ಲಾಸಿಕ್ ಗಳನ್ನು ಯುವ ಜನಾಂಗವೂ ಆಸ್ವಾದಿಸುತ್ತಿದ್ದಾರೆ ಮತ್ತು ವಿಶಿಷ್ಟ ಮೀಮ್ ಗಳನ್ನು ಸಿದ್ಧಪಡಿಸಿ ಅವುಗಳನ್ನ ಜಾಲತಾಣಗಳಲ್ಲಿ ಹರಿಯಬಿಡುವ ಮೂಲಕ ನೆಟ್ ಫ್ಲಿಕ್ಸ್, ಅಮೆಝಾನ್, ಹಾಟ್ ಸ್ಟಾರ್ ಸೇರಿದಂತೆ ಇತರ ಆನ್ ಲೈನ್ ಸ್ಕ್ರೀನಿಂಗ್ ಪೋರ್ಟಲ್ ಗಳಿಗೆ ದೂರದರ್ಶನ ಟಾಂಗ್ ನೀಡಿದೆ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಅಂತೂ ಕೋವಿಡ್ 19 ವೈರಸ್ ತಂದೊಡ್ಡಿರುವ ಈ ಲಾಕ್ ಡೌನ್ ಹಳೆಯ ಕ್ಲಾಸಿಕ್ ಟಿವಿ ಶೋಗಳ ಪಾಲಿಗೆ ಮತ್ತೆ ಬಿಡುಗಡೆ ಭಾಗ್ಯ ನೀಡಿರುವುದು ಮಾತ್ರ ಸುಳ್ಳಲ್ಲ.

ಇದಕ್ಕೆ ಸಂಬಂಧಿಸಿ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಮೀಮ್ ಗಳು ಹೀಗಿವೆ…

Advertisement

Advertisement

Udayavani is now on Telegram. Click here to join our channel and stay updated with the latest news.

Next