Advertisement

ಇಂಗ್ಲೀಷ್ ಮಾಧ್ಯಮ ಸರ್ಕಾರಿ ಶಾಲೆಗಳನ್ನು ಹಿಂಪಡೆಯಿರಿ: ಸಾಹಿತಿಗಳ ಮನವಿ

10:09 AM Sep 08, 2019 | sudhir |

ಬೆಂಗಳೂರು : ಕನ್ನಡಕ್ಕೆ ಸಂಬಂಧಿಸಿದ ಬೇಡಿಕೆ ಹಾಗೂ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ನಡೆಸುತ್ತಿರುವ ಕುರಿತಾಗಿ ಕೆಲವೊಂದು ಬದಲಾವಣೆಗಳನ್ನು ತರಿಸುವ ದೃಷ್ಟಿಯಿಂದ ಹಿರಿಯ ಸಾಹಿತಿಗಳು ಹಾಗೂ ಚಿಂತಕರು ಮಾನ್ಯ ಮುಖ್ಯಮಂತ್ರಿಗಳನ್ನು ಬೇಟಿಮಾಡಿ ಚರ್ಚೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿ ದೊಡ್ಡರಂಗೇಗೌಡ್ರು ಹಿಂದಿನ ಸರ್ಕಾರ ಜಾರಿ‌ ಮಾಡಿದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾದ್ಯಮ ಶಿಕ್ಷಣ ವ್ಯವಸ್ಥೆಯನ್ನು ಹಿಂಪಡೆಯಬೇಕು. ಈ ಇಂಗ್ಲೀಷ್ ಮಾದ್ಯಮದಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕೂಡಲೇ ಹಿಂದಿನ ಸರ್ಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದು ಕನ್ನಡ ಉಳಿಸಬೇಕು. ನಾವು ಯಾರು ಇಂಗ್ಲಿಷ್ ಭಾಷೆಯ ವಿರೋಧಿಗಳಲ್ಲ ಆದರೆ ಒಂದು ಶಿಕ್ಷಣ ಮಾದ್ಯಮವಾಗಿ ಕಲಿಯಲು ನಮ್ಮ ವಿರೋಧವಿದೆ ಅಂತ ಹೇಳಿದರು.

ಹಿರಿಯ ಸಾಹಿತಿ ಹಾಗು ಚಿಂತಕರಾದ ಚಿದಾನಂದ ಮೂರ್ತಿ ಅವರು ಮಾತನಾಡಿ ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಸರ್ಕಾರಿ ಶಾಲೆಗಳಿಗೆ ಹೋಗುವವರ ವಿದ್ಯಾರ್ಥಿಗಳ ಸಂಖ್ಯೆ ತುಂಬ ಕಡಿಮೆ ಇದೆ ಹಾಗಾಗಿ ಖಾಸಗಿ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ವ್ಯವಸ್ಥೆ ಮಾಡುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.

ಇನ್ನು ಗೋ ರು ಚನ್ನಬಸಪ್ಪ ಅವರು ಮಾತನಾಡಿ ಶಿಕ್ಷಣ ವ್ಯವಸಾಯಯಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡದೆ ಒಂದನೇ ತರಗತಿಯಿಂದ 7 ನೇ ತರಗತಿವರೆಗೆ ಯಾವುದೇ ರೀತಿಯ ಭಾಷೆ ಬದಲಾವಣೆ ಮಾಡದೆ ಮುಂದೆ ಯಾವುದೇ ರೀತಿಯ ಹೊಸ ಬದಲಾವಣೆ ಅಗದಂತೆ ಕಾನೂನು ರಚನೆ‌ ಮಾಡಬೇಕು ಎಂದು ಮನವಿ ಮಾಡಿದರು.

ಅಷ್ಟೇ ಅಲ್ಲದೆ ಕನ್ನಡ ಮಾಧ್ಯಮದಲ್ಲಿ ಓದಿದರೆ ನೌಕರಿ ಸಿಗಿವುದಿಲ್ಲ ಅನ್ನೋ ಅಭಿಪ್ರಾಯ ಪೋಷಕರಲ್ಲಿ ಇದೆ . ಹಾಗಾಗಿ ಕನ್ನಡ ಮಾದ್ಯಮದಲ್ಲಿ ಓದಿದರೆ ಮಾತ್ರ ಸರ್ಕಾರಿ ನೌಕರಿ ಸಿಗುತ್ತೆ ಅನ್ನೋ ರೀತಿಯಲ್ಲಿ ಪೋಷಕರಿಗೆ ಅಭಿಪ್ರಾಯ ಮೂಡಿಸಬೇಕು ಅಷ್ಟೇ ಅಲ್ಲದೆ ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಉತ್ತಮಪಡಿಸಬೇಕು ಕನ್ನಡ ಶಾಲೆಗಳಲ್ಲಿ‌ ಒಳ್ಳೆಯ ವಾತಾವರಣ ಕಲ್ಪಸಿದರೆ ಪೋಷಕರು ಕನ್ನಡ ಶಾಲೆಗಳತ್ತ ಬರುತ್ತಾರೆ ಅಂತ ಸಾಹಿತಿ ದೊಡ್ಡರಂಗೆಗೌಡರು ಮಾನ್ಯ ‌ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡಿದರು.

Advertisement

ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಚಿದಾನಂದ ಮೂರ್ತಿ ದೊಡ್ಡ ರಂಗೇಗೌಡ ಗೋ.ರು ಚನ್ನಬಸಪ್ಪ, ಎಂಎಲ್ ಸಿ ಅಶ್ವಥನಾರಾಯಣ್ ಸೇರಿದಂತೆ ಹಲವು ಕನ್ನಡ ಹೋರಾಟಗಾರರು ಹಾಗೂ ಸಾಹಿತಿಗಳು ಸಭೆಯಲ್ಲಿ ಭಾಗವಹಿಸಿದ್ದರು .

Advertisement

Udayavani is now on Telegram. Click here to join our channel and stay updated with the latest news.

Next