Advertisement

ಕಾಪು: ನಿವೃತ್ತ ಯೋಧ ಅಬ್ದುರ್ರ್ ಝಾಕ್ ಶಾಬಾನ್ ನಿಧನ

12:53 PM Oct 12, 2022 | Team Udayavani |

ಕಾಪು: ಯೋಧರಾಗಿ ಸೇವೆ ಸಲ್ಲಿಸಿದ ಮೂಳೂರು ನಿವಾಸಿ ಹಾಜಿ ಅಬ್ದುರ್ರ್ ಝಾಕ್ ಶಾಬಾನ್ (85) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು.

Advertisement

18ನೇ ವಯಸ್ಸಿನಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡ ಇವರು ಎಡು ವರ್ಷ ಬೆಂಗಳೂರಿನ ಏರ್‌ಫೋರ್ಸ್ ಟೆಕ್ನಿಕಲ್ ಕಾಲೇಜಿನಲ್ಲಿ ಕಮುನಿಕೇಶನ್ ಎಂಜಿನಿಯರಿಂಗ್ ಡಿಪ್ಲೋಮಾ ಪಡೆದು ಬಳಿಕ ಕಮುನಿಕೇಶನ್ ಆಫಿಸರ್ ಆಗಿ ಕಾರ್ಯನಿರ್ವಹಿಸಿದ್ದರು. ವಾಯುಸೇನಾ ಕಾಲಾವಧಿಯಲ್ಲಿ ದೆಹಲಿ, ಆಗ್ರ, ಲಕ್ನೋ ಹಲ್ವಾರ, ಜಾಂದಿಗರ್ ಪ್ರದೇಗಳನ್ನು ದಾಟಿ ಹಿಮಾಲಯದ ತಪ್ಪಲಿನಿ ಲದ್ದಾಖ್ ಸೇನಾ ನೆಲೆಯಲ್ಲೂ ಸಾಹಸಿಕ ಕಾರ್ಯಾಚರಣೆ ನಡೆಸಿದ್ದರು.

1962ರ ಚೀನಬಾ ಯುದ್ಧ, 1965ರ ಪಾಕಿಸ್ಥಾನಯುದ್ಧ ಹಾಗೂ 1971ರ ಪಾಕಿಸ್ತಾನದ ವಿರುದ್ಧ ಸಮರ ಸೇನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅನೇಕ ಮೆಡಲ್‌ಗಳಿಂದ ಪುರಸ್ಕೃತರಾದರು. 1975 ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿದ ನಂತರ ಧರ್ಮಿಕ ಸೇವಾರಂಗದಲ್ಲಿ ತೊಡಗಿಸಿಕೊಂಡಿದ್ದರು.

ಮೂಳೂರಿನ ಮಸೀದಿಯ ಆಡಳಿತಗಾರನಾಗಿ ಅನೇಕ ಬಾರಿ ಕಾರ್ಯನಿರ್ವಹಿಸಿದ್ದು, ಮೂರು ಭಾರಿ ಮದ್ರಸದ ಹಾಗೂ ಒಂದು ಭಾರಿ ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಕೊಡುಗೈ ದಾನಿಯೂ ಆಗಿದ್ದ ಇವರು ತಂದೆಯ ಹೆಸರಿನಲ್ಲಿ ಮುಹಮ್ಮದ್ ಶಾಬಾನ್ ಟ್ರಸ್ಟ್ ಸ್ಥಾಪಿಸಿ ಅಸಕ್ತ ಕುಟುಂಬಗಳಿಗೆ ಧನಸಹಾಯ ನೀಡುತಿದ್ದರು.

ಅಲ್‌ಖಮರ್ ವೆಲ್‌ಫೇರ್ ಅಸೋಸಿಯೇಶನ್ ಅಲ್‌ಕೋಬರ್ ಮತ್ತು ದುಬೈ ಪ್ರತಿನಿಧಿಯಾಗಿ,  ಹಲವು ವರ್ಷಗಳ ಕಾಲ ಮಳೂರು ಜುಮ್ಮಾ ಮಸೀದಿಯ ಆಡಳಿತ ಮೊಕ್ತೇಸರರಾಗಿ, ಮಾಜಿ ಅಧ್ಯಕ್ಷರಾಗಿ, ಉಡುಪಿ ಜಿಲ್ಲಾ ಸಂಯುಕ್ತ ಜಮಾಅತಿನ ಮಾಜಿ ಅಧ್ಯಕ್ಷರಾಗಿದ್ದರು. ಸುನ್ನೀ ಸಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಅಲ್‌ಇಹ್ಸಾನ್ ಎಜುಕೇಶನ್ ಸೆಂಟರ್‌ನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು.

Advertisement

ಪತ್ನಿ, ಗಂಡು ಮಕ್ಕಳನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next