Advertisement

ಚುನಾವಣೆ ಕಣದಿಂದ ನಿವೃತ್ತಿಗೆ ಮಾನ್ಯತೆ ಇಲ್ಲ

06:00 AM Nov 03, 2018 | Team Udayavani |

ಬೆಂಗಳೂರು: ನಾಮಪತ್ರ ವಾಪಸ್‌ ಪಡೆದುಕೊಳ್ಳುವ ಅಧಿಕೃತ ದಿನಾಂಕ ಅಥವಾ ಅವಧಿ ಮುಗಿದ ನಂತರ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಚುನಾವಣಾ ಕಣದಿಂದ ನಿವೃತ್ತಿ ಘೋಷಿಸುವುದಕ್ಕೆ ಕಾನೂನಿನ ಯಾವುದೇ ಮಾನ್ಯತೆ ಹಾಗೂ ಪರಿಗಣನೆ ಇರುವುದಿಲ್ಲ ಎಂದು ಕಾನೂನು ತಜ್ಞರು ಹೇಳಿದ್ದಾರೆ. ರಾಮನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಲ್‌. ಚಂದ್ರಶೇಖರ್‌ ಚುನಾವಣಾ ಕಣದಿಂದ ನಿವೃತ್ತಿ ಘೋಷಿಸಿರುವ ಹಿನ್ನೆಲೆಯಲ್ಲಿ ಕಾನೂನು ತಜ್ಞರು ಈ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Advertisement

ಈ ಕುರಿತು ಕಾನೂನು ಅಭಿಪ್ರಾಯ ಹೇಳಿರುವ ಮಾಜಿ ಅಡ್ವೋಕೇಟ್‌ ಜನರಲ್‌ ಬಿ.ವಿ. ಆಚಾರ್ಯ, ಚುನಾವಣಾ ಕಣದಿಂದ ನಿವೃತ್ತಿಯನ್ನು ಚುನಾವಣಾ ಆಯೋಗ ಅಂಗೀಕರಿಸುವುದಿಲ್ಲ. ಏಕೆಂದರೆ, ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನಾಂಕ ಮುಗಿದ ಬಳಿಕ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಿಸಿದ ಮೇಲೆ, ನಾಮಪತ್ರ ವಾಪಸ್‌ ಪಡೆದುಕೊಳ್ಳಲು
ಅವಕಾಶವಿರುವುದಿಲ್ಲ. ಆದರೆ, ಸ್ಪರ್ಧಿಸಲು ನನಗೆ ಇಷ್ಟವಿಲ್ಲ, ನನಗೆ ಮತ ಹಾಕಬೇಡಿ ಎಂದು ಸಾರ್ವಜನಿಕರಿಗೆ ಮನವಿ ಮಾಡಿಕೊಳ್ಳಬಹುದಷ್ಟೇ ಎಂದು ಹೇಳಿದ್ದಾರೆ. ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡ ಬಳಿಕ ಅವರ ಹೆಸರು ಮತ್ತು ಅವರು  ಪ್ರತಿನಿಧಿಸುವ ಪಕ್ಷದ ಚಿಹ್ನೆಯನ್ನು ಇವಿಎಂನಲ್ಲಿ ಅಳವಡಿಸಲಾಗುತ್ತದೆ. ಹಾಗಾಗಿ, ರಾಮನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಣದಿಂದ ನಿವೃತ್ತಿ ಘೋಷಿಸಿರುವುದಕ್ಕೆ ಕಾನೂನಿನಲ್ಲಿ ಯಾವುದೇ ಮಹತ್ವವಿಲ್ಲ. ಇವಿಎಂನಲ್ಲಿ ಅವರ ಹೆಸರು ಇರುತ್ತದೆ. ಜನ ಅವರಿಗೆ ಮತ ಸಹ ಹಾಕಬಹುದು. ಆ ಮತಗಳನ್ನು ಎಣಿಕೆ ಮಾಡಲಾಗುತ್ತದೆ. ಫ‌ಲಿತಾಂಶ ಅವರ ವಿರುದಟಛಿ ಬಂದಲ್ಲಿ, ಠೇವಣಿ ಕಳೆದುಕೊಂಡಿದ್ದಾರೆ ಎಂದು ಚುನಾವಣಾ ಆಯೋಗ ಘೋಷಿಸುತ್ತದೆ ಎಂದು ಆಚಾರ್ಯ ತಿಳಿಸಿದ್ದಾರೆ. ಅದೇ ರೀತಿ ಮತ್ತೂಬ್ಬ ಮಾಜಿ ಅಡ್ವೋಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ಚುನಾವಣಾ ಕಣದಿಂದ ನಿವೃತ್ತಿಗೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ.

ನಾಮಪತ್ರ ವಾಪಸ್‌ ಪಡೆಯುವ ಕೊನೆಯ ದಿನಾಂಕ ಮುಗಿದ ನಂತರ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಅವರು 
ಮುಂದುವರಿಯುತ್ತಾರೆ. ಇವಿಎಂನಲ್ಲಿ ಅವರ ಹೆಸರು ಇರುತ್ತದೆ. ಜನ ಅವರಿಗೆ ಓಟು ಹಾಕುತ್ತಾರೆ. ಒಂದೊಮ್ಮೆ ಗೆದ್ದರೆ, ಅವರೇ ಬಿಜೆಪಿ ಶಾಸಕರಾಗುತ್ತಾರೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next